ಕಮಲ ಸಂದೇಶ ಜಾಥಾ…!!!

ಚಳ್ಳಕೆರೆ

       ಕಳೆದ ಐದು ವರ್ಷಗಳಿಂದ ರಾಷ್ಟ್ರದ ಆಡಳಿತವನ್ನು ನಡೆಸುವ ಮೂಲಕ ವಿಶ್ವಮನ್ನಣೆ ಗಳಿಸಿದ ಏಕೈಕ ಧೀಮಂತ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಕ್ಷಣೆಯೂ ಸೇರಿದಂತೆ ಹಲವಾರು ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಯಶಸ್ಸಿಯಾಗಿದ್ಧಾರೆ. ರಾಷ್ಟ್ರದ ಜನತೆ ಮತ್ತೊಮ್ಮೆ ಈ ರಾಷ್ಟ್ರದ ಪ್ರಧಾನಿಯಾಗಿ ನರೇಂದ್ರ ಮೋದಿಯವೇ ಪುನರಾಯ್ಕೆಯಾಗಬೇಕೆಂಬ ಅಭಿಲಾಷೆಯನ್ನು ಹೊಂದಿದ್ದಾರೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ ತಿಳಿಸಿದರು.

       ಅವರು, ಶನಿವಾರ ಇಲ್ಲಿನ ಎಚ್‍ಪಿಪಿಸಿ ಕಾಲೇಜು ಮೈದಾನದ ಹೊರ ಆವರಣದಲ್ಲಿ ‘ಕಮಲ ಸಂದೇಶ ಬಿಜೆಪಿ ರ್ಯಾಲಿ’ ಮತ್ತೊಮ್ಮೆ ಮೋದಿ ಬೈಕ್ ರ್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಜಿಲ್ಲೆಯ ಹಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ರ್ಯಾಲಿ ಯಶಸ್ಸಿಯಾಗಿ ನಡೆದಿದ್ದು, ಚಳ್ಳಕೆರೆ ನಗರದಲ್ಲಿ ಆಯೋಜಿಸಲಾದ ಈ ರ್ಯಾಲಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಯುವಕರು ಮತ್ತು ಯುವ ಮಹಿಳೆಯರು ಬಿಜೆಪಿ ಪರವಾಗಿ ಅಪಾರವಾದ ವಿಶ್ವಾಸವನ್ನು ಹೊಂದಿದ್ಧಾರೆ. ಈ ವಿಶ್ವಾಸ ಮತವಾಗಿ ಮಾರ್ಪಾಟಾಗಲಿದ್ದು, ಬಿಜೆಪಿ ಈ ಕ್ಷೇತ್ರದಲ್ಲೂ ಜಯಭೇರಿ ಬಾರಿಸುವ ಎಲ್ಲಾ ಲಕ್ಷಗಳು ಗೋಚರಿಸುತ್ತವೆ ಎಂದರು.

        ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ, ಲೋಕಸಭಾ ಟಿಕೆಟ್ ಆಕಾಕ್ಷಿ ಮಾನಪ್ಪ ಡಿ. ವಜ್ಜಲ್ ಮಾತನಾಡಿ, ಈಗಾಗಲೇ ದೇಶದಲ್ಲಿ ಬದಲಾವಣೆಯಾಗುತ್ತಿರುವ ವಾತಾವರಣವನ್ನು ಜನರು ಕಾತುರದಿಂದ ನಿರೀಕ್ಷೆ ಮಾಡುತ್ತಿದ್ಧಾರೆ. ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಕಳೆದ ಐದು ವರ್ಷಗಳಿಂದ ಯಾವುದೇ ರೀತಿಯ ಕಪ್ಪುಚುಕ್ಕಿ ಇಲ್ಲದೆ ಆಡಳಿತ ನಡೆಸುತ್ತಿದ್ಧಾರೆ.

         ವಿಶೇಷವಾಗಿ ಇತ್ತೀಚೆಗೆ ತಾನೇ ಜೆಷ್-ಎ-ಮೊಹಮ್ಮದಿಯ ಉಗ್ರ ಸಂಘಟನೆ ಸೈನಿಕರ ವಾಹನದ ಮೇಲೆ ಬಾಂಬು ದಾಳಿ ನಡೆದಿ 40ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡು ವಾಯುಪಡೆಯ ಪೈಲಟ್‍ನ್ನು ಪಾಕಿಸ್ತಾನ ತನ್ನ ವಶಕ್ಕೆ ಪಡೆದಿತ್ತು. ಆದರೆ, ಇದರಿಂದ ವಿಚಲಿತರಾಗದ ಪ್ರಧಾನ ಮಂತ್ರಿಗಳು ಪೈಲಟ್ ಅಭಿನಂದನ್‍ರವರನ್ನು ತಾಯ್ನಿಡಿಗೆ ಕರೆಸಿಕೊಳ್ಳುವಲ್ಲಿ ಯಶಸ್ಸಿಯಾದರಲ್ಲದೆ ಉಗ್ರಗಾಮಿಗಳಿಗೂ ಪಾಠಕಲಿಸಿದ್ದಾರೆ.

         ರಾಷ್ಟ್ರದ ಭದ್ರತೆ ದೃಷ್ಠಿಯಿಂದ ಪ್ರಧಾನ ಮಂತ್ರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜನರ ಮೇಲೆ ಗಾಡವಾದ ಪರಿಣಾಮ ಬೀರಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವಲ್ಲಿಬಿಜೆಪಿ ಸಫಲವಾಗಲಿದೆ ಎಂದರು. ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಕಮಲ ಸಂದೇಶ ಬೈಕ್ ರ್ಯಾಲಿ ಬಗ್ಗೆ ಯುವಕರಿಗೆ ಸುದ್ದಿ ನೀಡಿದ ಕೂಡಲೇ ಸ್ವಯಂ ಪ್ರೇರಣೆಯಿಂದ ಸುಮಾರು 200ಕ್ಕೂ ಹೆಚ್ಚು ಜನರು ಬೈಕ್ ರ್ಯಾಲಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.

         ಎಲ್ಲರೂ ಸಂತೋಷದಿಂದಲೇ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದು, ಎಲ್ಲರ ಬಾಯಲ್ಲೂ ಮೋದಿ ಮೋದಿ ಘೋಷಣೆ ಸಾಮಾನ್ಯವಾಗಿದೆ. ಕೇಂದ್ರ ಸರ್ಕಾರದ ಎಲ್ಲಾ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯ ಯುವಕರಿಂದಲೇ ಆಗಬೇಕಿದೆ. ಈ ಬಾರಿ ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ರಾಷ್ಟ್ರದ ಹಿತದೃಷ್ಠಿಯಿಂದ ಮತ ಚಲಾವಣೆ ಮಾಡಲಿದ್ಧಾರೆ. ಎಲ್ಲರ ಆಪೇಕ್ಷೆಯಂತೆ ಕೇಂದ್ರದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ ಎಂಬ ಆತ್ಮವಿಶ್ವಾಸ ನನಗೆ ಇದೆ ಎಂದರು.

          ಬೈಕ್ ರ್ಯಾಲಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್, ಬಿ.ಎಸ್.ಶಿವಪುತ್ರಪ್ಪ, ನಾಗೇಂದ್ರ ಬೇದ್ರೆ, ಟಿ.ಬೋರನಾಯಕ, ಕರೀಕೆರೆ ತಿಪ್ಪೇಸ್ವಾಮಿ, ಹೊಟ್ಟಪ್ಪನಹಳ್ಳಿ ಮಂಜುನಾಥ, ಈಶ್ವರನಾಯಕ, ಕಾಟಪ್ಪನಹಟ್ಟಿ ವೀರೇಶ್, ದಿನೇಶ್‍ರೆಡ್ಡಿ, ಟಿ.ಮಂಜುನಾಥ, ಯಶೋಧರ, ಆದರ್ಶ, ದಗ್ಗೆ ಶಿವಪ್ರಕಾಶ್, ಕಲ್ಲಂ ಸೀತಾರಾಮರೆಡ್ಡಿ, ನಗರಸಭಾ ಸದಸ್ಯರಾದ ಎಸ್.ಜಯಣ್ಣ, ವೆಂಕಟೇಶ್, ಡಿ.ಎಂ.ತಿಪ್ಪೇಸ್ವಾಮಿ, ಎ.ವಿಜಯೇಂದ್ರ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link