ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರ ಮಹಾದ್ವಾರ ಉದ್ಘಾಟನೆ

ಕುಣಿಗಲ್ :

       ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ 75. ರ ಬಳಿ ನಿರ್ಮಿಸಿರುವ ಮಹಾದ್ವಾರ ನವಂಬರ್ 11ರಂದು ಉದ್ಘಾಟನೆಯಾಗಲಿದೆ.

      ಬಸವಣ್ಣನ ನಂತರ ವಚನ ಸಾಹಿತ್ಯವನ್ನು ರಕ್ಷಿಸಿ ಮತ್ತು ರಚಿಸಿ ವಚನ ಸಾಹಿತ್ಯಕ್ಕೆ ಮರುಜೀವ ನೀಡಿದ ಪವಾಡ ಪುರುಷ ಸಿದ್ದಲಿಂಗೇಶ್ವರರು ಧರ್ಮ ಪ್ರಚಾರಮಾಡುತ್ತಾ ಎಡೆಯೂರಿಗೆ ಸಂಚರಿಸುವಾಗ ಕಗ್ಗರೆ ನಾಗಿನಿ ನದಿಯ ತೀರದಲ್ಲಿ ಧ್ಯಾನಕ್ಕೆ ಕುಳಿತ್ತಿದ್ದರು ಅಲ್ಲಿಗೆ ಬಂದ ನಂಬಿಯಣ್ಣ ಎಂಬ ಭಕ್ತನಿಗೆ ನೀನು ಬಂದು ಕರೆಯುವವರೆಗೆ ಇಲ್ಲಿ ಇರುತ್ತೇನೆ ಎಂದು ಕೊಟ್ಟ ವಚನದಂತೆ 12 ವರುಷ ತಪಸು ಮಾಡಿದ ತಪೋಭೂಮಿಗೆ ಕಗ್ಗರೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 75 ಆಲಪ್ಪನಗುಡ್ಡೆಯ ಬಳಿ ನಿರ್ಮಿಸಿರುವ ಮಹದ್ವಾರದ ಉದ್ಘಾಟನೆಗೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್ ಯಡೆಯೂರಪ್ಪ ಬರುವ ನಿರೀಕ್ಷೆ ಇದೆ ಅಲ್ಲದೆ,

      ಕಾರ್ಯಕ್ರಮಕ್ಕೆ ಕಾಡುಸಿದ್ದೇಶ್ವರ ಮಠದ ಕರಿವೃಷಭ ದೇಶೀಕೇಂದ್ರ ಸ್ವಾಮಿಜಿಗಳು ಹಾಗೂ ಮುಜರಾಯಿ ಆಯುಕ್ತರಾದ ಶೈಲಜ ಎಡೆಯೂರು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿ ಸೇರಿದಂತೆ ಹಲವಾರು ಭಕ್ತರು ಭಾಗವಹಿಸುವರು ಎಂದು ದಾನಿಗಳಾದ ಕಗ್ಗೆರೆ ದಿನೇಶ್ ತಿಳಿಸಿದ್ದಾರೆ ತಪೋಕ್ಷೇತ್ರಕ್ಕೆ ರಾಜ್ಯದ ವಿವಿಧ ಬಾಗಗಳಿಂದ ಬರುವ ಭಕ್ತರು ರಾಷ್ಟ್ರೀಯ ಹೆದ್ದಾರಿ 75ರ ಆಲಪ್ಪನಗುಡ್ಡೆಯಿಂದ ತಪೋಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿ ಬೃಹದಾಕಾರದ ಗುಂಡಿ ನಿರ್ಮಾಣವಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap