ಹಾವೇರಿ :
ರೈತರ ಕಬ್ಬು ಬಾಕಿ ನೀಡುವಂತೆ ಹಾಗೂ ಕಬ್ಬಿನ ಬೆಳೆಗೆ ನಿಗದಿತ ಬೆಲೆ ನೀಡುವಂತೆ ಒತ್ತಾಯಿಸಿ ತಾಲೂಕಿನ ಸಂಗೂರ ಸಹಕಾರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಕಾರ್ಖಾನೆಗೆ ಬಿಗಿ ಜಡಿದು ಪ್ರತಿಭಟನೆ ಮಾಡಿದರು. ಸಂಘದ ಅಧ್ಯಕ್ಷರಾದ ರಾಜಶೇಖರ ಬೇಟಗೇರಿ ಮಾತನಾಡಿ ಕಳೆದ ಹಲವಾರು ಬಾರಿ ಮೆ||ಜಿ.ಎಂ ಶುಗರ್ಸ್ &ಎನರ್ಜಿ ಲಿ, ಅವರಿಗೆ ಮನವಿ ಮೂಲಕ ಕಬ್ಬು ಬೆಳೆಯುವ ರೈತರಿಗೆ ನ್ಯಾಯ ಒದಗಿಸಬೇಕು.
ಕಳೆದ ಬಾರಿ ಉಳಿದ ಬಾಕಿ ಹಣವನ್ನು ಒದಗಿಸಬೇಕು. ಮುಂದಿನ ಅವಧಿಗೆ ಬೆಲೆ ನಿಗದಿ ಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡಿದರೂ ಏನೂ ಪ್ರಯೋಜನೆ ಆಗಿಲ್ಲ. ಈ ವಿಚಾರವಾಗಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಕಬ್ಬು ಬೆಲೆ ನಿಗದಿಗೆ ಅವಕಾಶ ನೀಡಲು ಹೇಳಿ ಸಭೆ ಮಾಡಿ ತಾತಾಲ್ಕಿಕವಾಗಿ ನಿಗದಿ ಮಾಡಿದರೂ ಆ ಹಣವನ್ನು ಗುತ್ತಿಗೆದಾರರು ನೀಡಿವಲ್ಲಿ ವಿಳಂಬ ಧೋರಣೆ ತಾಳುತ್ತಿದ್ದಾರೆ. ಇದರಿಂದ ಬೇಸತ್ತು ರೈತರೆಲ್ಲರೂ ಸೇರಿ ಕಾರ್ಖಾನೆಗೆ ಬಿಗ ಜಡಿದು ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ ಎಂದು ರಾಜಶೇಖರ ಬೇಟಗೇರಿ ತಿಳಿಸಿದ್ದಾರೆ.