ದಾವಣಗೆರೆ :
ಎಸ್.ಎಸ್. ಮಲ್ಲಿಕಾರ್ಜುನ್‍ರವರು ಸಚಿವರಾಗಿದ್ದ ಸಂದರ್ಭದಲ್ಲಿ ದಾವಣಗೆರೆ ನಗರದ ಜನತೆಗೆ ಕುಡಿಯುವ ನೀರಿನ ಸಲುವಾಗಿ ಸುಂದರವಾದ ಕುಂದುವಾಡ ಕೆರೆ ಕಟ್ಟಿದ್ದಾರೆ. ದಾವಣಗೆರೆ ನಗರದ ಉದ್ದಗಲಕ್ಕೂ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅಭಿವೃದ್ದಿಯನ್ನು ಮಾಡಿದ್ದಾರೆ. ಇದೇ ಮಾದರಿಯ ಅಭಿವೃದ್ಧಿ ಮಾಡುವ ಸಲುವಾಗಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಹೆಚ್.ಬಿ. ಮಂಜಪ್ಪನವರನ್ನು ಗೆಲ್ಲಿಸಿದರೆ, ದಾವಣಗೆರೆ ಜಿಲ್ಲೆಯನ್ನು ಸುಂದರವಾಗಿ ಕಟ್ಟುತ್ತೇವೆಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಡಿ. ಬಸವರಾಜ ಅಭಿಪ್ರಾಯ ಪಟ್ಟರು.
ಅವರಿಂದು ಕುಂದುವಾಡ ಕೆರೆಗೆ ಕಾಂಗ್ರೆಸ್ ಕಾರ್ಯಕರ್ತರೊಡನೆ ಆಗಮಿಸಿ ವಾಯು ವಿಹಾರಕ್ಕೆ ಆಗಮಿಸಿದ್ದ ನಗರದ ಜನತೆಯಲ್ಲಿ ಮನವಿ ಮಾಡಿ ಕಾಂಗ್ರೆಸ್ ಪಕ್ಷದ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಹೆಚ್.ಬಿ. ಮಂಜಪ್ಪನವರ ಪರ ಮತಯಾಚನೆ ಮಾಡಿದರು. ಕುಂದುವಾಡ ಕೆರೆಗೆ ಆಗಮಿಸಿದ್ದ ನಾಗರಿಕರೊಡನೆ ದಾವಣಗೆರೆಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿ ಚರ್ಚಿಸಿದರು. ಇದೇ ಮಾದರಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಬಿ. ಮಂಜಪ್ಪನವರನ್ನು ಗೆಲ್ಲಿಸಬೇಕೆಂದು ಡಿ. ಬಸವರಾಜ ವಿನಂತಿಸಿದರು.
ಮತಯಾಚನೆಯಲ್ಲಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಜಯಪ್ರಕಾಶ್, ಎಸ್. ಚಂದ್ರು, ಮಹಮ್ಮದ್ ಅಲಿ, ಆಕಾಶ್, ಎಂ.ಕೆ. ಲಿಯಾಕತ್‍ಅಲಿ, ಮುರುಳಿ, ಮಾರುತಿ, ಮನೋಜ್, ಹೆಚ್. ಹರೀಶ್, ಸಂದೀಪ್, ಸುಹಾಸ್, ಸೂರಜ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
