ಕಲ್ಕುಳಿ ವಿಠಲ ಹೆಗಡೆಗೆ ನಕ್ಸಲ್ ನಂಟು : ಸಿ.ಟಿ. ರವಿ

ಚಿತ್ರದುರ್ಗ

      ಸಾಹಿತ್ಯ ಸಮ್ಮೇಳನಗಳು ಸಂಘರ್ಷಕ್ಕೆ ಎಡೆಮಾಡಿಕೊಡಬಾರದು ಸಮ್ಮೇಳನ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ದಂತೆ ನನ್ನ ವಿರೋಧವಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ ತಿಳಿಸಿದರು.ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಸಂಬಂಧ ಸಾಕಷ್ಟು ವಿವಾದವಿದೆ. ಅಧ್ಯಕ್ಷರು ನಕ್ಸಲ್ ಹಿನ್ನೆಲೆ ಹೊಂದಿರುವ ಕಾರಣ ಅಲ್ಲಿ ವಿರೋಧ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

      ಪ್ರಜಾಪ್ರಭುತ್ವ ವ್ಯವಸ್ಥೆ ಬ್ಯಾಲೆಟ್ ಮೇಲೆ ನಂಬಿಕೆ ಇಟ್ಟಿದೆ. ನಕ್ಸಲ್‍ರು ಬುಲೆಟ್ ಮೇಲೆ ನಂಬಿಕೆ ಇಟ್ಟಿದ್ದಾರೆ, ಹಾಗಾಗಿ ವಿರೋಧ ಮಾಡಲಾಗುತ್ತಿದೆ ಸಮ್ಮೇಳನಕ್ಕೆ ಪರ – ವಿರೋಧ ಇರುವ ಕಾರಣ ಜಿಲ್ಲಾಡಳಿತ ಅನುದಾನದ ಬಗ್ಗೆ ಚರ್ಚೆ ಮಾಡುತ್ತಿದೆ ಎಂದರು.

      ಸಾಹಿತ್ಯ ಸಮ್ಮೇಳನಗಳು ಸಾಂಸ್ಕೃತಿಕ ಪರಿಸರದಲ್ಲಿ ನಡೆಯಬೇಕು. ಸಿದ್ಧಾಂತದ ಬಗ್ಗೆ ಅಲ್ಲ, ಜಿಲ್ಲಾ ಸಮ್ಮೇಳನ ಅದ್ಯಕ್ಷರ ಆಯ್ಕೆ ಬಗ್ಗೆ ವಿವಾದ ಇದೆ ನಕ್ಸಲರನ್ನು ಕರೆತಂದ ಕಲ್ಕುಲಿ ವಿಠಲ್ ಹೆಗಡೆಗೆ ಸಮ್ಮೇಳನದ್ಯಕ್ಷತೆ ನೀಡಿರುವುದು ಸರಿಯಲ್ಲ. ಸರ್ಕಾರಿ ಅನುದಾನ ಪಡೆಯುವ ಸಂಸ್ಥೆ ಕಾನೂನು ಸುವ್ಯವಸ್ಥೆಗೆ ಬದ್ಧವಿರಬೇಕು ಕಾನೂನು ಸುವ್ಯವಸ್ಥೆಗೆ ವಿರೋಧವಾದಾಗ ಅನುದಾನ ತಡೆ ನ್ಯಾಯಸಮ್ಮತವಾದುದು. ಸಿದ್ಧರಾಮಯ್ಯ ಸರ್ಕಾರವಿದ್ದಾಗ ನಕ್ಸಲ್ ಹಿನ್ನೆಲೆ ಕಾರಣಕ್ಕಾಗಿ ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿಲ್ಲ ಎಂದರು.

    ನಕ್ಸಲರು, ಎಡಪಂಥೀಯರು ಒಂದೇ ಅನ್ನೋದಾದರೆ ಚರ್ಚೆಗೆ ಬರಲಿ ಪ್ರಶಸ್ತಿಗಳು ಯಾವ ಕಾರಣಕ್ಕೆ ಬರುತ್ತವೆ ಎಂಬುದು ಈಗ ನಾನು ಹೇಳಲ್ಲ. ಕಲ್ಕುಲಿ ವಿಠಲ ಹೆಗಡೆ ಅವರ ‘ಮಂಗನ ಬೇಟೆ’ ಕೃತಿ ಒಮ್ಮೆ ಓದಿ ನೋಡಿ ಮಂಗನ ಬೇಟೆ ಕೃತಿ ಸಾಹಿತ್ಯ ಅಕಾಡೆಮಿ ಕೃತಿ ಪಡೆದಿದೆ ಸಚಿವನಾಗಿರುವ ಕಾರಣಕ್ಕೆ ಈಗ ಪ್ರಶಸ್ತಿ ಬಗ್ಗೆ ಹೇಳಿದರೆ ವಿವಾದ ಆಗುತ್ತದೆ ನನ್ನ ಮೇಲೂ ಅರವತ್ತಕ್ಕೂ ಹೆಚ್ಚು ಕೇಸುಗಳಿದ್ದವು ಸೋಷಿಯಲ್ ಎಲೆಮೆಂಟ್ ಎಂದು ಪೆÇಲೀಸರು ಘೋಷಿಸಿದ್ದರು ಆದರೆ ನನ್ನ ಮೇಲಿರುವ ಕೇಸುಗಳು ಜನಪರ ಹೋರಾಟದ ಕೇಸುಗಳು ಎಂದು ಸಚಿವರು ಸಮರ್ಥಿಸಿಕೊಂಡರು

    ಚಿಕ್ಕಮಗಳೂರು ಸಾಹಿತ್ಯ ಸಮ್ಮೇಳನಕ್ಕೆ ನೂತನ ಅಧ್ಯಕ್ಷರಾಗಲಿ. ಮಾಜಿ ಸಿಎಂ ಸಿದ್ದರಾಮಯ್ಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿ. ಸಿದ್ದರಾಮಯ್ಯ ಸಮ್ಮೇಳನಾಧ್ಯಕ್ಷರಾದರೆ ವೈಭೋಗದಿಂದ ಸಮ್ಮೇಳನ ಮಾಡ್ತಿನಿ ನಾನೇ ಮುಂದೆ ನಿಂತು ಇತಿಹಾಸದಲ್ಲಿ ಆಗದೇ ಇರೋ ಅಷ್ಟು ವೈಭೋಗದಿಂದ ಸಮ್ಮೇಳನ ನಡೆಸುತ್ತೇನೆ ಎಂದು ಸಚಿವ ಸಿ.ಟಿ ರವಿ ಎಂದರು.

     ಈ ಸಂದರ್ಭದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಮುಖಂಡ ಬದರಿನಾಥ್, ಮಲ್ಲಿಕಾರ್ಜನ್, ಮುರಳಿ, ಸಿದ್ದೇಶ್‍ಯಾದವ್, ತಿಪ್ಪೇಸ್ವಾಮಿ, ನಗರಾಧ್ಯಕ್ಷ ಶಸಿಧರ್, ನಂದಿ ನಾಗರಾಜ್ ಸೇರಿದಂತೆ ನಗರಸಭಾ, ಜಿಲ್ಲಾ ಪಂಚಾಯಿತಿ. ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap