ಹೊಳಲ್ಕೆರೆ:
ಕನ್ನಡ ಉಳಿಸಿ ಕಟ್ಟಿ ಬೆಳೆಸುವ ಮತ್ತು ಬದುಕಿನ ಜೀವನಾಡಿಯಾಗಿಸುವ ನಿಟ್ಟಿನಲ್ಲಿ ನಾವು ನವಂಬರ್ ತಿಂಗಳಿಗೆ ಮಾತ್ರ ಕನ್ನಡಿಗರಾಗದೇ ವರ್ಷಪೂರ್ತಿ ಒಂದು ಕಾರ್ಯಸೂಚಿ ಹೊಂದಿರುವುದು ಬಹಳ ಮುಖ್ಯ ಎಂದು ಪ.ಪಂ. ಅಧ್ಯಕ್ಷೆ ಸವಿತಾ ಬಸವರಾಜ್ ತಿಳಿಸಿದರು.
ಪಟ್ಟಣದ ಶ್ರೀ ಪ್ರಸನ್ನ ಗಣಪತಿ ಆವರಣದಲ್ಲಿ ಕೋಟೆಯ ಶ್ರೀ ವಿನಾಯಕ ಯುವಕ ರೈತ ಸಂಘದ ವತಿಯಿಂದ 37ನೇ ಕನ್ನಡ ರಾಜ್ಯೋತ್ಸವದ ಧವಜಾರೋಹಣ ನಡೆಸಿ ಮಾತನಾಡಿದರು
ನಾಡು ನುಡಿ, ಜಲ ವಿಷಯದಲ್ಲಿ ಭಾವೋದ್ವೇಗ ಭಾವನಾತ್ಮಕತೆ ಮತ್ತು ತಾಯ್ನಾಡಿನ ಮೇಲಿನ ಅಪರಿಮಿತ ಪ್ರೀತಿ ಎಲ್ಲವೊ ಮುಖ್ಯ. ಆದರೆ ಇವೆಲ್ಲವೂ ಆಚರಣೆಯ ಜೊತೆ ಕೈ ತೊಳೆದ ನೀರಿನಂತೆ ಗಟಾರು ಸೇರಬಾರದು. ಇದು ನಿಂದನೆಯ ಮಾತಲ್ಲ. ಬದಲಿಗೆ ಕನ್ನಡ ಉಳಿಸಿ ಕಟ್ಟಿ ಬೆಳೆಸುವ ಮತ್ತು ಬದುಕಿನ ಜೀವನಾಡಿಯಾಗಿಸುವ ನಿಟ್ಟಿನಲ್ಲಿ ನಾವು ನವಂಬರ್‍ಗೆ ಮಾತ್ರ ಕನ್ನಡಿರಾಗದೇ ವರ್ಷ ಪೂರ್ತಿ ಒಂದು ಕಾರ್ಯ ಸೂಚಿ ಹೊಂದಿರುವುದು ಬಹಳ ಮುಖ್ಯ ಎಂದರು.
ಪ.ಪಂ. ಸದಸ್ಯ ಹಬೀಬುರ್ ರಹಮಾನ್ ಮಾತನಾಡಿ ನಾವು ಪ್ರಜ್ಞಾಪೂರ್ವಕವಾಗಿ ಕನ್ನಡ ಉಳಿಸುವ ಬೆಳೆಸುವ ಕೆಲಸವನ್ನು ಮಾಡಬೇಕು. ಸಾಧ್ಯವಾದಾಗಲೆಲ್ಲ ಉತ್ತಮ ಅಭಿರುಚಿಯ ಕನ್ನಡ ಚಲನಚಿತ್ರ, ನಾಟಕ, ಸಂಗೀತ ಕಚೇರಿ ಮತ್ತು ಕನ್ನಡದ ಸಭೆ, ಸಮಾರಂಭಗಳಿಗೆ ಮಕ್ಕಳು, ಮೊಮ್ಮಕಳನ್ನು ಕರೆದುಕೊಂಡು ಹೋಗುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಗಣಪತಿ ಆವರಣದಿಂದ ಪಟ್ಟಣದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ವಿನಾಯಕ ಯುವಕ ರೈತ ಸಂಘದ ಅಧ್ಯಕ್ಷ ಕೆ.ಎಂ.ಪರಮೇಶ್ವರಪ್ಪ, ಉಪಾಧ್ಯಕ್ಷರು ಡಿ.ಎಸ್.ವಿಜಯ್, ಕಾರ್ಯಧ್ಯಕ್ಷರು ಜಿ.ಎಸ್.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಾಬು, ಕಾರ್ಯದರ್ಶಿ ಡಿ.ಪಿ.ದರ್ಶನ್, ಗಿರಿಶ್, ಸಹಕಾರ್ಯದರ್ಶಿ ಅಭಿಷೇಕ್, ಖಜಾಂಚಿ ರಮೇಶ್ ನಾಡಿಗ್ ಪ್ರಥಮ ದರ್ಜೆ ಗುತ್ತಿಗೆದಾರ ಮಾಲತೇಶ್ ಹಾಗೂ ಎಲ್ಲಾ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
