ಸರ್ಕಾರಿ ಕೆಲಸದಿಂದ ಜಾಧವ್ ಅಮಾನತ್ತಗಿದ್ದರು : ಡಾ.ಜಿ. ಪರಮೇಶ್ವರ

ಕಲಬುರಗಿ

    ಮಾಜಿ ಶಾಸಕ ಡಾ.ಉಮೇಶ್‌ ಜಾಧವ್‌ ಸರ್ಕಾರಿ ನೌಕರನಾಗಿದ್ದ ವೇಳೆ ಅಮಾನತ್ತಾಗಿದ್ದವರು ಇಂಥವರನ್ನು ಕ್ಷೇತ್ರದ ಜನರು ಬೆಂಬಲಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.

      ಚಿಂಚೋಳಿ ಉಪಚುನಾವಣೆ ಚಂದನಕೇರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಡಾ. ಜಾಧವ್ ಸರ್ಕಾರಿ ನೌಕರನಾಗಿದ್ದ ವೇಳೆ ತಪ್ಪು ಮಾಡಿ ಅಮಾನತ್ತಾಗಿದ್ದವರು. ಆತನ ಮೇಲೆ ಇಲಾಖಾ ವಿಚಾರಣೆ ಬಾಕಿಯಿದೆ ಎಂಬ ಮಾಹಿತಿ ಇದೆ. ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ದ್ರೋಹ ಬಗೆದವರನ್ನು ಜನರು ಹತ್ತಿರವೂ ಸೇರಿಸುವುದಿಲ್ಲ ಎಂದು ಪರೋಕ್ಷವಾಗಿ ಜನಪ್ರತಿನಿಧಿಯಾಗಲು ಯೋಗ್ಯರಲ್ಲ ಎಂದು ಅವರು ಟೀಕಿಸಿದರು.

      ಕಾಂಗ್ರಸ್ ಪಕ್ಷದಲ್ಲಿದ್ದ ಜಾಧವ್ ಮಾರನೇ ದಿನವೇ ಮುಂಬೈಯಲ್ಲಿ ಬಿಜೆಪಿಯವರ ಜೊತೆ ಪಂಚತಾರ ಹೊಟೇಲ್ ನಲ್ಲಿ ಕಾಣಿಸಿಕೊಂಡರು.‌ ಜಾಧವ್ ಬಿಜೆಪಿಯವರಿಂದ 50 ಕೋಟಿ ಹಣ ಪಡೆದು ಮಾರಾಟವಾಗಿದ್ದಾರೆ ಎಂದು ಚಿಂಚೋಳಿ ಜನ ಮಾತನಾಡುತ್ತಿದ್ದಾರೆ. ಜನರ ನಂಬಿಕೆ ಹಾಳು ಮಾಡಿದ್ದಲ್ಲದೇ ಈಗ ಮಗನ ಪರ ಮತಕೇಳಲು ಬಂದಿದ್ದಾರೆ. ಮಗನನ್ನೂ ಸಹ ಮಾರಾಟ ಮಾಡಬಹುದು ಎನ್ನುವ ಯೋಜನೆ ಮುಂದೆ ಅವರಿಗೆ ಇರಬಹುದು ಎಂಬ ಅನುಮಾನವನ್ನು ಉಪ ಮುಖ್ಯಮಂತ್ರಿ ಪರಮೇಶ್ವರ್ ವ್ಯಕ್ತಪಡಿಸಿದರು.

       ಜನಹಿತ , ಕ್ಷೇತ್ರದ ಹಿತವನ್ನು ಮರೆತವರಿಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ. ಕ್ಷೇತ್ರದಲ್ಲಿ ಮತ್ತೊಂದು ಉಪ ಚುನಾವಣೆಗೆ ಕಾರಣವಾಗಿರುವ ಜಾಧವ್ ಗೆ ಜನತಯೇ ಸೂಕ್ತ ಉತ್ತರನ್ನು ನೀಡಬೇಕು ಎಂದು ಅವರು ಮನವಿ ಮಾಡಿದರು.

       ವೇದಿಕೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ರಾಜಶೇಖರ್ ಪಾಟೀಲ್, ರಹೀಂಖಾನ್, ಕೆಪಿಸಿಸಿ ಕಾರ್ಯಾದ್ಯಕ್ಷರಾದ ಈಶ್ವರ ಖಂಡ್ರೆ, ಶಾಸಕರಾದ ಎಚ್ ಟಿ ಸೋಮಶೇಖರ್, ಕೈಲಾಶ ನಾಥ ಪಾಟೀಲ್ ಜಿಲ್ಲಾ ಕಾಂಗ್ರೇಸ್ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ್, ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಮತ್ತಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap