7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಸಿದ್ದುಮತಿ ನೆಲವಿಗಿ ಆಯ್ಕೆ

ಹಾವೇರಿ :

        ನಗರದಲ್ಲಿ ಡಿ 8 ರಂದು ಜರಗುವ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಗರದ ಖ್ಯಾತ ಸಾಹಿತಿ ಸಿದ್ದುಮತಿ ನೆಲವಿಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ತಾಲೂಕಾ ಕಸಾಪದ ಪದಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿದರು.

       ಸಿದ್ದುಮತಿ ನೆಲವಿಗಿ ಅವರು ಕಳೆದ 40 ವರ್ಷಗಳಿಂದ ಸಾಹಿತ್ಯ ಕೃಷಿ ಮಾಡುತ್ತಿದ್ದು, ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಕಿತ್ತೂರ ಚೆನ್ನಮ್ಮ ಮಹಾಕಾವ್ಯವನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದು ಅವರ ಹೆಗ್ಗಳಿಕೆ. ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಅಕ್ಕನ ಬಳಗ ಮುಂತಾದ ಸಂಘಟನೆಗಳಲ್ಲಿ ಸಕ್ರಿಯಯವಾಗಿ ಸೇವೆ ಸಲ್ಲಿಸಿದ್ದಾರೆ. ಸಂಗೀತ ವಿದ್ವಾಂಸರಾದ ಅವರು ಈಗ 83 ರ ವಯೋಮಾನದಲ್ಲಯೋ ಕ್ರಿಯಾಶೀಲರಾಗಿರಾಗಿದ್ದಾರೆ.

           ಆಹ್ವಾನ ನೀಡುವುದಕ್ಕಾಗಿ ತಾಲೂಕಾ ಕಸಾಪ ಅಧ್ಯಕ್ಷ ವಾಯ್.ಬಿ ಆಲದಕಟ್ಟಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಸ್‍ಎನ್ ದೊಡ್ಡಗೌಡರ, ಸಾಹಿತಿಗಳಾದ ಸತೀಶ ಕುಲಕರ್ಣಿ, ವಿರೂಪಾಕ್ಷಪ್ಪ ಕೋರಗಲ್ಲ, ಎಸ್‍ಆರ್ ಹಿರೇಮಠ. ಬಿಎಂ ಮಠ, ಶಿವಯೋಗಿ ಚರಂತಿಮಠ, ಸಿಎಸ್ ಮರಳಿಹಳ್ಳಿ, ಅಮೃತಮ್ಮ ಶೀಲವಂತರ, ಲಲಿತಕ್ಕ ಹೊರಡಿ, ದಾಕ್ಷಾಯಣಿ ಗಾಣಗೇರ, ನೀಲಮ್ಮ ಹೇರೂರ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link