ಚಿತ್ರದುರ್ಗ
ಸದಾ ಪರಿಸರದೊಂದಿಗೆ ಒಡನಾಡುವ.ಬುಡಕಟ್ಟು ಸಮುದಾಯವಾಗಿರುವ ಕಾಡುಗೊಲ್ಲರು ಪ್ರಕೃತಿಯ ಆರಾಧಕರಾಗಿದ್ದು. ಕಾಡು,ಮೇಡು ಅಲೆಯುವುದರೊಂದಿಗೆ ಜಾನುವಾರು ಪಾಲಕರಾಗಿದ್ದು. ಪ್ರಕೃತಿಯೇ ಕಾಡು ಗೊಲ್ಲರ ಧರ್ಮವಾಗಿದೆ ಎಂದು ಜನಪರ ಹೋರಾಟಗಾರ ನರೇನಹಳ್ಳಿ ಅರುಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಹಿರಿಯೂರು ತಾಲ್ಲೂಕು ಗುಯಿಲಾಳು ಗೊಲ್ಲರಹಟ್ಟಿ ಗ್ರಾಮದಲ್ಲಿ ಸಂಸ್ಕತಿ ಚಿಂತಕ,ಸಾಹಿತಿ,ಕವಿ ಪ್ರೋ.ಜಿ.ಪರಮೇಶ್ವರಪ್ಪ ರಚಿತ ಶ್ರೀಪಾರ್ಥಲಿಂಗ ಚರಿತಾಮೃತ ಕೃತಿಯ ಪಾರಾಯಣ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕಾಡು ಗೊಲ್ಲರ ಜನಾಂಗದಲ್ಲಿ ಪಾತಲಿಂಗ ದೇವರೆಂದು ಶತಶತಮಾನಗಳಿಂದ ಪೂಜಿಸ್ಪಡುತ್ತಿರುವ ಶ್ರೀಪಾರ್ಥಲಿಂಗವನ್ನು ಅಧ್ಯಯನಕ್ಕೆ ಒಳಪಡಿಸುವಂತ ಕ್ರಿಯೇಯು ಪಾರಾಯಣವನ್ನು ನಡೆಸುವ ಕೊಡುವ ಮೂಲಕ ಗೊಲ್ಲರಹಟ್ಟಿಗಳಲ್ಲಿ ಅಕ್ಷರ ಕ್ರಾಂತಿ, ವೈಚಾರಿಕತೆ ಬೆಳೆಸುವ ಕೆಲಸ ಆರಂಭಿಸಲಾಗಿರುವುದು ಧರ್ಮ ಚಿಂತನೆ ಭಾಗವಾಗಿದೆ ಎಂದರು.
ಕಾಡುಗೊಲ್ಲ ಸಮುದಾಯವು ಪ್ರಕೃತಿಯ ಜೊತೆಗೆ ಸೂರ್ಯ,ಚಂದ್ರ, ಗಾಳಿ, ಬೆಳಕು, ಗಿಡ,ಮರ,ನದಿ,ಜನಜಾನುವಾರು ಪ್ರತಿಯೊಂದನ್ನು ಪೂಜಿಸುವ ಮೂಲಕ ತಮ್ಮ ಭಕ್ತಿಯನ್ನು ವ್ಯಕ್ತಪಡಿಸುವ ಬುಡಕಟ್ಟು ಸಮುದಾಯವಾಗಿದ್ದು. ಜಾತಿ,ಧರ್ಮಗಳನ್ನು ಕರುಣೆ, ಪ್ರಿತಿ,ಸೌಹಾರ್ಧತೆಯನ್ನಾಗಿ ಕಂಡುಕೊಂಡವರು ಪ್ರತ್ಯೇಕ ಪೂಜೆ,ಆಚರಣೆ, ಸಂಸ್ಕತಿ ರೂಢಿಸಿಕೊಂಡಿವ ಇವರು ಪಶುಪಾಲನೆ,ಜಾನುವಾರು ಸಾಕುವುದು ಇವರ ಕಸಬು ಆಗಿದ್ದು. ಆಧುನಿಕ ಯುಗದಲ್ಲೂ ಸಹ ಪರಂಪರೆಯಿಂದ ನಡೆದುಕೊಂಡು ಬಂದಿರುವಂತ ಧರ್ಮಪಾಲನೆಯನ್ನು ಅನುಸರಿಸಿಕೊಂಡು ಬಂದವರು ಆಗಿದ್ದಾರೆ.
ನಿರಂತರವಾಗಿ ಪ್ರಕೃತಿಜೊತೆಗೆ ಬದುಕು ಸಾಗಿಸುವ ಪರಿಪಾಠ ಹೊಂದಿರುವ ಕಾಡುಗೊಲ್ಲರ ಸಮುದಾಯ ಜಾತಿ,ಮತ ಪಂಥಗಳನ್ನು ಮೀರಿ ನಿಂತವರು ಅವರದೆ ಆದ ಪ್ರತ್ಯೇಕ ಹಟ್ಟಿ ನಿರ್ಮಿಸಿಕೊಳ್ಳವ ಮೂಲಕವಾಗಿ ಜೀವನ ಸಾಗಿಸುತ್ತಿದ್ದು ಕಾಡುಗೊಲ್ಲರಿಗೆ ಮಾನವೀಯತೆ, ಕರುಣೆ, ಹುಟ್ಟಿನಿಂದಲೇ ಮೇಳೈಸಿಕೊಂಡು ಬಂದಂತೆಯಿದೆ. ಸಹಜವಾಗಿ ಪ್ರಕೃತಿಯ ಜೊತೆಗೆ ಮುಖಾಮುಖಿಯಾಗುವ ಸಮುದಾಯವು ಸಾವಿರಾರು ವರ್ಷಗಳಿಂದಲೂ ಜಾತಿ,ಧರ್ಮಗಳ ಕಟ್ಟುಪಾಡುಗಳಿಲ್ಲದೆ ಬದುಕಿದವರು.ಆ ಕಾರಣಕ್ಕಾಗಿಯೇ ಕಾಡುಗೊಲ್ಲರು ಅವರದೇ ಆದ ಧರ್ಮವನ್ನು ಪರಿಪಾಲನೆ ಮಾಡಿಕೊಂಡು ಬಂದಿರುವುದರಿಂದ ಕಾಡುಗೊಲ್ಲರ ಧರ್ಮವೇ ಪ್ರತ್ಯೇಕ ಧರ್ಮ ಮತ್ತು ಧರ್ಮ ಸಂಸ್ಥಾಪಕರು ಸಾಮಾಜಿಕ ಪರಿವರ್ತನೆಯ ಹರಿಕಾರ ಕರಡಿಬುಳ್ಳಪ್ಪ ಎಂದು ಅಘೋಷಿತವಾಗಿ ಕರೆದುಕೊಳ್ಳುತ್ತಾರೆ ಎಂದರು.
ಕಾಡುಗೊಲ್ಲರಷ್ಟೇ ಅಲ್ಲದೇ ಬಡಕಟ್ಟು ಜಾತಿ,ಜನಾಂಗಗಳದ್ದೇ ಪ್ರತ್ಯೇಕ ಆಚರಣೆಗಳಿದ್ದು. ವೈದಿಕ, ಪರಂಪರೆಯನ್ನು,ಧರ್ಮವನ್ನು ಎಲ್ಲೂ ಸಹ ಪಾಲನೆ ಮಾಡಿದಂತೆ ಕಂಡುಬರುವುದಿಲ್ಲ .ಆದ್ದರಿಂದಲೇ ಕಾಡುಗೊಲ್ಲರಲ್ಲಿ ತಿಮ್ಮಪ್ಪನ ಒಕ್ಕಲು ಎಂದು ಇಂದಿಗೂ ಕರೆದುಕೊಳ್ಳುವ ಮನೆತನಗಳಿದ್ದು.
ಅವರವರ ದೇವರು ಮತ್ತು ಪೂರ್ವಜರು ಅನುಸರಿಸಿಕೊಂಡು ಬಂದಂತಹ ಧರ್ಮಮಾರ್ಗದಲ್ಲಿ ನಡೆಯುವ ಮೂಲಕ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದಿರುವುದು ಹಾಗೂ ಬುಡಕಟ್ಟು ಜನರು ಹೇಳುವಂತೆ ಕಟ್ಟುಪಾಡುಗಳಿಲ್ಲದ,ಮುಕ್ತ ಅವಕಾಶವಿರುವ,ಸ್ತ್ರೀ,ಪುರುಷ ಭೇದ-ಭಾವವಿಲ್ಲದೆ ಸಮಾನತೆ ಸಹಾಭಾಳ್ವೆಯನ್ನು ಅನುಸರಸಿಕೊಂಡು ಬಂದಿರುವಂತ ಧರ್ಮಾಚರಣೆಗಳು ಕಾಡುಗೊಲ್ಲ ಸಮುದಾಯದಲ್ಲಿ ನಿತ್ಯ ಅನುಸರಿಸಲಾಗುತ್ತದೆ ಆದ್ದರಿಂದ ಕಾಡುಗೊಲ್ಲರ ಧರ್ಮವು ಬುಡಕಟ್ಟುಗಳ ಧರ್ಮಗಳಲ್ಲೇ ಶ್ರೇಷ್ಟವಾದದ್ದು ಎಂದರು.
ಸಾಮಾಜಿಕ ಬದಲಾವಣೆಗಳ ಸಂದರ್ಭಗಳಲ್ಲಿ ಒಂದಿಷ್ಟು ಸಮುದಾಯದಲ್ಲಿ ಕವಲು ದಾರಿಗಳಿದ್ದರು,ಧಾರ್ಮಿಕ ಆಚರಣೆಯ ಸಮಯದಲ್ಲಿ ಸಮಾನತೆಯನ್ನು ಅನುರಿಸುವುದು ಕಂಡುಬರುತ್ತದೆ ದೇವರು,ಧರ್ಮದ ಆಚರಣೆಗಳು ಅವರದೇ ಆದ ಅನುಸರಣಿಗಳಿವೆ ಎಂದು ಹೇಳಿದರು.
ಶ್ರೀ ಪಾರ್ಥಲಿಂಗ ಚರಿತಾಮೃತ ಪಾರಾಯಣ ಅಭಿಯಾನ ಕಾರ್ಯಕ್ರಮದಲ್ಲಿ ಪಾತಲಿಂಗ ದೇವರ ಪೋತ್ರಜ ಕೊಡ್ಲಹಳ್ಳಿ ,ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಹಟ್ಟಿ ತಿಪ್ಪೇಸ್ವಾಮಿ,ಗುಯಿಲಾಳು ಗ್ರಾಮದ ಮುಖಂಡರು ಹಾಗೂ ವಕೀಲರಾದ ವಿ. ನಾಗರಾಜ್ ,ಕೃತಿಕಾರರಾದ ಪ್ರೋ.ಜಿ. ಪರಮೇಶ್ವರಪ್ಪ,ನರೇನಾಳ್ ಶಿವಲಿಂಗಪ್ಪ,ಕಲ್ಲಹಟ್ಟಿ ತಿಪ್ಪೀರಣ್ಣ, ಇಂಜನಿಯರ್ ಸಿದ್ದಪ್ಪ,ಕಾಟಪ್ಪನಹಟ್ಟಿ ನಿಜಲಿಂಗಪ್ಪ ,ಕೊಡ್ಲಹಳ್ಳಿ ಜಗದೀಶ್,ಕಸವನಹಳ್ಳಿ ಶಿವಣ್ಣ, ಸುರೇಶ್, ನೌಕ್ರಿಯಾ ಡಾಟ್ ಕಾಂ ಅಸೋಸಿಯೇಟ್ ಉಪಾಧ್ಯಕ್ಷರಾದ ಪಿ.ಮಾನಸ ಸುರೇಶ್ ಮುಂತಾದವರು ಪಾರಾಯಣ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಸವನಹಳ್ಳಿ ಶಿವಣ್ಣ ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
