ಹೊಸಪೇಟೆ :
ನಗರದ ರಾಣಿಪೇಟೆಯಲ್ಲಿರುವ ಶ್ರೀ ಮುದ್ಲಾಪುರ ತಾಯಮ್ಮದೇವಿಯ ಕಳಸ ಪ್ರತಿಷ್ಠಾಪನೆಯನ್ನು ಹಂಪಿ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಸ್ವಾಮಿಗಳು ಇತ್ತೀಚೆಗೆ ನೆರವೇರಿಸಿದರು.
ಕಳಸ ಪ್ರತಿಷ್ಠಾಪನೆ ನಂತರ ಶ್ರೀಗಳು ಸೇರಿದಂತೆ ಹುಲಿಗಿಯ ಹುಲಿಗೆಮ್ಮ ದೇವಸ್ಥಾನದ ಅರ್ಚಕರಾದ ಸೀನಂಭಟ್ ಹಾಗು ನಿಮಿಷಾಂಬ ದೇವಸ್ಥಾನದ ಅರ್ಚಕರಾದ ವಿನಾಯಕಸ್ವಾಮಿಗಳು ಶ್ರೀ ತಾಯಮ್ಮದೇವಿ ದೇವಸ್ಥಾನದ ಮುಂದೆ ಹೋಮ ಹವನ ನಡೆಸಿದರು.
ಹೋಮ ಹವನದ ಬಳಿಕ ಹಂಪಿ ವಿದ್ಯಾರಣ್ಯ ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಕಳಸ ಪ್ರತಿಷ್ಠಾಪನೆ ಅಂಗವಾಗಿ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ತಾಯಮ್ಮಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್‍ಸಿಂಗ್, ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
