ಕಾನೂನುಗಳ ಅರಿವು, ಕಾನೂನು ನೆರವು ಕಾರ್ಯಕ್ರಮ

ಹಾನಗಲ್ಲ :

       ಪೊಲೀಸ ಇಲಾಖೆಯಿಂದ ಸಾರ್ವಜನಿಕರಿಗೆ ನ್ಯಾಯ ದೊರೆಯದಿದ್ದರೆ ದೂರು ನೀಡಿ ನ್ಯಾಯ ಪಡೆಯುವ ಅಕಾಶವಿದ್ದು, ನಕಾರಾತ್ಮಕ ವಿಚಾರಗಳಿಂದ ದೂರವಾಗಿ, ಎಲ್ಲರೂ ಸಕಾರಾತ್ಮಕ ಯೋಚನೆಗೆ ಮುಂದಾಗಬೇಕು ಎಂದು ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ಸುಜಾತ ಪಾಟೀಲ ಸಲಹೆ ಮಾಡಿದರು.

     ಬುಧವಾರ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿರಿಯ ಸಿವಿಲ್ ಜಡ್ಜ ಮತ್ತು ಜೆಎಂಎಫ್‍ಸಿ ನ್ಯಾಯಾಲಯ, ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಸಂಯುಕ್ತವಾಗಿ ಪೊಲೀಸ ದೂರು ಪ್ರಾಧಿಕಾರ ಮತ್ತು ಮೂಲಭೂತ ಕಾನೂನುಗಳ ಅರಿವು, ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಸ್ಥ ಸಮಾಜ ನಿರ್ಮಾಣದ ಯಶಸ್ಸಿನಲ್ಲಿ ಪೊಲೀಸ್ ಇಲಾಖೆಯ ರಕ್ಷಣೆ ನಿರ್ವಹಣೆಯೂ ಅತ್ಯಂತ ಆವಶ್ಯಕ.

     ಈ ಸಂದರ್ಭದಲ್ಲಿ ಪೊಲೀಸ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಗಳಾದರೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆಯಲು ಹೊಸ ಕಾನೂನು ಜಾರಿಯಾಗಿದೆ ಎಂದ ಅವರು, ವಿದ್ಯಾರ್ಥಿ ಸಮುದಾಯ ನಾಳೆಗಾಗಿ ಇಂದೇ ಗುರು ಹಿರಿಯರ ಮಾರ್ಗದರ್ಶನದಲ್ಲಿ ಎಚ್ಚರದಿಂದ ಜೀವನ ನಡೆಸಬೇಕು. ಒಳ್ಳೆಯದನ್ನು ಪಡೆಯಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

     ಹಾನಗಲ್ಲ ಪಿಎಸ್‍ಐ ಗುರುರಾಜ ಮೈಲಾರ ಪೊಲೀಸ ದೂರು ಪ್ರಾಧಿಕಾರ ವಿಷಯದ ಕುರಿತು ಮಾತನಾಡಿ, ಪೊಲೀಸ ಎಂದರೆ ವಿಲನ್ ಅಲ್ಲ, ಪೊಲೀಸರನ್ನು ಕರಿಮೆವು ಕೊತ್ತಂಬರಿಯಂತೆ ಬಳಸಿಕೊಳ್ಳಲೂ ಅವಕಾಶವಿಲ್ಲ. ಪೊಲೀಸರು ಪ್ರಶ್ನಾತೀತರೂ ಅಲ್ಲ, ಪೊಲೀಸ ಠಾಣೆಗೆ ಹೋಗುವುದು ಅಪರಾಧವೂ ಅಲ್ಲ. ಪೊಲೀಸರ ಒಳ್ಳೆಯ ಕೆಲಸಗಳನ್ನು ಪ್ರೋತ್ಸಾಹಿಸಬೇಕು, ಬರಿ ದೋಷಗಳ ವಿಜೃಂಭಣೆ ಮಡುವುದಲ್ಲ ಎಂದ ಅವರು ವಾಹನ ಚಾಲನೆ ವಿಷಯದಲ್ಲಿ ನಿಯಮಗಳ ಉಲ್ಲಂಘನೆ ಸರಿಯಲ್ಲ. ಅಲ್ಲದೆ ಆನ್‍ಲೈನ ಚೀಟಿಂಗ್‍ನಂತಹ ಅಪರಾಧಕ್ಕೆ ಸಿಕ್ಕಿಕೊಳ್ಳಬೇಡಿ, ಮೊಬೈಲ ಒಳ್ಳಯದಕ್ಕೆ ಬಳಸಿ ಎಂದು ಕರೆ ನೀಡಿದರು.

      ನ್ಯಾಯವಾದಿ ರವಿಬಾಬು ಪೂಜಾರ, ಮೋಟಾರು ವಾಹನ ಕಾಯಿದೆ ವಿಷಯದ ಕುರಿತು ಮಾತನಾಡಿ, ವಾಹನ ಸವಾರರು, ಮಾಲೀಕರು ಕಾನೂನು ಮರಿದರೆ ಬದುಕೇ ಮುರಿದು ಹೋಗುವ ಸಂದರ್ಭಗಳುಂಟು. ನಿಯಮ ಬಾಹೀರ ವಾಹನ ಚಾಲನೆಯಿಂದ ದಂಡ ಅಪಘಾತಕ್ಕೆ ದಾರಿಯಾದೀತು. ಈ ಮೂಲಕ ಅಪರಾಧಕ್ಕೆ ಸಿಕ್ಕಿ ಹಾಕಿಕೊಳ್ಳುವ ಸಂದರ್ಭಗಳೇ ಹೆಚ್ಚು. ಎಲ್ಲರಿಗೂ ಸ್ವಾತಂತ್ರ್ಯವಿದೆ ಆದರೆ ಅದು ಸ್ವೇಚ್ಛಾರವಾಗದಿರಲಿ.

       ವಿದ್ಯಾರ್ಥಿಗಳು ಈಗಲೇ ತಮ್ಮ ಓದುವ ಅವಧಿಯಲ್ಲಿ ಒಳ್ಳೆಯದನ್ನು ಅರಿತು ನಡೆಯಬೇಕು ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ ಮುಖ್ಯ ಅತಿಥಿಯಾಗಿ ಮಾತನಾಡಿ, ನಾಳೆಯ ಬದುಕಿನಲ್ಲಿ ನಾವು ಮಾದರಿಯಾಗಲು, ಮಾದರೀ ಜೀನವ ನಡೆಸಿದ ಮಹಾತ್ಮರು, ಸಾಧಕರ ಜೀವನವನ್ನು ಅರ್ಥ ಮಾಡಿಕೊಳ್ಳಬೇಕು. ಕೀಳರಮೆಯಿಂದ ಹೊರಬಂದು, ನೈತಿಕ ಶಿಕ್ಷಣ ಪಡೆದು, ಸಾರ್ಥಕ ಜೀವನಕ್ಕೆ ಉತ್ತಮ ಅಧ್ಯಯನಕ್ಕೆ ಮುಂದಾದೆ ಮಾತ್ರ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

        ಪ್ರಾಚಾರ್ಯ ಪ್ರೊ.ಮಾರುತಿ ಶಿಡ್ಲಾಪೂರ ಅಧ್ಯಕ್ಷತೆವಹಿಸಿದ್ದರು. ನ್ಯಾಯವಾದಿಗಳಾದ ವಿನಾಯಕ ಕುರುಬರ, ಎಸ್.ಜಿ.ತಿಳವಳ್ಳಿ ಅಧಿಕ ಸಹಾಯಕ ಸರಕಾರಿ ಅಭಿಯೋಜಕಿ ಇಂದುಮತಿ ಪಾಟೀಲ, ಪ್ರೊ.ಸಿ.ವಾಯ್.ಹಾವೇರಿ, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಪ್ರೊ.ಎಚ್.ಎಸ್.ಬಾರ್ಕಿ, ಉಪನ್ಯಾಸಕರಾದ ರವಿಕುಮಾರ ಹೊನ್ನಾಳಿ, ವೀಣಾ ದೇವರಗುಡಿ, ಆಯಿಷಾ, ರಾಜು ಮರಡಿ, ಗೌರಿ ಜಡೆಗೊಂಡರ ಅತಿಥಿಗಳಾಗಿದ್ದರು. ಕುಮಾರಿ ದುರ್ಗಾಲಕ್ಷ್ಮೀ ಪ್ರಾರ್ಥನೆ ಹಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link