ಹಾವೇರಿ :
ಪ್ರಪಂಚದಲ್ಲಿ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ ಭಾರತ ಸಮೃದ್ಧ ರಾಷ್ಟ್ರ ಜಾತ್ಯಾತೀತ ಸಮಾಜ ಯುವ ಜನರಿಂದ ಮಾತ್ರ ಸಾಧ್ಯ ಯುವಜನತೆ ಸಮಾಜದಲ್ಲಿನ ಜನರ ಕಷ್ಟಗಳಿಗೆ ಸಹಕರಿಸಬೇಕು. ಯುವಜನರ ಜೀವನದಲ್ಲಿ ಸಮುದ್ರದ ಅಲೆಗಳಂತೆ ಕಷ್ಟ ಸುಖಗಳು ಹರಿದು ಬರುತ್ತವೆ ಎಲ್ಲವನ್ನು ನಿಭಾಯಿಸುವ ಶಕ್ತಿ ಒಗ್ಗೂಡಿಸಿಕ್ಕೊಳ್ಳಬೇಕು ಎಂದು ಹುಕ್ಕೇರಿಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಹೇಳಿದರು.
ಹೆಚ್.ಎಮ್.ಎಸ್. ಕಬ್ಬಡ್ಡಿ ಕ್ಲಬ್ ಹಾಗೂ ಹಾವೇರಿ ಜಿಲ್ಲಾ ಅಮ್ಯೂಚಲ್ ಕಬ್ಬಡ್ಡಿ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮುಕ್ತ ಗ್ರಾಮೀಣ ಮಟ್ಟದ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ,ಕಾರ್ಯಕ್ರಮ ಸಾನಿಧ್ಯವಹಿಸಿ ಅವರು ಮಾತನಾಡಿದರು.ಸಾಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳುವಲ್ಲಿ ಕ್ರೀಡೆ ಹೆಚ್ಚು ಸಹಕಾರಿಯಾಗಿದೆ ದೈಹಿಕ ಹಾಗೂ ಮಾನಸಿಕ ಸದೃಡತೆ ಹಿತದೃಷ್ಠಿಯಿಂದ ಯುವ ಪಿಳಿಗೆ ಇಂತಹ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ಚೈತನ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಎಸ್.ಹೆಚ್.ಮಜೀದ್ ಮಾತನಾಡಿ ಹುಟ್ಟಿದ ಪ್ರತಿಯೊಬ್ಬರೂ ಸಧೃಢವಾಗಿ ಮತ್ತು ಆರೋಗ್ಯಯುತವಾಗಿ ಬೆಳೆಯಬೇಕಾದರೆ ಅವರಲ್ಲಿ ಕ್ರೀಢಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಸ್ವಾಸ್ಥ್ಯವಾದ ಮನಸ್ಸು, ಸ್ವಸ್ಥ್ಯವಾದ ದೇಹ ಕ್ರೀಡೆಗಳಿಂದ ಮಾತ್ರ ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿನ ಪ್ರತಿಭೆಗಳನ್ನು ಗುರುತಿಸಬೇಕಾದರೆ ಇಂತಹ ಕ್ರೀಡಾ ಚಟುವಟಿಕೆಗಳು ಹೆಚ್ಚು ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ಚಂದ್ರಶೇಖರಪ್ಪ.ಗು. ದೊಡ್ಡಮನಿ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶಶಿಧರ .ಯು.ಜೆ ಟಿ.ಆರ್.ಮಲ್ಲಾಡದ ಸಿದ್ಧನಗೌಡ.ರು.ಸಿದ್ಧನಗೌಡ್ರ, ನಗಪ್ಪ.ಬಿ.ಬಣಕಾರ್, ಕರಬಸಪ್ಪ.ಬಿ.ಆನ್ವೇರಿ, ಆನಂದ ಲಮಾಣಿ, ಶ್ರೀಮತಿ ದ್ರಾಕ್ಷಾಯಣಮ್ಮ ಲಮಣಿ, ಎಸ್.ಎನ್.ಅಟವಳಗಿ, ಗುದ್ಲೇಪ್ಪಶೆಟ್ರ.ವಿ.ಕಾಳಪ್ಪನವರ ಶ್ರೀ ಚನ್ನಪ್ಪ ಚಂದ್ರಪಟ್ಟಣ, ಬಸವರಾಜ ಬಣಕಾರ, ಕುಮರ ವಾರದ, ಶ್ರೀಮತಿ ನೀಲಮ್ಮ ಜಮ್ಮಣಗಟ್ಟ, ಶ್ರೀಮತಿ ಮುರ್ದಾಅಲಿ ನದಾಫ್, ಶ್ರೀಮತಿ ಚನ್ನಮ್ಮ ಶಿರಿಯಮ್ಮನವರ, ಶ್ರೀಮತಿ ಹಿರಿಯಕ್ಕ ಬಸಣ್ಣನವರ, ಶ್ರೀಮತಿ ಸುಶಿಲಮ್ಮ ತಳವಾರ, ಶ್ರೀಮತಿ ಜಯಕ್ಕ ಕೂರಗುಂದ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ