ಕಂಬಳಿ ಉದ್ಯಮವನ್ನು ಪುನಶ್ಚೇತನಗೊಳಿಸಲು ಮಹಾಮಂಡಳಿ ಪ್ರಾಮಾಣಿಕ ಯತ್ನ : ಎನ್.ಜಯರಾಂ

ಚಳ್ಳಕೆರೆ

        ರಾಜ್ಯದ ಉಣ್ಣೆ ಕಂಬಳಿ ನೇಕಾರರಿಗೆ ಸರ್ಕಾರದ ವತಿಯಿಂದ ಹಾಗೂ ವಿವಿಧ ಇಲಾಖೆಗಳ ಸಹಕಾರೊಂದಿಗೆ ಆರ್ಥಿಕ ನೆರವು ಸೇರಿದಂತೆ ಹಲವಾರು ಸೌಲಭ್ಯಗಳನ್ನು ವಿತರಿಸುವ ಯೋಜನೆ ಇದ್ದು, ಈ ನಿಟ್ಟಿನಲ್ಲಿ ಸಂಘದ ಎಲ್ಲಾ ನಿರ್ದೇಶಕರು ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಶೇಷ ಅನುದಾನವನ್ನು ಪಡೆಯುವ ಉದ್ದೇಶವನ್ನು ಹೊಂದಲಾಗಿದೆ ಎಂದು ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳಿ ರಾಜ್ಯಾಧ್ಯಕ್ಷ ಎನ್.ಜಯರಾಂ ತಿಳಿಸಿದ್ದಾರೆ.

          ಅವರು, ಶುಕ್ರವಾರ ಇಲ್ಲಿನ ಕಂಬಳಿ ಮಾರುಕಟ್ಟೆ ಆವರಣದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಹಮ್ಮಿಕೊಂಡಿದ್ದ ಉಣ್ಣೆ ವಲಯ ಅಭಿವೃದ್ಧಿಯ ಬಗ್ಗೆ ಚಿಂತನ ಮಂಥನ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಹಾಮಂಡಳದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡೇ ತಿಂಗಳಲ್ಲಿ ಕೈಮಗ್ಗ ನೇಕಾರರಿಗೆ ಉತ್ತಮ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಮಂಡಳಿ ಚಿಂತಿತವಾಗಿದೆ. ಈ ಹಿನ್ನೆಲೆಯಲ್ಲಿ ನಿಗಮದ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ಯೋಜನೆಯನ್ನು ರೂಪಿಸಲು ಮಂಡಳಿ ಮುಂದಾಗಿದೆ. ಒಟ್ಟಾರೆ ಕೈಮಗ್ಗ ನೇಕಾರರ ಜ್ವಲಂತ ಸಸ್ಯೆಗಳಿಗೆ ಮಂಗಳಆಡಿ ಅವರೆಲ್ಲರ ಬದುಕಿನಲ್ಲಿ ನೆಮ್ಮದಿಯ ದಿನಗಳನ್ನು ತರುವ ಆತ್ಮವಿಶ್ವಾಸವನ್ನು ಹೊಂದಿದ್ದೇವೆಂದರು.

        ಕಾರ್ಯಕ್ರಮವನ್ನು ಉದ್ಘಾಟಿಸಿದ ಕೈಮಗ್ಗ ಮತ್ತು ಜವಳಿ ಇಲಾಖೆಯ ಪೂರ್ವವಲಯದ ಜಂಟಿ ನಿರ್ದೇಶಕ ಯೋಗೇಶ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಉಣ್ಣೆ ಕೈಮಗ್ಗ ಅಭಿವೃದ್ಧಿ ಹಿನ್ನೆಲೆಯಲ್ಲಿ ಹಲವಾರು ಬಾರಿ ಸಮಸ್ಯೆಯನ್ನು ನಡೆಸಿ ಸೂಕ್ತ ನಿರ್ದೇಶನವನ್ನು ನೇಕಾರರಿಗೆ ನೀಡಲಾಗಿದೆ. ನೇಕಾರರು ತಮ್ಮ ವೃತ್ತಿಯಲ್ಲಿ ಪರಿಪಕ್ವವಾಗಿದ್ದರೂ ಮಾರುಕಟ್ಟೆ ಆಕರ್ಷಣೆ ಅವರ ವೃತ್ತಿಗೆ ಹಿನ್ನಡೆ ಉಂಟು ಮಾಡಿದೆ.

          ಆದ್ದರಿಂದ ನೂತನ ಆಧುನಿಕತೆಯ ತಾಂತ್ರಿಕತೆಯನ್ನು ಹೊಸ ಹೊಸ ಆವಿಷ್ಕಾರವನ್ನು ಉಣ್ಣೆ ಕೈಮಗ್ಗದ ಉತ್ಪಾದನೆಯಲ್ಲಿ ತೊಡಗಿಸಿಕೊಳ್ಳಬೇಕಿದೆ. ಪ್ರಸ್ತುತ ನೇಕಾರರ ಪರಿಸ್ಥಿತಿ ಆಶಾದಾಯಕವಾಗಿಲ್ಲವಾದರೂ ಯಾರೂ ಸಹ ನಿರಾಶರಾಗುವುದು ಬೇಡ. ಈ ಹಿನ್ನೆಲೆಯಲ್ಲಿ ಈಗಾಗಲೇ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆ ನಡೆಸಿದ್ದು, ಹಿರಿಯ ಅಧಿಕಾರಿಗಳು ಸಹ ಉಣ್ಣೆ ಕೈಮಗ್ಗ ನಿಗಮದ ಅಭಿವೃದ್ಧಿಗೆ ಸೂಚನೆ ನೀಡಿದ್ಧಾರೆ. ಎಲ್ಲರೂ ತಾಳ್ಮೆಯಿಂದ ಇದ್ದು, ಮುಂಬರುವ ದಿನಗಳಲ್ಲಿ ಹೊಸ ತಾಂತ್ರಿಕತೆಯೊಂದಿಗೆ ನೇಕಾರಿಕೆಯನ್ನು ಮುಂದುವರೆಸುವಂತೆ ಮನವಿ ಮಾಡಿದರು.

           ಉಪಾಧ್ಯಕ್ಷ ಶರಣಪ್ಪ ಬರಸಿ, ಜಿಲ್ಲಾ ನಿರ್ದೇಶಕ ಎನ್.ಟಿ.ನೆಗ್ಲೂರ್, ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಮಲ್ಲೇಶಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಮಾಜಿ ಅಧ್ಯಕ್ಷ ಕೆ.ಜಿ.ನಾಗರಾಜು, ಎಸ್.ಕೆ.ಗುರುಲಿಂಗಪ್ಪ ಮುಂತಾದವರು ಮಾತನಾಡಿ, ಕಳೆದ ಹಲವಾರು ದಶಕಗಳಿಂದ ವಿಶೇಷವಾಗಿ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಂಬಳಿ ನೇಕಾರರು ಸೂಕ್ತ ವ್ಯವಸ್ಥೆ ಇಲ್ಲದೆ ಪರಿತಪಿಸುತ್ತಿದ್ದು, ಇಲಾಖೆ ಅಧಿಕಾರಿಗಳು ನೇಕಾರರ ಎಲ್ಲಾ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು. ಕೃಷಿ ಕೈಗಾರಿಕೆ ಹೊರತು ಪಡಿಸಿದರೆ ಈ ಸಮುದಾಯಕ್ಕೆ ಕೈಮಗ್ಗ ನೇಕಾರಿಕೆಯೇ ಮೂಲ ವೃತ್ತಿಯಾಗಿದೆ ಎಂದರು.

           ಪ್ರಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಪಾತಲಿಂಗಪ್ಪ ಸ್ವಾಗತಿಸಿದರು. ನಿರ್ದೇಶಕರಾದ ಕೆ.ಎಚ್.ಜಗನ್ನಾಥ, ಪಿ.ಮೂರ್ತಪ್ಪ, ನಂಜುಡಪ್ಪ, ಶೇಖರಪ್ಪ, ಬಿ.ಮಲ್ಲಿಕಾರ್ಜುನ, ಗೋವಿಂದಪ್ಪ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಗಂಗಾಧರ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link