ಕಲಾವಿದರನ್ನು ಸರ್ಕಾರ ಪ್ರೋತ್ಸಾಹಿಸಲಿ: ಪ್ರೊ.ಸುಧಾರಾಜು

ತುಮಕೂರು

     ಇತ್ತೀಚಿನ ದಿನಗಳಲ್ಲಿ ಕಲೆ ಮತ್ತು ಕಲೆಗಾರರಿಗೆ ಒಳ್ಳೆಯ ಪ್ರೋತ್ಸಾಹ ಸಿಗುತ್ತಿಲ್ಲ, ಅವರೆಲ್ಲರೂ ಜೀವನಕ್ಕಾಗಿ ಬಹಳ ಕಷ್ಟಪಡುತ್ತಿದ್ದಾರೆ. ಕೆಲವು ಕಲೆಗಾರರು ತಮ್ಮ ಚಿತ್ರಪಟಗಳನ್ನು ಬೆಂಗಳೂರು ಮತ್ತು ಮುಂಬೈನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಬೀದಿ ಬೀದಿಯಲ್ಲಿ ಇಟ್ಟು ಮಾರಾಟ ಮಾಡುತ್ತಿರುವುದು ನಮ್ಮ ಮುಂದೇ ಎದ್ದು ಕಾಣುತ್ತಿದೆ. ಅವರಿಗೆ ಚಿತ್ರ ಪ್ರದರ್ಶನ ಮಾಡಲು ಹಣದ ಕೊರತೆ ಅವರು ಮುಂದೆ ಬರುವುದಿಲ್ಲ.

      ಇತಂಹ ಕಲಾವಿದರನ್ನು ಗುರುತಿಸಿ ಸರ್ಕಾರವು ಆರ್ಥಿಕ ನೆರವುವನ್ನು ಕಲ್ಪಿಸಿಕೊಡುವಂತೆ ಪ್ರೋತ್ಸಾಹಿಸಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ಹಾಗೂ ಸಾಹಿತಿಯಾದ ಆರ್ಟ್ ಪ್ರಮೋಟರ್‍ರಾದ ಪ್ರೊ.ಸುಧಾರಾಜು ತಿಳಿಸಿದರು.ನಗರದ ಸ್ನೇಹ ಸಂಗಮ ಸಾಹಿತ್ಯ ಬಳಗದ ರಾಜ್ಯ ಶಾಖೆಯ ವತಿಯಿಂದ ಹಾಗೂ ತುಮಕೂರು ವಿಶ್ವವಿದ್ಯಾಲಯದಲ್ಲಿ ಇವರು ಸಂಗ್ರಹಿಸಿಲಾದ ಅಂತರ್ ರಾಷ್ಟ್ರೀಯ ಖ್ಯಾತ ಗ್ಲೋಬಲ್ ಆರ್ಟಿಸ್ಟ್ ಪುರಸ್ಕೃತರಾದ ರಮೇಶ್ ತೇರದಾಳ, ಇವರ ಚಿತ್ರಕಲಾಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಪೀಟಿಲು ವಾದಕರಾದ ಹಾಗೂ ಕವಿಗಳಾದ ಬಿ.ಎನ್.ಶಾಮಸುಂದರ್‍ರವರು ಚಿತ್ರಪಟಗಳನ್ನು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು.

      ಇದೇ ಸಂದರ್ಭದಲ್ಲಿ ಆರ್ಟ್ ಪ್ರಮೋಟರ್‍ರಾದ ಪ್ರೊ. ಸುಧಾರಾಜು, ಡಾ.ಸುರೇಶ್ ನರಗುಳಿ, ಸ್ನೇಹ ಸಂಗಮ ಸಂಸ್ಥಾಪಕರಾದ ಚಂದ್ರುನಿಟ್ಟೂರು, ರಜನಿಅಶೋಕ್, ರತ್ನಬಡವನಹಳ್ಳಿ, ದಿವ್ಯಾಆಚಾರ್, ದಯಾನಂದ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link