ಶಿಗ್ಗಾವಿ :
ತಾಲೂಕಿನ ಬನ್ನೂರ ಗ್ರಾಮದ ಸ.ಹಿ.ಪ್ರಾ. ಶಾಲೆಯನ್ನು ಭಾವೈಕ್ಯತೆಯ ಕವಿ ಸಂತ ಶಿಶುನಾಳ ಷರೀಫರಿಂದ ಕ್ರಿ.ಶ.1878 ರಲ್ಲಿ ಪ್ರಾರಂಭವಾಗಿದ್ದು, ಈ ಶೈಕ್ಷಣಿಕ ವರ್ಷಕ್ಕೆ 140 ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ “ಶತಮಾನೊತ್ತರ ಬೆಳ್ಳಿ ಮಹೋತ್ಸವ ಹಾಗೂ ಗುರು ವಂದನಾ ಕಾರ್ಯಕ್ರಮವನ್ನು ಬರುವ ಜನೇವರಿಯಲ್ಲಿ ಮಾಡಲು ಎಲ್ಲ ಹಳೆ ವಿದ್ಯಾರ್ಥಿಗಳು ತೀರ್ಮಾನಿಸಿದ್ದೇವೆ ಎಂದು ಬನ್ನೂರಿನ ಭರತ ಸೇವಾ ಸಂಸ್ಥೆ ಅದ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ಸೋಮವಾರ ತಾಲೂಕಿನ ಬನ್ನೂರ ಗ್ರಾಮದ ಸ.ಹಿ.ಪ್ರಾ.ಶಾಲೆಯಲ್ಲಿ ಊರಿನ ಗಣ್ಯರು, ಹಳೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಸಮ್ಮುಖದಲ್ಲಿ ಪ್ರಾಥಮಿಕ ಶಾಲೆಯ ಶೈಕ್ಷಣಿಕ ಹಾಗೂ ಭೌತಿಕ ಸರ್ವತೊಮುಖ ಅಭಿವೃದ್ಧಿಗಾಗಿ “ಜ್ಞಾನ ಸಂಗಮ” ಎಂಬ ಹಳೆ ವಿದ್ಯಾರ್ಥಿಗಳ 33 ಜನ ಪದಾಧಿಕಾರಿಗಳನ್ನು ಒಳಗೊಂಡ ಸಂಘವನ್ನು ಆಯ್ಕೆ ಮಾಡಿ ಮಾತನಾಡಿದ ಅವರು ಸಂಘದ ಸಲಹೆಗಾಗಿ ಹಿರಿಯರನ್ನೊಳಗೊಂಡ 12 ಜನರ ಸಲಹಾ ಸಮಿತಿ ರಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಪಾಧಿಕಾರಿಗಳ ವಿವರ : ಸಂಘದ ಗೌರವಾಧ್ಯಕ್ಷರಾಗಿ ಶ್ರೀಕಾಂತ ಬ ದುಂಡಿಗೌಡ್ರ, ಶಂಕರಗೌಡ ಪೋಲಿಸಗೌಡ್ರ, ಅಧ್ಯಕ್ಷರಾಗಿ ಅರುಣ ಫ ಹುಡೇದಗೌಡ್ರ, ಉಪಾಧ್ಯಕ್ಷರಾಗಿ ಕುಮಾರಸ್ವಾಮಿ ನಿ ಚಿಕ್ಕಮಠ, ರೇವಣಶಿದ್ದಯ್ಯ ಗಂ ಹಿರೇಮಠ, ರುದ್ರಮುನಿ ಬ ಅಗಡಿ, ಖಜಾಂಚಿಯಾಗಿ ಕೆ.ಸಿ.ಶಿದ್ದಣ್ಣವರ, ಪ್ರಧಾನ ಕಾರ್ಯದರ್ಶಿಯಾಗಿ ಬ್ರಹ್ಮಾನಂದ ಪೂ ಬಡಿಗೇರ, ಸಹ ಕಾರ್ಯದರ್ಶಿಯಾಗಿ ಪ್ರಸನ್ನಕುಮಾರ ಟಾ ಪಾಟೀಲ, ಸಂಘಟನಾ ಕಾರ್ಯದರ್ಶಿಯಾಗಿ ಮಲ್ಲನಗೌಡ ಫ ಹೊಸಗೌಡ್ರ ಮತ್ತು 23 ಜನ ನಿರ್ದೇಶಕರನೊಳಗೊಂಡ ಸಮಿತಿ ರಚಿಸಲಾಗಿದೆ.
ಇದೇ ಸಂದಂರ್ಭದಲ್ಲಿ ಹಿರಿಯರಾದ, ಶಂಭನಗೌಡ ಪಾಟೀಲ, ಫಕ್ಕೀರಗೌಡ ಹುಡೇದಗೌಡ್ರ, ವೀರನಗೌಡ ಹೊನ್ನಾಗೌಡ್ರ, ಮಾದೇವಪ್ಪ ಶಿದ್ದಣ್ಣವರ, ಟಿ.ವ್ಹಿ.ಪಾಟೀಲ, ಮೌಲಾಲಿ ಶೇತಸನದಿ, ಶಂಕರಗೌಡ ಪೋಲಿಸಗೌಡ್ರ, ಮುದ್ದಣ್ಣ ಪೋಲಿಸಗೌಡ್ರ, ವೀರನಗೌಡ ಪೋಲಿಸಗೌಡ್ರ ಹಾಗೂ ಊರಿನ ಯುವಕರು, ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
