ಪುಸ್ತಕದ ಜ್ಞಾನಕಿಂತ ಗುರುಮುಖೇನ ಜ್ಞಾನ ಮುಖ್ಯ

ಚಿತ್ರದುರ್ಗ:

      ಪ್ರತಿಯೊಬ್ಬರ ಜೀವನದಲ್ಲಿ ಪುಸ್ತಕಗಳ ಜ್ಞಾನಕ್ಕಿಂತ ಗುರುಗಳ ಮೂಲಕ ಪಡೆದುಕೊಳ್ಳುವ ಜ್ಞಾನವೇ ಮುಖ್ಯ ಎಂದು ಪ್ರಾದ್ಯಾಪಕ ಡ.ಕರಿಯಪ್ಪ ಮಾಳಿಗೆ ಅಭಿಪ್ರಾಯ ಪಟ್ಟರು

       ನಗರದ ಎಸ್ ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆಯುತ್ತಿರುವ ಯುವ ತರಂಗ-2018”ರ “ಸಾಂಸ್ಕøತಿಕ ವiಹಾ ಸಮ್ಮೇಳನ” ಎರಡನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

        ಪ್ರತಿಯೋಬ್ಬರ ಜೀವನಕ್ಕೆ ಪುಸ್ತಕದ ಜ್ಞಾನಕಿಂತ ಗುರುಮುಖೇನ ಜ್ಞಾನ ತುಂಬಾ ಮಹತ್ವದ್ದಾಗಿದೆ.ಬದುಕನ್ನು ಕಟ್ಟಿಕೊಳ್ಳಲು ಅನುಭವಿಗಳ ಮಾರ್ಗದರ್ಶನ ಅನುಸರಿಸಬೇಕಾದ ಅವಶ್ಯಕತೆ ಇದೆ. ಯುವಜನತೆಗೆ ಶಕ್ತಿ ಮತ್ತು ಯುಕ್ತಿಗಳ ಸಮನ್ವಯತೆ ಬಹಳ ಮುಖ್ಯ ಎಂದು ಹೇಳಿದರು.

       ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಎಸ್‍ಆರ್‍ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿಯವರು ಇಂದಿನ ಯುವ ಜನತೆ ಉತ್ತಮ ಕನಸುಗಳನ್ನು ಕಂಡು ನನಸು ಮಾಡಿಕೊಳ್ಳಬೇಕು. ಉತ್ತಮ ಪುಸ್ತಕಗಳನ್ನು ಓದುವುದರ ಜೊತೆಗೆ ಆದರ್ಶ ವ್ಯಕ್ತಿಗಳ ತತ್ವ-ಸಿದ್ಧಾಂತಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.  ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ರವಿ ಟಿ. ಎಸ್., ಹಾಗೂ ಎಲ್ಲಾ ವಿಭಾಗಗಳ ಪ್ರಾಂಶುಪಾಲರು, ಅಧ್ಯಾಕರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap