ಚಿತ್ರದುರ್ಗ
ಕುಡಿಯುವ ನೀರಿನ ಸಮಸ್ಯೆಯಿಂದ ಬೆಸೆತ್ತ ಕಡ್ಲೆಗುದ್ದು ಗ್ರಾಮಸ್ಥರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಖಾಲಿಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು
ಚಿತ್ರದುರ್ಗ ತಾಲ್ಲೂಕಿನ ಬೋಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಡ್ಲೇಗುದ್ದು ಗ್ರಾಮದಲ್ಲಿ ನೂರು ಕುಂಟುಂಬಗಳಲ್ಲಿ ಸುಮಾರು 10000 ಜನ ವಾಸವಾಗಿದ್ದು ಇಲ್ಲಿ ನೀರಿನ ತೊಂದರೆ ಹೆಚ್ಚಾಗಿದೆ ಸರ್ಕಾರದಿಂದ ಹಲವಾರು ಕೊಳವೆಬಾವಿಯನ್ನು 1000 ರಿಂದ 1200 ಅಡಿ ಕೋರೆಯಿಸಿದರು ಸಹಾ ನೀರು ಸಿಕ್ಕಿಲ್ಲ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬೊಮ್ಮೇನಹಳ್ಳಿ ಗ್ರಾಮದಿಂದ ಚಿತ್ರದುರ್ಗಕ್ಕೆ ಶಾಂತಿಸಾಗರದ ಪೈಪ್‍ಲೈನ್ ಹಾದುಹೋಗಿದೆ ಇಲ್ಲಿದ್ದ ಸುಮಾರು 3 ಕಿ.ಮೀ ದೂರದಲ್ಲಿ ನಮ್ಮ ಗ್ರಾಮಕ್ಕೆ ಶಾಂತಿಸಾಗರದ ನೀರನ್ನು ನೀಡುವುದರ ಮೂಲಕ ಗ್ರಾಮದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ, ಈಗಾಗಲೇ ಪೈಪ್ ಲೈನ್ ಕಾಮಗಾರಿ ಮುಗಿದಿದ್ದು ಅದಕ್ಕೆ ಸಂಪರ್ಕವನ್ನು ಮಾತ್ರವೇ ಕಲ್ಪಿಸಬೇಕಿದೆ ಇದನ್ನು ಮಾಡಲು ಅಧಿಕಾರಿಗಳಿಗೆ ಸೂಚನೆಯನ್ನು ನೀಡಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯ ಮುಖ್ಯಸ್ಥರನ್ನು ಆಗ್ರಹಿಸಿದರು.
ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪಂಚಾಯಿತಿಯ ಸದಸ್ಯರು ಮತ್ತು ಆಧ್ಯಕ್ಷರ ಗಮನಕ್ಕೆ ತಂದರು ಸಹಾ ಯಾವುದೇ ಕಾರ್ಯವಾಗಿಲ್ಲ ಅಲ್ಲದೆ ಇಲ್ಲಿಯವರೆಗೂ ಗಣಿ ಕಂಪನಿಯವರು ನೀರನ್ನು ಗ್ರಾಮಕ್ಕೆ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತಿತು ಆದರೆ ಈಗ ಅವರು ಸಹಾ ಟ್ಯಾಂಕ್ ನಿಲ್ಲಿಸಿದ್ದಾರೆ ಇದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಉಂಟಾಗಿದೆ ಎಂದು ತಮ್ಮ ಅಳಲನ್ನು ಅಧಿಕಾರಿಗಳ ಮುಂದೆ ನಿವೇದನೆ ಮಾಡಿದರು.
ಈ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ತಿಪ್ಪೇಸ್ವಾಮಿ, ನಾಗರಾಜ್ ಮಾನಪ್ಪ, ಕರಿಯಪ್ಪ, ಸುನೀತ, ಗೌರಮ್ಮ, ಲಲಿತಮ್ಮ, ಮಮತ, ಶಾರದ, ಭಾಗ್ಯ, ಲಕ್ಷ್ಮೀದೇವಿ ರೇಖಾ ಸೇರಿದಂತೆ ಇತರರು ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
