ಗುಬ್ಬಿ
ಜಿಲ್ಲೆಯ ಸಮಗ್ರ ಅಭಿವೃಧ್ದಿಯ ಜೊತೆಗೆ ನೀರಾವರಿ ಯೋಜನೆಗಳಿಗೆ ಸಂಸದ ಜಿ.ಎಸ್.ಬಸವರಾಜು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ವತೋಮುಖ ಅಭಿವೃಧ್ದಿಗೆ ಶ್ರಮಿಸಲಿದ್ದಾರೆ ಅವರ ಗೆಲುವಿಗೆ ಸಹಕರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರನ್ನು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಅಭಿನಂದಿಸಿದರು.
ಪಟ್ಟಣದ ಅವರ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ನೀರು ಯಾರ ಮನೆಯ ಅಸ್ತಿಯಲ್ಲ ಅದು ಸಾರ್ವಜನಿಕರ ಸ್ವತ್ತು ನೀರು ಬಿಡುವುದಿಲ್ಲ ಸಂಸದರು ನೀರು ಬಿಡಿಸಿಕೊಳ್ಳಿ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಚಿವ ಶ್ರೀನಿವಾಸ್ ಅವರು ಈ ತಾಲೂಕಿನ ಶಾಸಕರು ಎಂಬುದನ್ನು ಮರೆತಿದ್ದಾರೆ ಚುನಾವಣೆಯಲ್ಲಿ ದೇವೆಗೌಡರನ್ನು ಗೆಲ್ಲಿಸಿಕೊಂಡು ಬರುತ್ತೇನೆ ಇಲ್ಲದಿದ್ದರೆ ರಾಜಿನಾಮೆ ಕೊಡುತ್ತೇನೆ ಎಂದು ಹೇಳಿದ್ದರು ಅವರಿಗೆ ನೈತಿಕತೆ ಇದ್ದರೆ ರಾಜಿನಾಮೆ ನೀಡಲಿ ಎಂದು ತಿಳಿಸಿದರು.
ಇಡಿ ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದು ಎಲ್ಲಾ ಸಮುದಾಯಗಳು ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ್ದಾರೆ ಹಾಗಾಗಿ ದೇಶದಲ್ಲಿ ಹೆಚ್ಚು ಸ್ಥಾನ ಬಂದಿದ್ದು ರಾಜ್ಯದಲ್ಲಿಯೂ ನಿರೀಕ್ಷೆಗೂ ಮೀರಿ ನಮ್ಮ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಜಿಲ್ಲೆಗೆ ಎಚ್.ಎ.ಎಲ್ ಘಟಕ ತಂದಿದ್ದು. ಅಲ್ಲಿ ಸ್ಥಳಿಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವುದು ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಕೈಗಾರಿಕಾ ವಲಯ ನಿರ್ಮಾಣ ಮಾಡಿ ನಿರುದ್ಯೋಗ ಸಮಸ್ಯೆ ನಿವಾರಣೆ ಹಾಗೂ ನೀರಾವರಿ ಯೋಜನೆಗಳನ್ನು ಜಾರಿಗೆ ತರುವಂತಹ ಮಹತ್ವದ ಕೆಲಸವನ್ನು ನಮ್ಮ ಸಂಸದರು ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದಿಂದ ಹೆಚ್ಚು ಅನುದಾನವನ್ನು ತಂದು ಇಡಿ ಜಿಲ್ಲೆಯ ಸಮಗ್ರವಾಗಿ ಅಭಿವೃದ್ದಿ ಮಾಡಲು ಮುಂದಾಗುತ್ತಾರೆ.
ತಾಲೂಕಿನ ಹಾಗಲವಾಡಿ ಸೇರಿದಂತೆ ಹಲವು ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆಯನ್ನು ಶೀಘ್ರವಾಗಿ ಮಾಡಲು ಒತ್ತಡ ತಂದು ಕೆಲಸ ಮಾಡಲು ಸಂಸದರು ಕಾರ್ಯ ಯೋಜನೆ ರೂಪಿಸಿದ್ದಾರೆ ಎಂದು ತಿಳಿಸಿದರು.
ಎತ್ತಿನ ಹೊಳೆ ಯೋಜನೆ ನಮ್ಮ ತಾಲ್ಲೂಕಿನಲ್ಲಿಯೆ ಹೋಗುತ್ತಿರುವುದರಿಂದ 1.5 ಟಿ.ಎಂ.ಸಿ ನೀರನ್ನು ಕುಡಿಯುವ ನೀರಿಗೆ ಬಿಡಿಸಿಕೊಳ್ಳಲು ಹೋರಾಟ ಮಾಡುವುದಾಗಿ ತಿಳಿಸಿದರು. ನಾನು ಪಕ್ಷಕ್ಕೆ ಬಂದಾಗ ಮುಂದಿನ ದಿನದಲ್ಲಿ ಉತ್ತಮ ಸ್ಥಾನ ಮಾನವನ್ನು ನೀಡುವುದಾಗಿ ಪಕ್ಷವು ತಿಳಿಸಿದ್ದು ಯಾವುದೇ ಹುದ್ದೆ ನೀಡಿದರು ಸಹ ಪಕ್ಷಕ್ಕಾಗಿ ದುಡಿಯುವಂತಹ ಕೆಲಸವನ್ನು ಮಾಡಲಾಗುತ್ತದೆ ತಾಲೂಕಿನಲ್ಲಿ ಸಾಕಷ್ಟು ಅಭಿವೃಧ್ದಿ ಕಾರ್ಯಗಳು ಮತ್ತು ಹೊಸ ಯೋಜನೆಗಳನ್ನು ಜಾರಿಗೆ ತಂದು ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ದಿಗೆ ಕೆಲಸ ಮಾಡಲು ನಮ್ಮ ಪಕ್ಷ ಬದ್ದವಾಗಿದೆ ಎಂದು ತಿಳಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಬಿಜಿಪಿ ರೈತ ಮೋರ್ಚಾದ ಸಿದ್ದರಾಮಣ್ಣ ಮುಖಂಡರಾದ ಕರಿಯಣ್ಣ, ಚೇತನ್, ಲೋಕೇಶ್, ಪ್ರಸಾದ್, ಮಡೇನಹಳ್ಳಿ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.