ಜಿಲ್ಲಾಡಳಿತ ಸಂಪೂರ್ಣ ಕುಸಿತ ಕಂಡಿದೆ : ಬಿ.ಸಿ.ನಾಗೇಶ್

ತಿಪಟೂರು :

     ಒಂದು ವರ್ಷವಾದರು ಡಿ.ಸಿ.ಎಂ, ಸಿ.ಇ.ಓ ಮತ್ತು ಜಿಲ್ಲಾಧಿಕಾರಿಗಳು ಸೌಜನ್ಯಕ್ಕಾದರು ಒಂದು ಶಾಸಕರ ಸಭೆಯನ್ನು ಸಭೆಯನ್ನು ನಡೆಸಿಲ್ಲ ಇಂತವರಿಗೆ ಜಿಲ್ಲೆಯ ಅಭಿವೃದ್ಧಿಯ ಜ್ಞಾನ ಎಲ್ಲಿಂದ ಬರಬೇಕೆಂದು ಜಿಲ್ಲಾಡಳಿತದ ವಿರುದ್ದ ಶಾಸಕ ಬಿ.ಸಿ.ನಾಗೇಶ್ ಕಿಡಿಕಾರಿದರು.

     ನಗರದ ತಮ್ಮ ಗೃಹಕಛೇರಿಯಲ್ಲಿ ಕರೆದಿದ್ದ ಪತ್ರಿಕಾಘೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯದ ಆಡಳಿತದಲ್ಲಿ ಹೇಗೆ ಎಲ್ಲವೂ ಸರಿಇಲ್ಲವೋ ಅದೇರಿತಿ ನಮ್ಮ ತುಮಕೂರು ಜಿಲ್ಲೆಯೂ ಸಹ ಹೊರತಾಗದೇ ಸಂಪೂರ್ಣವಾಗಿ ಆಡಳಿತ ವೈಫಲ್ಯವನ್ನು ಕಾಣುತ್ತಿದ್ದು ಅಭಿವೃದ್ಧಿಯು ಗಗನ ಕುಸುಮವಾಗಿದೆ ಎಂದ ಅವರು ಸ್ವತಃ ಉಪಮುಖ್ಯಮಂತ್ರಿಗಳು ಈ ಕ್ಷೇತ್ರದವರು ಎಂದರೆ ನಮ್ಮ ಜಿಲ್ಲೆಯ ಅಭಿವೃದ್ಧಿ ಯಾವ ಮಟ್ಟದಲ್ಲಿರಬೇಕಾಗಿತ್ತು ಆದರೆ ಅವರ ಬೇಜಾವಾಬ್ದಾರಿ ತನದಿಂದಲೇ ಜಿಲ್ಲೆಯು ಅದೋಗತಿಯತ್ತಸಾಗುತ್ತಿದೆ.

      ಇವೆಲ್ಲವುಗಳಿಗಿಂತ ಮುಖ್ಯವಾಗಿ ಕೆಲವು ಟಿ.ವಿ ಮತ್ತು ಪತ್ರಿಕಾಮಾಧ್ಯಮದಲ್ಲಿ ವೇಸ್ಟ್ ಶಾಸಕರು ಎಂಬ ಅಡಿಬರದಲ್ಲಿ ಶಾಸಕರ ಅನುದಾನ 2 ಕೋಟಿಯನ್ನು ಅನುಧಾನವನ್ನು ಬಳಕೆಮಾಡಿಕೊಂಡಿಲ್ಲೆವೆಂದು ಬಿತ್ತರಿಸಿರುತ್ತಾರೆ ಇದು ಶುದ್ದ ಹಸೀಸುಳ್ಳೆಂದು ಆರೋಪಿಸಿದ ಅವರು ತಾವು ಮಾಡಿರುವ ಕಾಮಗಾರಿಗಳ ವಿವರವನ್ನು ಈ ಸಂದರ್ಭದಲ್ಲಿ ಬಿಡುಗಡೆಮಾಡಿ ಈ ಸಾಲಿನಲ್ಲಿ ನನ್ನ ಕ್ಷೇತ್ರಾಭಿವೃದ್ಧಿ ಅನುಧಾನದಲ್ಲಿ ಕೇವಲ 70 ಲಕ್ಷ ಹಣವಿದ್ದು ಅದನ್ನು ಬಳಕೆಮಾಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದು ಅದನ್ನು ಖರ್ಚುಮಾಡುವ ಸಲುವಾಗಿ ಅದಕ್ಕೆ ಸಂಬಂಧಿಸಿದ ಕಾಮಗಾರಿ ವರದಿಯನ್ನು ಸಲ್ಲಿಸಿದ್ದು ಇನ್ನೂ ಖರ್ಚುಮಾಡಿಲ್ಲವೆಂದರೆ ಬಿಡುಗಡೆಮಾಡವಂತೆ ಅದನ್ನು ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವುದಾಗಿ ತಿಳಿಸಿದರು.

      ಮುಖ್ಯ ಮಂತ್ರಿಯೇ ಸುಳ್ಳು ಹೇಳುತ್ತಿದ್ದಾರೋ ಇಲ್ಲ ಅವರಿಗೆ ಸುಳ್ಳುಮಾಹಿತಿಯನ್ನು ನೀಡಿದ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾಮಾಡಬೇಕೆಂದು ಅವರು ಶಾಸಕರ ಅನುದಾನ ಉಳಿದಿರುವ ಬಗ್ಗೆ ಜಿಲ್ಲಾಧಿಕಾರಿಗಳು ಅಥವಾ ಜಿ.ಪಂ ಸಿ.ಇ.ಓ ಇಂದ ಮಾಹಿತಿ ಪಡೆಯಬೇಕು ಅದನ್ನು ಸಂಬಂಧಿಸಿದವರಿಂದ ಯಾವುದೇ ಮಾಹಿತಿ ಪಡೆಯದೇ ಈ ರೀತಿ ತಪ್ಪುಮಾಹಿತಿಯನ್ನು ನೀಡದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

      ಇನ್ನು ಹೇಳುವುದಾದರೇ ಜಿಲ್ಲೆಯಲ್ಲಿ ತುಮಕೂರು ಮತ್ತು ತುಮಕೂರು ಗ್ರಾಮಾಂತರ ಶಾಸಕರು ಬಿಟ್ಟು ಯಾರು ಅನುದಾನವನ್ನು ಖರ್ಚುಮಾಡುತ್ತಿಲ್ಲವೆಂದಾರೆ ಡಿ.ಸಿ.ಎಂ. ಸೇರಿದಂತೆ ಯಾರು ಬಳಸಿಲ್ಲ ಎಂಬಂತಾಗಿದ್ದು ಮಾಧ್ಯಮದವರನ್ನು ಏಕೆ ಪ್ರಕಟಿಸಿಲ್ಲವೆಂದು ಪ್ರಶ್ನಿಸಿದರು.

       ಎತ್ತಿನಹೊಳೆ ಯೋಜನೆಯಬಗ್ಗೆ ಪತ್ರಕರ್ತರು ಪ್ರಶ್ನಿದ್ದಕ್ಕೆ ಉತ್ತರಿಸಿದ ಅವರು : ತಾಲ್ಲೂಕಿಗೆ ನೀರನ ಅಲೋಕೇಷನ್ ಮಾಡದ ಹೊರತು ಯಾವುದೇ ಕಾರಣಕ್ಕೂ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಅಲ್ಲಿಯವರೆಗೆ ಕೇವಲ ಸರ್ವೆ ಕಾರ್ಯವನ್ನು ಮಾಡಿಕೋಳ್ಳ ಬಹುದು ಇನ್ನು ನಮಗೆ ಕೆರಗಳನ್ನು ಸೂಚಿಸುವ ಬದಲು 1 ಟಿ.ಎಂ.ಸಿಯಷ್ಟು ನೀರನ್ನು ಬಿಟ್ಟರೆ ಮಾತ್ರ ಕಾಮಗಾರಿಯನ್ನು ನಡೆಸಲು ಸಾಧ್ಯವೆಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap