ಜಿಲ್ಲಾ ಮಟ್ಟದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ

ಹಾವೇರಿ :

      ನಗರದ ಭಾರತ ಸೇವಾದಳ ಜಿಲ್ಲಾ ಕಛೇರಿಯಲ್ಲಿ ಶೈಕ್ಷಣಿಕ ಭಾರತ ಸೇವಾದಳ ಜಿಲ್ಲಾ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನದ ಉದ್ಘಾಟನಾ ಕಾರ್ಯಕ್ರಮವನ್ನು ಕೇಂದ್ರ ಸಮಿತಿ ಸದಸ್ಯ ಬಸವಂತಪ್ಪ ಹೆಚ್ ಹುಲ್ಲತ್ತಿ ಉದ್ಘಾಟಿಸಿದರು.

       ರಾಜ್ಯ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂಬ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನವನ್ನು ಈ ವರ್ಷದಿಂದ ಜಾರಿ ಮಾಡಿದ್ದು, ಮಕ್ಕಳಿಗೆ ಸರ್ಕಾರದಿಂದ ಅನೇಕ ಉಚಿತ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಪಾಲಕರು, ಪೋಷಕರು ಈ ಸೌಲಭ್ಯಗಳನ್ನು ಪಡೆಯಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಬಸವಂತಪ್ಪ ಹೆಚ್ ಹುಲ್ಲತ್ತಿ ಸಲಹೆ ನೀಡಿದರು.

       ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ ಡಿ. ದೀವಿಗಿಹಳ್ಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಭಾರತ ಸೇವಾದಳದ ಮೂಲಕ ಮಕ್ಕಳಿಗೆ ಸರ್ಕಾರಿ ಶಾಲೆಗೆ ಸೇರಿಸಿ ಎಂಬ ಮಾಹಿತಿಯನ್ನು ತಿಳಿಸಲು ಭಾರತ ಸೇವಾದಳ ಕೇಂದ್ರ ಕಛೇರಿ ಹಾಗೂ ಸರ್ಕಾರ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಸವಲಭ್ಯಗಳಾದ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಬಿಸಿ ಊಟ, ಕ್ಷೀರಭಾಗ್ಯ, ಲೇಖನಿ ಸಾಮಗ್ರಿ, ಶ್ಯೂ, ಸಾಕ್ಸ್, ಯೋಗ ಮತ್ತು ನೈತಿಕ ಶಿಕ್ಷಣ ಬೇಸಿಗೆ ದಸರಾ ಶಿಬಿರಗಳು, ಗ್ರಂಥಾಲಯ, ಕುಡಿಯುವ ನೀರು, ಕ್ರೀಡಾ ಚಟುವಟಿಕೆ, ಪಠ್ಯೇತರ ಚಟುವಟಿಕೆಗಳಿಗೆ ಪ್ರಾಮುಖ್ಯತೆ, ಇನ್ನೂ ಅನೇಕ ಸೌಲಭ್ಯಗಳನ್ನು ಸರ್ಕಾರ ಉಚಿತವಾಗಿ ಒದಗಿಸುತ್ತಿದ್ದು, ಸಾರ್ವಜನಿಕರು ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಹೇಳಿದರು.

        ಜಿಲ್ಲಾ ಸಂಘಟಿಕ ಪ್ರಕಾಶ ಗೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಗೌರವ ಉಪಾಧ್ಯಕ್ಷ ಎಂ. ಹೆಚ್. ಚೋಟಪ್ಪನವರ, ಜಿಲ್ಲಾ ಉಪಾಧ್ಯಕ್ಷಣಿ ಶ್ರೀಮತಿ ರೇಣುಕಾ. ಬಿ. ಆಲೂರ, ಜಿಲ್ಲಾ ಕಾರ್ಯದರ್ಶಿ ವಿನಾಯಕ. ಈ. ಗಡ್ಡದ, ಜಿಲ್ಲಾ ಖಜಾಂಚಿ ಜಗದೀಶ. ಬಿ. ಜೋಗಿಹಳ್ಳಿ,ಎಂ.ಕೆ. ದೊಡ್ಡಮನಿ ನಾಗರಾಜ ಗುತ್ತಲ ವಿ.ವಿ. ಹುಣಸಿಕಟ್ಟಿ ಸೇರಿದಂತೆ ಅನೇಕರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link