ಹಾನಗಲ್ಲ :
ದೂರದ ಬ್ಯಾಡಗಿಯಲ್ಲಿರುವ ಹಾನಗಲ್ಲ ತಾಲೂಕಿಗೆ ಸಂಬಂಧಿಸಿದ ಕಾರ್ಮಿಕ ಇಲಾಖೆಯನ್ನು ಹಾನಗಲ್ಲಿನಲ್ಲಿ ಆರಂಭಿಸುವಂತೆ ಹಾನಗಲ್ಲ ತಾಲೂಕಿನ ಕಾರ್ಮಿಕರು ಹಾಗೂ ಲೋಕ ಮಂಚ ಪದಾಧಿಕಾರಿಗಳು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.
ಲೋಕಮಂತ ನಾಯಕ ಮಂಜುನಾಥ ಕುದರಿ ಅವರ ನೇತೃತ್ವದಲ್ಲಿ ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ ಕಾರ್ಮಿಕ ಬಂಧುಗಳು 42 ಗ್ರಾಮ ಪಂಚಾಯತಿಯುಳ್ಳ ಅತಿ ದೊಡ್ಡ ಹಾನಗಲ್ಲ ತಾಲೂಕಿಗೆ ಕಾರ್ಮಿಕ ಇಲಾಖೆ ಕಚೇರಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹಾನಗಲ್ಲ ತಾಲೂಕಿನ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯಗಳು ಸಿಗುತ್ತಿಲ್ಲ. ಶೇಕಡಾ 70 ರಷ್ಟು ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳಿವ ಎಂಬುದೇ ಗೊತ್ತಿಲ್ಲ. ಹಾನಗಲ್ಲಿನಿಂದ ಬ್ಯಾಡಿಗಿ 65 ಕಿಮಿ ದೂರದಲ್ಲಿದೆ. ಹಾವೇರಿ ಜಿಲ್ಲಾ ಕೇಂದ್ರಕ್ಕಿಂತಲೂ ನಮ್ಮ ತಾಲೂಕು ಮಟ್ಟದ ಕಾರ್ಮಿಕ ಇಲಾಖೆ ದೂರವಿದೆ. ಹತ್ತು ಹಲವು ಬಾರಿ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ .
ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು, ಗಾರೆ ಕೆಲಸದವರು, ರಸ್ತೆ ಕೆಲಸದವರು, ಸೆಂಟ್ರಿಂಗ ಕಾಯಕದವರು, ಗೌಂಡಿ ಕಾರ್ಮಿಕರು ಸೇರಿದಂತೆ ಹತ್ತು ಹಲವು ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳು ದೊರೆಯಬೇಕು. ಅದಕ್ಕಾಗಿ ಹಾನಗಲ್ಲ ತಾಲೂಕಿನ ಕಾರ್ಮಿಕರಿಗಾಗಿ ಹಾನಗಲ್ಲಿನಲ್ಲಿ ಕಚೇರಿ ತೆರೆಯಬೇಕು ಎಂದು ಅವರು ಮನವಿಯಲ್ಲಿ ತಿಳಿಸಿ ಒತ್ತಾಯಿಸಿದ್ದಾರೆ. ರಾಮಚಂದ್ರ ಶಿಡ್ಲಾಪೂರ, ಪಾಲಾಕ್ಷಯ್ಯ ಹಿರೇಮಠ, ಚಂದ್ರಶೇಖರ ಸಾಳುಂಕೆ, ತಿಪ್ಪಣ್ಣ ಕೊಪ್ಪದ, ಅಂಬವ್ವ ಲಮಾಣಿ, ಪದ್ಮಾವತಿ ಮಾಂಗ್ಲೇನವರ ಸೇರಿದಂತೆ ಹಲವು ನಾಯಕರು ಹಾವೇರಿ ಜಿಲ್ಲಾಧಿಕಾರಿಗಳು ಮನವಿ ಅರ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ