ಬಳ್ಳಾರಿ
ಕೇಂದ್ರ ಸರ್ಕಾರದ ಈ ಯೋಜನೆಯನ್ನು ಬ್ಯಾಂಕುಗಳು ಎಮ್.ಎಸ್.ಎಮ್.ಇ ಘಟಕಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ ಜಿಲ್ಲೆಯ ಜನರಿಗೆ ಉದ್ಯೋಗವಕಾಶ ಸೃಷ್ಟಿಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಹೇಳಿದರು.
ನಗರದ ಜಿಲ್ಲಾಕ್ರೀಡಾಂಗಣದ ಹತ್ತಿರದ ಈಜುಕೋಳ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಂಎಸ್‍ಎಂಇ ಸಹಾಯ ಮತ್ತು ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದುರ
ಸಾಮಾನ್ಯ ಪ್ರಧಾನ ಮಂತ್ರಿಗಳು ನವೆಂಬರ್ 2ರಂದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಹಾಯ ಮತ್ತು ಸಂಪರ್ಕ ಜೊತೆಗೆ ಎಮ್.ಎಸ್.ಎಮ್.ಈ ಗಳ ಪರಿಸರ ಉತ್ತಮಪಡಿಸಲಿಕ್ಕೆ ಕಾರ್ಯಕ್ರಮವನ್ನು ಘೋಷಿಸಲಾಗಿದ್ದು, ದೇಶದ 100 ಜಿಲ್ಲೆಗಳನ್ನು ವಿವಿಧ ಘಟಕಗಳೆಂದು ಗುರುತಿಸಿರುತ್ತಾರೆ. ಇದರಲ್ಲಿ ಬಳ್ಳಾರಿ ಕೂಡ ಒಂದಾಗಿದ್ದು, ಸಿದ್ದ ಉಡುಪಿಗಾಗಿ ನಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.
ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸ ನಾವೆಲ್ಲರು ಮಾಡಬೇಕು. ಈ ಮೂಲಕ ಇದರ ಉದ್ದೇಶ ಈಡೇರಿಸಬೇಕು ಎಂದರು.
ಈ ಸಮಯದಲ್ಲಿ ಪೆಬೇಷನರಿ ಐ.ಎ.ಎಸ್ ಅಧಿಕಾರಿ ನಂದಿನಿ ಕೆ.ಆರ್. ಹಾಗೂ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಛೇರಿ ಪ್ರಾದೇಶಿಕ ವ್ಯವಸ್ಥಾಪಕ ಎನ್.ಕೃಷ್ಣಪ್ಪ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಜಿ.ಮಂಜುನಾಥ ಗೌಡ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗೋಪಾಲ್ ಕೃಷ್ಣ ಡಿ.ಎಸ್. ಮತ್ತಿತರರು ಇದ್ದರು.
ಇತರ ಇಲಾಖೆಗಳಾದ ಜಿ.ಎಸ್.ಟಿ, ಕೆ.ವಿ.ಐ.ಸಿ, ಕೆ.ವಿ.ಐ.ಬಿ ಮತ್ತು ಸಿಂಡ್ ಆರ್ ಸೆಟಿ, ಇಪಿ.ಎ.ಒ, ಇ.ಎಸ್.ಐ.ಸಿ ಹಾಗೂ ಸುಮಾರು 20 ಕ್ಕೂ ಹೆಚ್ಚಿನ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸುಮಾರು 200 ಉದ್ದಿಮೆದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮುಂದಿನ ಕಾರ್ಯಕ್ರಮದ ಶಿಬಿರಗಳು ಪ್ರತಿ ವಾರದ ಮಂಗಳವಾರ ಹಾಗೂ ಶುಕ್ರವಾರ ಜಿಲ್ಲಾದ್ಯಂತ ನಡೆಯುತ್ತವೆ. ನ.20ರಂದು ಇದೇ ರೀತಿಯ ಶಿಬಿರ ಇದೇ ಸ್ಥಳದಲ್ಲಿ ನಡೆಸಲಾಗುತ್ತಿದ್ದು,ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ