ರಟ್ಟೀಹಳ್ಳಿ
ಲಾಕ್‌ಡೌನ್‌ದಿಂದ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧ ಕಾರಣ ಮದ್ಯ ವ್ಯಸನಿಗಳಿಗೆ ನುಂಗಲಾರದ ತುತ್ತಾಗಿದೆ. ಇದರ ಪರಿಣಾಮ ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಳ ಮತ್ತು ಕಳ್ಳಭಟ್ಟಿ ದಂಧೆ ತಲೆ ಎತ್ತಿದ್ದು
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ಮದ್ಯ ಮಾರಾಟಕ್ಕೆ ನಿಷೇಧದಿಂದ ಎಲ್ಲ ಸಾರಾಯಿ ಅಂಗಡಿಗಳು ಬಾಗಿಲು ಹಾಕಿದ್ದು, ವ್ಯಸನಿಗಳು ಮದ್ಯಕ್ಕೆ ಚಡಪಡಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಿಡಿಗೇಡಿಗಳು ಜನರ ಪ್ರಾಣಕ್ಕೆ ಕುತ್ತು ತರುವಂತಹ ಕಳಪೆ ದರ್ಜೆಯ ಅಕ್ರಮ ಮದ್ಯ ತಯಾರಿಕೆ, ಮಾರಾಟವನ್ನು ಕಳೆದ ಕೆಲ ದಿನಗಳಿಂದ ಮಾಡುತ್ತಿದ್ದಾರೆ. ಈ ದಂಧೆಯ ಬಗ್ಗೆ ಅಬಕಾರಿ ಇಲಾಖೆ ಆಗಲಿ, ಪೊಲೀಸ್ ಇಲಾಖೆಯಾಗಲಿ ಗಮನ ಹರಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೇ ಗ್ರಾಸವಾಗಿದೆ.
ಈಗಾಗಲೇ ಮದ್ಯ ಬಂದಾಗಿ 20 ದಿನಗಳಾಯ್ತು ನಾವು ಏನ್ ಮಾಡೋದು ನಮಗೆ ಮದ್ಯ ಸೇವಿಸಿಸದೆ ಇರಲು ಸಾಧ್ಯವಿಲ್ಲಾ ತಾಲ್ಲೂಕಿನ ಕೆಲ ತಾಂಡಾಗಳಲ್ಲಿ ನಮಗೆ ಕಳ್ಳಭಟ್ಟಿ ಸಿಗುತ್ತಿದೆ ನಾವು ಅದನ್ನೇ ಕುಡಿತಿದಿವಿ ಎಂಬುದು ಹೆಸರೇಳಚ್ಚಿಸದ ಮದ್ಯ ಪ್ರಿಯನ ಮಾತು. ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರ ಪ್ರಾಣ ಉಳಿಸುತ್ತ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ