ಚಿತ್ರದುರ್ಗ : ಕುದಾಪುರದಲ್ಲಿ ರಾಜ್ಯದ ಮೊದಲ ಸೈನ್ಸ್ ಸಿಟಿ ಸ್ಥಾಪನೆ

ಚಿತ್ರದುರ್ಗ:

    ಕೋಟೆ ನಗರಿ ಎಂದೇ ಹೆಸರಾಗಿರುವ ಚಿತ್ರದುರ್ಗಕ್ಕೆ ಈಗ ಮತ್ತೊಂದು ಹೆಮ್ಮಯ ಗರಿ ದೊರಕಿದ್ದು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕುದಾಪುರ ಭಾರತೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ದೇಶದ ಗಮನ ಸೆಳೆಯುವ ಕೌಶಲಾಭಿವೃದ್ಧಿ ಕೇಂದ್ರ  ತಲೆ ಎತ್ತಲಿದೆ ಎಂದು ತಿಳಿದು ಬಂದಿದೆ .

    ಇದಕ್ಕಾಗಿ ರಾಜ್ಯ ಸರ್ಕಾರ ಸುಮಾರು 8 ಸಾವಿರ ಎಕರೆ ಭೂಮಿಯನ್ನು  ನೀಡಿದೆ, ಇದರಲ್ಲಿ ಐಐಎಸ್ ಸಿ, ಇಸ್ರೋ, ಡಿಆರ್ ಡಿಓ ಮತ್ತು ಬಿಎಆರ್ ಸಿ ಗಾಗಿ ಸಂಕೀರ್ಣಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. 

   ಬೆಂಗಳೂರು ಮೂಲದ ಐ ಡೆಕ್ ಸಂಸ್ಥೆ ಸೈನ್ಸ್ ಸಿಟಿಗಾಗಿ ಮಾಸ್ಟರ್ ಪ್ಲಾನ್ ವಿನ್ಯಾಸಗೊಳಿಸಿದ್ದು ರಾಜ್ಯ ಸರ್ಕಾರಕ್ಕೆ ನೀಡಿದೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ  ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳೆಲ್ಲರೂ ಇದಕ್ಕೆ ಅಗತ್ಯವಾಗಿರುವ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ. ಐಟಿಐ, ಡಿಪ್ಲೊಮಾ, ಇಂಜಿನಿಯರ್ ಪ್ರಾಧ್ಯಾಪಕರಿಗೂ ಇಲ್ಲಿ ತರಬೇತಿ ಸಿಗಲಿದ್ದು . ಆರು ಸ್ಮಾರ್ಟ್ ಕ್ಲಾಸ್ ರೂಂ, ಕೆಮಿಸ್ಟ್ರಿ, ಬಯಾಲಜಿ, ಫಿಸಿಕ್ಸ್ ಪ್ರಯೋಗಾಲಯಗಳು ಇನ್ನೂ ಮುಂತಾದ ಅತ್ಯಾಧುನಿಕ ಸೌಲಭ್ಯ ಇಲ್ಲಿರಲಿವೆ ಎಂದು ಸಂಸ್ಥೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link