ಕನ್ನಡ ಭವನ ಲೋಕಾರ್ಪಣೆ

ತುರುವೇಕೆರೆ

       ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕ ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ಉತ್ತಮ ಕನ್ನಡ ಕಾರ್ಯಕ್ರಮಗಳನ್ನು ನೀಡಲಿ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

        ತಾಲ್ಲೂಕಿನ ಮಾಯಸಂದ್ರ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದಿಂದ ನೂತನವಾಗಿ ನಿರ್ಮಾಣಗೊಂಡಿರುವ ಕನ್ನಡ ಭವನ ಲೋಕಾರ್ಪಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಎನ್.ಆರ್.ಜಯರಾಮ್ ಕಸಾಪ ಹೋಬಳಿ ಘಟಕ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ ಕನ್ನಡದ ಕಾರ್ಯಕ್ರಮ ನೀಡಿರುವುದಲ್ಲದೆ, ಇಡೀ ರಾಜ್ಯದಲ್ಲಿಯೇ ಪ್ರಥಮವಾಗಿ ಹೋಬಳಿ ಮಟ್ಟದಲ್ಲಿ ಕನ್ನಡ ಭವನ ನಿರ್ಮಾಣ ಮಾಡಿರುವುದು ಅತ್ಯಂತ ಶ್ಲಾಘನೀಯ. ಅವರ ಅವಧಿಯಲ್ಲಿ ಇನ್ನೂ ಹೆಚ್ಚು ಹೆಚ್ಚು ಕನ್ನಡಾಂಬೆಯು ಸೇವೆ ಮಾಡುವ ಶಕ್ತಿಯನ್ನು ಅವರಿಗೆ ನೀಡಲಿ ಎಂದರು.

      ಸಾಹಿತಿ ಕೆ.ಬೈರಪ್ಪ ಮಾತನಾಡಿ ನಾಡಿನ ಬಾಷೆ, ಕಲೆ, ಸಂಸ್ಕøತಿಗಳ ಸಾಧನೆಗಳ ಆಧಾರದ ಮೇಲೆ ಕನ್ನಡ ಅಭಿವೃದ್ದಿಯ ಅಳತೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಮಾಯಸಂದ್ರ ಕಸಾಪ ಅತ್ಯಂತ ಯಶಸ್ವಿಯಾಗಿ ಕನ್ನಡ ಸಾಹಿತ್ಯದ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುವ ಉತ್ತಮ ಕನ್ನಡ ಭವನ ನಿರ್ಮಾಣ ಮಾಡಿದ್ದಾರೆ ಎಂದು ಶ್ಲಾಘಿಸಿದರು.

        ಕಸಾಪ ಹೋಬಳಿ ಘಟಕದ ಅಧ್ಯಕ್ಷ ಎನ್.ಆರ್.ಜಯರಾಮ್ ಪ್ರಾಸ್ತಾವಿಕ ನುಡಿಗಳನ್ನಾಡಿ 2007 ರಲ್ಲಿ ಕಸಾಪ ಹೋಬಳಿ ಘಟಕದ ಅಧ್ಯಕ್ಷರಾಗಿ ಹಳ್ಳಿ ಹಳ್ಳಿಗಳ ಮನೆ ಮನೆ ಸಾಹಿತ್ಯ ಮಾಡುವ ಮೂಲಕ ಹಲವು ಕನ್ನಡ ಪ್ರತಿಭೆಗಳನ್ನು ಗುರುತಿಸಲಾಯಿತು, 2008ರಲ್ಲಿ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನ ನೆಡೆಸಿ ಉಳಿದ ಹಣದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗಿತ್ತು. ಮೊದಲ ದೇಣಿಗೆಯಾಗಿ ನಮ್ಮ ತಾಯಿ 10 ಸಾವಿರ ನೀಡಿದರು ನಂತರ ಹಲವಾರು ಕನ್ನಡಾಭಿಮಾನಿಗಳ ಸಹಾಯದಿಂದ ರಾಜ್ಯದಲ್ಲಿಯೇ ಹೋಬಳಿ ಘಟಕದಲ್ಲಿ ಪ್ರಥಮ ಬಾರಿಗೆ ಕನ್ನಡಭವನ ನಿರ್ಮಾಣವಾಗಿದೆ. ಈ ಭವನ ಕನ್ನಡ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

        ಈ ಸಂದರ್ಬದಲ್ಲಿ ಬೆಂಗಳೂರು ಪಶು ವೈದ್ಯ ಇಲಾಖೆಯ ಅಪರ ನಿರ್ದೇಶಕ ಡಾ. ಎಂ.ಟಿ. ಮಂಜುನಾಥ್ ರಚನೆ ಮಾಡಿದ ಪ್ರೇಮಾಂಜಲಿ ಎಂಬ ಕನ್ನಡ ಗೀತೆಗಳ ದ್ವನಿಸುರುಳಿ ಬಿಡುಗಡೆಗೊಳಿಸಲಾಯಿತು. ನಂತರ ಶಾಲಾ ಮಕ್ಕಳಿಂದ ವಿವಿದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

      ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಲಕ್ಷ್ಮೀಜಯರಾಮ್, ಗ್ರಾಮ ಪಂಚಾಯ್ತಿ ಅಧ್ಯಕ್ಷ ರಂಗಸ್ವಾಮಿ, ತಾಲೂಕು ಪಂಚಾಯ್ತಿ ಸದಸ್ಯರಾದ ಸಿ.ವಿ.ಮಹಾಲಿಂಗಯ್ಯ, ಮಂಜುನಾಥ್, ಬೈರಪ್ಪ, ಹೆಚ್.ಎನ್.ಮಹಾಲಿಂಗಪ್ಪ, ಕಸಾಪ ತಾಲೂಕು ಗೌರವಾದ್ಯಕ್ಷ ಪ್ರೊ.ಪುಟ್ಟರಂಗಪ್ಪ, ಅಧ್ಯಕ್ಷ ನಂ.ರಾಜು, ಪ್ರಹ್ಲಾದ್, ನಿರಂತರ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಅದ್ದೆ, ಸಿಪಿಐ ಮಹಮದ್ ಸಲೀಂ, ರೈತ ಮುಖಂಡ ಚಂದ್ರಶೇಖರ್, ಧರ್ಮಸ್ಥಳ ಸಂಸ್ತೆ ಯೋಜನಾಧಿಕಾರಿ ಧರ್ಣಪ್ಪಮೂಲ್ಯ, ಕಸಾಪ ನಗರ ಘಟಕ ಅಧ್ಯಕ್ಷ ಗಂಗಾದರ ದೇವರಮನೆ, ಕಸಬ ಹೋಬಳಿ ಅಧ್ಯಕ್ಷ ಕೃಷ್ಣಮೂರ್ತಿ, ಗೌರವಾದ್ಯಕ್ಷ ಸಿ.ಎನ್.ನಂಜುಂಡಪ್ಪ, ಕಾರ್ಯದರ್ಶಿ ಶ್ರೀದರಮೂರ್ತಿ, ಸಹ ಕಾರ್ಯದರ್ಶಿ ಸಿ.ಪಿ. ಪ್ರಕಾಶ್, ಲೀಲಾವತಿಗಿಡ್ಡಯ್ಯ, ಆನಂದ್ ರಾಜ್ ಸೇರಿದಂತೆ ಇತರೆ ಪದಾಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link