ಜೋಳದ ಹೊಲದಲ್ಲಿ ಮಹಿಳೆ ಮೇಲೆ ಅತ್ಯಾಚಾರ…!!

ಬೆಂಗಳೂರು

       ಜೋಳದ ಹೊಲದಲ್ಲಿ ಮೂಕ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ದಾರುಣ ಘಟನೆ ನಗರದ ಹೊರವಲಯದ ನೆಲಮಂಗಲದ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

        ತ್ಯಾಮಗೊಂಡ್ಲುವಿನ ದೊಡ್ಡಬೆಲೆಯ ಗಂಗಮ್ಮ(48)ಎಂದು ಅತ್ಯಾಚಾರ ಎಸಗಿ ಕೊಲೆಯಾದವರನ್ನು ಗುರುತಿಸಲಾಗಿದೆ ,ಮೂಕಿಯಾಗಿದ್ದ ಗಂಗಮ್ಮ ಅವರನ್ನು ದುಷ್ಕರ್ಮಿಗಳು ದೊಡ್ಡಬೆಲೆಯ ರೈಲ್ವೆ ನಿಲ್ದಾಣದ ಬಳಿಯ ಜೋಳದ ಹೊಲದಲ್ಲಿ ಅತ್ಯಾಚಾರ ಎಸಗಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದೆ.

      ಹೊಲಕ್ಕೆ ಸೋಮವಾರ ಸಂಜೆ ಹೋದ ರೈತರೊಬ್ಬರು ನಗ್ನ ಸ್ಥಿತಿಯಲ್ಲಿದ್ದ ಮೃತದೇಹವನ್ನು ನೋಡಿ ಪೆÇಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ ಸ್ಥಳಕ್ಕೆ ಧಾವಿಸಿದ ತ್ಯಾಮಗೊಂಡ್ಲು ಪೊಲೀಸರು ಪರಿಶೀಲನೆ ನಡೆಸಿದಾಗ ಮೈಮೇಲೆ ಗಾಯದ ಗುರುತುಗಳು ಕಂಡುಬಂದಿದೆ.

      ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಶಂಕಿಸಿದ್ದಾರೆ.ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link