ಹಾವೇರಿ:
ಸರ್ಕಾರಿ ಕಚೇರಿ ಸಮಾಜದಲ್ಲಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಭ್ರಷ್ಟಾಚಾರ ನಿಗ್ರಹದಳದೊಂದಿಗೆ ಕೈಜೋಡಿಸಿ ಎಂದು ಹಾವೇರಿಯ ಭ್ರಷ್ಟಾಚಾರ ನಿಗ್ರದಳ ಪೊಲೀಸ್ ಉಪ ಅಧೀಕ್ಷಕರಾದ ಕೆ.ವಿ.ಪ್ರಹ್ಲಾದರಾವ್ ಅವರು ಕರೆ ನೀಡಿದರ
ಶುಕ್ರವಾರ ಸಂಜೆ ನಗರದ ಕೆ.ಇ.ಬಿ.ಸಮುದಾಯ ಭವನದಲ್ಲಿ ಹಾವೇರಿಯ ಭ್ರಷ್ಟಾಚಾರ ನಿಗ್ರದಳ ಪೊಲೀಸ್ ಠಾಣೆ ವತಿಯಿಂದ ನಗರದ ಆಯೋಜಿಸಲಾದ ಭ್ರಷ್ಟಾಚಾರ ತಡೆ ಜಾಗೃತಿ ಸಪ್ತಾಹದ ಅಂಗವಾಗಿ ಕಟ್ಟಡ ಕಾರ್ಮಿಕರಿಗೆ ಹಾಗೂ ಟ್ಯಾಕ್ಸಿ, ಆಟೋ ಚಾಲಕರಿಗಾಗಿ ಆಯೋಜಿಸಿದ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಯಾವುದೇ ಸರ್ಕಾರಿ ಕಚೇರಿಗಳಲ್ಲಿ ನಿಮ್ಮ ಕೆಲಸಕ್ಕೆ ಅಧಿಕಾರಿಗಳು ಅಥವಾ ಸಿಬ್ಬಂದಿಯವರು ಲಂಚ ರೂಪವಾಗಿ ಹಣ, ವಸ್ತು ಅಥವಾ ಇತರ ಸೇವೆಯನ್ನು ಬಯಸಿದರೆ ಅದು ಕಾನೂನಿನ ವಿರುದ್ಧವಾಗಿದೆ. ನ್ಯಾಯಯುತ ಸಂಪಾದನೆಗಿಂತ ಅಧಿಕವಾದ ಅಕ್ರಮ ಆಸ್ತಿ ಹೊಂದಿದರೆ ಅದು ಭ್ರಷ್ಟಾಚಾರ ವ್ಯಾಪ್ತಿಗೆ ಒಳಪಡುತ್ತದೆ. ಇಂತಹ ಪ್ರಕರಣಗಳು ಕಂಡುಬಂದರೆ ಅಥವಾ ತಮಗೆ ನೀಡುವ ಸೌಲಭ್ಯಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟರೆ ಲಿಖಿತ ದೂರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಲು ಮನವಿ ಮಾಡಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಅವರು ಲಂಚಪಡೆಯುವು ಅಪರಾಧವಾದರೆ ಲಂಚ ಕೊಡುವುದು ಅಪರಾಧವಾಗಿದೆ. ಭ್ರಷ್ಟಾಚಾರ ತೊಡೆದುಹಾಕಲು ಸಾರ್ವಜನಿಕರ ಪಾತ್ರ ಪ್ರಮುಖವಾಗಿದೆ. ಭ್ರಷ್ಟಾಚಾರ ಪ್ರಕರಣಗಳ ಕುರಿತು ದೂರು ಸಲ್ಲಿಸುವಾಗ ಪೂರಕ ದಾಖಲೆಗಳು, ಸಾಕ್ಷ್ಯಗಳು ಪ್ರಮುಖಪಾತ್ರವಹಿಸುತ್ತವೆ. ಆದರೆ ಸರ್ಕಾರಿ ನೌಕರರ ವಿರುದ್ಧ ದುರುದ್ದೇಶಪೂರ್ವಕ ಸುಳ್ಳು ಆರೋಪ ಮಾಡುವುದು ಶಿಕ್ಷಾರ್ಹವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಕಾಂತ ಪಾಟೀಲ ಅವರು ಮಾತನಾಡಿ, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೊಂದಾಯಿತ ಫಲಾನುಭವಿಗಳಿಗೆ ದೊರಕುವ ಪಿಂಚಣಿ ಸೌಲಭ್ಯ, ಅಂಗವಿಕಲ ಪಿಂಚಣಿ, ಮನೆ ನಿರ್ಮಾಣಕ್ಕೆ ಸಹಾಯಧನ, ಹೆಸರಿಗೆ ಸೌಲಭ್ಯ, ಶೈಕ್ಷಣಿಕ ಧನಸಹಾಯ, ಶ್ರಮ ಸಾಮಥ್ರ್ಯ ಯೋಜನೆಯಡಿ ವೃತ್ತಿ ಕೌಶಲ್ಯ ಸೌಲಭ್ಯಗಳು, ಅಪಘತಾ, ವೈದ್ಯಕೀಯ ವಿವಿಧ ಅನಾರೋಗ್ಯ ಪೀಡಿತರ ಸೌಲಭ್ಯಗಳು, ಅನಿಲ ಭಾಗ್ಯ ಸಂಪರ್ಕ, ಕಾರ್ಮಿಕರಿಗೆ ಮದುವೆ ಸಹಾಯಧನ ಸಹಾಯಧನ, ಬಸ್ ಪಾಸ್ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳು ಹಾಗೂ ಅರ್ಹತೆಗಳ ಕುರಿತಂತೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ದಾವಲ್ಸಾಬ್ ಹಿರೇಮುಗದೂರ ಅವರು ಮಾತನಾಡಿ, ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಮಿಕ ಸಂಘದ ಸದಸ್ಯರು, ಎಸಿಬಿಯ ಸಹಾಯ ಪಡೆದು ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಿಸುವಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಾರ್ತಾಧಿಕಾರಿ ಬಿ.ಆರ್.ರಂಗನಾಥ್ ಅವರು ಭ್ರಷ್ಟಾಚಾರ ತಡೆ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಎಸಿಬಿಯ ಎಸ್.ಎನ್.ಕಡಕೋಳ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ