ಆಟೋ ಚಾಲಕರಿಂದ ಕನಕದಾಸರ ಜನ್ಮ ಜಯಂತಿ ಆಚರಣೆ

ತುಮಕೂರು:

         ನಗರದ ಕೆ.ಆರ್.ಬಡಾವಣೆಯ ಶ್ರೀರಾಮಮಂದಿರದಲ್ಲಿ ಇಂದು ಅಖಿಲ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ವತಿಯಿಂದ ದಾಸ ಶ್ರೇಷ್ಠ ಕನಕದಾಸರ ಜನ್ಮ ಜಯಂತಿಯನ್ನು ಆಚರಿಸಲಾಯಿತು.

       ಕಾರ್ಯಕ್ರಮಕ್ಕೆ ಅಖಿಲ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಸಮಿತಿ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಮದಕರಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕುಲ ಕುಲವೆಂದು ಹೊಡೆದಾಡದಿರಿ,ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರ ಎಂದು ಕುಲದ ನೆಲೆಯನ್ನು ಪ್ರಶ್ನಿಸಿದ ಕನಕದಾಸರನ್ನು ಇಂದು ಒಂದು ಸಮುದಾಯಕ್ಕೆ ಸಿಮೀತಗೊಳಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು,ಸರಕಾರ ಹಾಗೂ ಸಾರ್ವಜನಿಕರು ಕನಕದಾಸರ ಜಯಂತಿಯನ್ನು ಜಾತ್ಯಾತೀತವಾಗಿ,ಎಲ್ಲಾ ಸಮುದಾಯದ ಜನರು ಸೇರಿ ಆಚರಿಸುವ ಮೂಲಕ, ದಾರ್ಶಾನಿಕ ಜಯಂತಿಗಳನ್ನು ಆಯಾಯ ವರ್ಗಕ್ಕೆ ಸೀಮಿತಗೊಳಿಸುವ ಕೊಳಕು ಮನಸ್ಸುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕಿದೆ ಎಂದರು.

     ವೃತ್ತಿಯಲ್ಲಿ ವ್ಯಾಪಾರಿಯಾಗಿ, ಶ್ರೀಕೃಷ್ಣನ ಒಲುಮೆಗೆ ಪಾತ್ರರಾಗಿ,ತನ್ನದೆಲ್ಲವನ್ನು ಇತರರಿಗೆ ದಾನಗೈದು,ದೇಶ ಅಂದು ಅನುಭವಿಸುತಿದ್ದ ಜಾತಿ,ಧರ್ಮ, ಬಣ್ಣದ ತಾರತಮ್ಯಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ತಮ್ಮ ತತ್ವ, ಸಂದೇಶಗಳನ್ನು ನೀಡಿದ ಕನಕದಾಸರು, ಈ ನಾಡು ಕಂಡು ಅತ್ಯಂತ ಶ್ರೇಷ್ಠ ದಾರ್ಶಾನಿಕರು. ದಾಸ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ, ಇವರ ತತ್ವಪದಗಳ ಸಾರವನ್ನು ನಾವೆಲ್ಲರೂ ಜೀವನದಲ್ಲಿ ಆಳವಡಿಸಿಕೊಳ್ಳುವ ಮೂಲಕ, ಭಾರತ ಒಂದು ಜಾತ್ಯಾತೀತ, ಧರ್ಮಾತೀತ ರಾಷ್ಟ್ರವಾಗಿ ಉಳಿಯಲು ಪ್ರೇರೆಪಿಸಬೇಕಾಗಿದೆ ಎಂದು ಪ್ರತಾಪ ಮದಕರಿ ತಿಳಿಸಿದರು.

        ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ತಾಲೂಕು ಅಧ್ಯಕ್ಷ ಕುಮಾರಸ್ವಾಮಿ ವಹಿಸಿದ್ದರು.ಜಿಲ್ಲಾ ಕಮಿಟಿ ಉಪಾಧ್ಯಕ್ಷರಾದ ಲಿಂಗಣ್ಣ, ಇಂತಿಯಾಜ್ ಪಾಷ, ನಗರ ಘಟಕದ ಅಧ್ಯಕ್ಷ ಬಾಬು ಹನುಮಂತಪುರ, ಉಪಾಧ್ಯಕ್ಷರಾದ ರಾಮುಸ್ವಾಮಿಗೌಡ, ನವೀನ್ ಗೌಡ, ಖಾಸಗಿ ಬಸ್ ನಿಲ್ದಾಣ ಜಗದೀಶ್,ಮಹಾತ್ಮಗಾಂಧಿ ಆಟೋ ನಿಲ್ದಾಣ ತಿಪ್ಪೇಸ್ವಾಮಿ, ರೈಲ್ವೆ ನಿಲ್ದಾಣ ಆಟೋ ಸ್ಟಾಂಡ್ ನ ವೆಂಕಟೇಶ್, ಜಿಲ್ಲಾ ಮುಖಂಡರಾದ ಟೌನ್‍ಹಾಲ್ ಹರೀಶ್, ಶ್ರೀನಿವಾಸ್, ಶ್ರೀದೇವಿ ಆಟೋ ನಿಲ್ದಾಣದ ರಮೇಶ್, ಕುಪ್ಪೂರು ರಂಗಪ್ಪ ನಾಯಕ ಮತ್ತಿತರರು ಭಾಗವಹಿಸಿದ್ದರು.ತಾಲೂಕು ಘಟಕದ ಕಾರ್ಯದರ್ಶಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.ಬೆಂಗಳೂರು ಗೇಟ್ ಆಟೋ ನಿಲ್ದಾಣದ ತಿಪ್ಪೇಸ್ವಾಮಿ ವಂದರ್ನಾಪಣೆ ಮಾಡಿದರು.ಕಾರ್ಯಕ್ರಮದ ಅಂಗವಾಗಿ ಕನಕದಾಸರ ಕೀರ್ತನೆಗಳನ್ನು ಗಾಯನ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link