ನಮಗೆ ಜೀವನ ಕೊಟ್ಟಿದ್ದೆ ಕನ್ನಡ ಭಾಷೆ

ದಾವಣಗೆರೆ:

    ನನ್ನ ಮಾತೃಭಾಷೆ ತೆಲಗು ಆಗಿರಬಹುದು ಆದರೆ, ನನಗೆ ಮತ್ತು ನನ್ನ ಸಹೋದರರಿಗೆ ಜೀವನ ಕೊಟ್ಟಿದ್ದು ಕನ್ನಡ ಭಾಷೆ ಎಂದು ಡೈಲಾಗ್ ಕಿಂಗ್, ಹಿರಿಯ ನಟ ಸಾಯಿ ಕುಮಾರ್ ಅವರು ಹೊಂದಿರುವ ಕನ್ನಡದ ನಂಟನ್ನು ಅಭಿಮಾನದಿಂದ ಹೇಳಿದರು.

    ನಗರದ ಸಿದ್ಧಗಂಗಾ ಶಾಲಾ ಆವರಣದಲ್ಲಿ ಭಾನುವಾರ ಪತ್ರಕರ್ತ ವಿ. ಹನುಮಂತಪ್ಪ ಅವರ ಬರೆದ ‘ಅಕ್ಷರಯೋಧ ರಾಮೋಜಿರಾವ್’ ಜೀವನ ಕಥಾ ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನನ್ನ ತಾಯಿಯವರು ಮೇರು ನಟ ಡಾ.ರಾಜಕುಮಾರ್ ಅವರ ಅಭಿನಯದ ಚಿತ್ರದಲ್ಲಿ ನಟಿಸಿದ್ದರು. ಮದುವೆಯಾದ ನಂತರ ಕುಟುಂಬಕ್ಕೆ ಸೀಮಿತರಾದರು. ನಾವು ಸಹೋದರರು ಇಂದು ಚಿತ್ರರಂಗಕ್ಕೆ ಬಂದಿದ್ದು ನಮ್ಮ ಮಾತೃಶ್ರೀಯವರ ಆಸೆಯಿಂದ ನಮ್ಮ ಮಾತೃಭಾಷೆ ತೆಲಗು ಆಗಿದೆ. ಆದರೆ, ನಮಗೆ ಕನ್ನಡ ಜೀವನ ಕೊಟ್ಟಿದೆ ಎಂದು ಹೇಳಿದರು.

     ನಾನು ಸೇರಿದಂತೆ ನನ್ನ ಸಹೋದರಾದ ರವಿಶಂಕರ್, ಆಯ್ಯಪ್ಪ ಅವರು ಸಹ ಕನ್ನಡ ಚಿತ್ರರಂಗದಲ್ಲಿ ಉಳಿಯವಂತೆ ಕನ್ನಡದ ಅಭಿಮಾನಿಗಳು ಮಾಡಿದ್ದಾರೆ. ಹೀಗಾಗಿ, ನಮ್ಮಗಳ ಕರ್ಮಭೂಮಿ ಕನ್ನಡ ನಾಡಾಗಿದ್ದು, ಇಲ್ಲಿನ ಜನರು ನಮಗೆ ಪ್ರೋತ್ಸಾಹಿಸಿದ್ದಕ್ಕೆ ನಾವುಗಳು ಇಂದು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ. ಇದನ್ನು ನಾವು ಸಹೋದರರೂ ಎಂದಿಗೂ ಮರೆಯುವುದಿಲ್ಲ. ಮುಂದಿನ ವರ್ಷ ನನ್ನ ಮಗನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ತಯಾರಿಯಲ್ಲಿದ್ದೇನೆ ಎಂದು ಘೋಷಿಸಿದರು.

     ಇಂದಿನ ತಾಂತ್ರಿಕತೆಯ ಕಾಲದಲ್ಲಿ ಆಧುನಿಕತೆ ಬೇಕು ನಿಜ. ಆದರೆ, ಆ ಕಾರಣಕ್ಕಾಗಿ ನಮ್ಮ ಭಾರತೀಯ ನಾಗರಿಕತೆಯನ್ನೇ ಮರೆಯಬಾರದು. ಭಾರತೀಯರಾಗಿ ಹುಟ್ಟಿರುವುದು ನಮ್ಮ ಪುಣ್ಯ. ಪ್ರಪಂಚವೇ ನಮ್ಮತ್ತ ತಿರುಗಿ ನೋಡುತ್ತಿರುವ ಈ ಸಂದರ್ಭದಲ್ಲಿ ಅಚಾರ-ವಿಚಾರ, ಸಂಸ್ಕøತಿಗಳನ್ನು ಬಿಡದೇ, ನಾಗರಿಕತೆಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

    ನಮ್ಮಗಳ ಕ್ಷಣಿಕ ಜೀವನದಲ್ಲಿ ದೇಶಕ್ಕೆ ನಮ್ಮ ಕೈಯಿಂದಾದ ಕೊಡುಗೆ ನೀಡಬೇಕು. ನಾವು ಏನು ಪಡೆದಿದ್ದೇವೆ ಅನ್ನುವುದಕ್ಕಿಂತ ನಾವುಗಳು ದೇಶಕ್ಕೆ ಏನೂ ಕೊಡಬೇಕು ಅನ್ನುವುದ್ದರ ಬಗ್ಗೆ ಮೊದಲು ಯೋಚಿಸಿಬೇಕು ಎಂದ ಅವರು, ರಾಷ್ಟ್ರ ಪ್ರೇಮವೇ ನಮಗೆಲ್ಲರಿಗೂ ಮುಖ್ಯವಾಗಬೇಕು ಎಂದರು.

    ರಾಮೋಜಿರಾವ್ ಅವರನ್ನು ನಾನು ಬಹಳ ಹತ್ತಿರದಿಂದ ಬಲ್ಲೆ. ಅವರು ಸಾಮಾನ್ಯ ರೈತ ಕುಟುಂಬದಿಂದ ಬಂದು ಜನರಿಗೆ ಮಾರ್ಗದರ್ಶಿಯಾಗಿ, ಪ್ರಚಾರಕ್ಕೆ ಪಡೆಯದೇ ಎಲೆಮರೆ ಕಾಯಿಯಂತೆ ಇದ್ದು ಆಧುನಿಕ ಜಗತ್ತಿಗೆ ರಾಮೋಜಿರಾವ್ ಫಿಲ್ಮ್ ಸಿಟಿ ಮಾಡುವುದರ ಮೂಲಕ ದೊಡ್ಡ ಚಿತ್ರರಂಗಕ್ಕೆ ಸಾಕಷ್ಟಯ ಕೊಡುಗೆ ನೀಡಿದ್ದಾರೆ. ಅವರ ಯೋಜನೆ-ಆಲೋಚನೆಗಳು ಜನರ ಬದುಕಿಗೆ ಎಂದೂ ಹತ್ತಿರವಾಗಿವೆ ಎಂದು ಅವರು ನುಡಿದರು.

    ಶಿವಮೊಗ್ಗದ ಕುವೆಂಪು ವಿವಿಯ ಕುಲಪತಿ ಡಾ.ಬಿ.ಪಿ.ವೀರಭದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದಾದಾಪೀರ್ ನವಿಲೇಹಾಳ್ ಪುಸ್ತಕ ಕುರಿತು ಮಾತನಾಡಿದರು. ಶ್ರೀಸಿದ್ದಗಂಗಾ ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಜಸ್ಟಿನ್ ಡಿ’ಸೌಜಾ ಅಧ್ಯಕ್ಷತೆ ವಹಿಸಿದ್ದರು. ವಿಶ್ವಚೇತನ ವಿದ್ಯಾಸಂಸ್ಥೆ ಸಂಸ್ಥಾಪಕಿ ಡಾ.ವಿಜಯಲಕ್ಷ್ಮಿ ವೀರಮಾಚನೇನಿ ಮತ್ತಿತರರು ಉಪಸ್ಥಿತರಿದ್ದರು.

    ಹೇಮಂತ್ ಕುಮಾರ್ ಪ್ರಾರ್ಥಿಸಿದರು. ಬಳಗದ ಅಧ್ಯಕ್ಷ ಎನ್.ಟಿ. ಎರ್ರಿಸ್ವಾಮಿ ಸ್ವಾಗತಿಸಿದರು. ವಿ. ಹನುಮಂತಪ್ಪ ಪ್ರಾಸ್ತಾವಿಕಾಗಿ ಮಾತನಾಡಿದರು. ಭಾರತಿ ಅತಿಥಿ ಪರಿಚಯ ಮಾಡಿದರು. ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಆನಂದತೀರ್ಥಾಚಾರ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link