ಕನ್ನಡನಾಡು ನುಡಿಗೆ, ಸುಮಾರು 1500 ವರ್ಷಗಳ ಇತಿಹಾಸವಿದೆ

ಹಿರಿಯೂರು:

       ಕನ್ನಡನಾಡು ನುಡಿ, ಸಾಹಿತ್ಯ ಪರಂಪರೆಗೆ ಸುಮಾರು 1500 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಆದಿ ಕವಿ ಪಂಪನಿಂದ ಇಂದಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕತರಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತರು, ಮಾಸ್ತಿವೆಂಕಟೇಶಅಯ್ಯಂಗಾರ್, ಡಾ||ವಿ.ಕೃ.ಗೋಕಾಕ್, ಡಾ||ಯು.ಆರ್.ಅನಂತಮೂರ್ತಿ, ಗಿರೀಶ್‍ಕಾರ್ನಾಡು, ಚಂದ್ರಶೇಖರ್‍ಕಂಬಾರ, ಮುಂತಾದ ಮಹಾನ್ ಕವಿಗಳು, ಕನ್ನಡಭಾಷೆ ಸಾಹಿತ್ಯ ಸಂಸ್ಕøತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಎಂಬುದಾಗಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.

      ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯಹಬ್ಬಗಳ ಆಚರಣ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 63ನೇ ವರ್ಷದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಇಂದಿನ ಸಂದರ್ಭದಲ್ಲಿ ಕನ್ನಡನಾಡಿನ ನೆಲ-ಜಲ ರಕ್ಷಣೆಗಾಗಿ, ಕನ್ನಡನಾಡಿನ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರುಗಳಾದ ಆಲೂರುವೆಂಕಟರಾಯರು, ಬಿ.ಎಂ.ಶ್ರೀಕಂಠಯ್ಯ, ಅ.ನ.ಕೃಷ್ಣರಾಯರು, ಗೊರೂರುರಾಮಸ್ವಾಮಿಅಯ್ಯಂಗಾರ್, ಎಸ್.ನಿಜಲಿಂಗಪ್ಪ, ಕೆ.ಎಚ್.ಪಾಟೀಲ, ಕಡಿದಾಳಮಂಜಪ್ಪ, ಕೆಂಗಲ್‍ಹನುಮಂತಯ್ಯ, ಹೆಚ್.ಎಸ್.ದೊರೆಸ್ವಾಮಿ, ಪಾಟೀಲ್‍ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರು ಹಾಗೂ ಕನ್ನಡಪರ ಹೋರಾಟಗಾರರನ್ನು ಸ್ಮರಿಸುವುದು ನಮ್ಮನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರಲ್ಲದೆ ನಮ್ಮ ಸುತ್ತಮುತ್ತಲಿನ ಹಸಿರು ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಹಸಿರು ಕರ್ನಾಟಕವನ್ನು ನಿರ್ಮಾಣ ಮಾಡೋಣ ಎಂದರು.

      ಧ್ವಜಾರೋಹಣ ನೇರವೇರಿಸಿದ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಮಾತನಾಡಿ, ಈ ನಮ್ಮ ಕನ್ನಡನಾಡು ಭವ್ಯ ಇತಿಹಾಸ ಪರಂಪರೆ ಹೊಂದಿದ್ದು, ಕಾವೇರಿಯಿಂದ ಗೋದಾವರಿವರೆಗೆ ವಿಸ್ತಾರವಾದ ನಾಡಾಗಿತ್ತು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬ್ರಿಟಿಷರ ಕಾಲದಲ್ಲಿ ವಿವಿಧ ಆಡಳಿತಕ್ಕೆ ಒಳಪಟ್ಟು, ಹರಿದು ಹಂಚಿ ಹೋಗಿದ್ದ ಈ ಕನ್ನಡನಾಡು ಕನ್ನಡಿಗರ ನಿರಂತರ ಹೋರಾಟಗಳ ಫಲವಾಗಿ 1956 ನವಂಬರ್ 1ರಂದು ಏಕೀಕೃತ ಮೈಸೂರು ರಾಜ್ಯ ಉದಯವಾಯಿತು ಎಂದರಲ್ಲದೆ ಆರಂಭದಲ್ಲಿ ಕರ್ನಾಟಕವನ್ನು ಮೈಸೂರುರಾಜ್ಯ ಎಂಬುದಾಗಿ ಬಳಕೆಯಲ್ಲಿದ್ದು, 1973 ನವಂಬರ್ 1ರಂದು ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂಬುದಾಗಿ ಮರುನಾಮಕರಣ ಮಾಡಲಾಯಿತು ಎಂದರು.

       ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಮುಖಂಡರಾದ ಡಿ.ಟಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಮಂಜುಳ, ಉಪಾಧ್ಯಕ್ಷೆ ಇಮ್ರಾನಬಾನು, ತಾ.ಪಂ.ಅಧ್ಯಕ್ಷ ಎಸ್.ಚಂದ್ರಪ್ಪ, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷರಾದ ಎಸ್.ಪಿ.ಟಿ.ದಾದಾಪೀರ್, ಜಿ.ಪಂ.ಸದಸ್ಯರುಗಳಾದ ಸಿ.ಬಿ.ಪಾಪಣ್ಣ, ಗೀತಾನಾಗಕುಮಾರ್, ಶಶಿಕಲಾಸುರೇಶ್‍ಬಾಬು, ರಾಜೇಶ್ವರಿ, ನಗರಸಭೆಸದಸ್ಯರುಗಳಾದ, ಎ.ಮಂಜುನಾಥ್, ಟಿ.ಚಂದ್ರಶೇಖರ್, ಪ್ರೇಮ್‍ಕುಮಾರ್, ಅಬ್ಬಾಸ್, ಪುಷ್ಪಲತಾ, ಸುಜಾತಾ, ಡಿವೈಎಸ್‍ಪಿ ವೆಂಕಟಪ್ಪನಾಯಕ, ಸಿಪಿಐ ಕಾಂತರಾಜ್, ಪಿಎಸ್‍ಐ ಮಂಜುನಾಥ್, ನಗರಸಭೆ ಆಯುಕ್ತರಾದ ರಮೇಶ್‍ಸುಣಗಾರ್, ಸಮಾಜ ಕಲ್ಯಾಣಅಧಿಕಾರಿ ಕೃಷ್ಣಮೂರ್ತಿ, ರೈತಸಂಘದ ಅಧ್ಯಕ್ಷ ಕೆ.ಸಿ.ಹೋರಕೆರಪ್ಪ, ಕನ್ನಡಸಾಹಿತ್ಯ ಪರಿಷತ್‍ಅಧ್ಯಕ್ಷ ಹೆಚ್.ಆರ್.ಶಂಕರ್, ಕೇಶವಮೂರ್ತಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

     ಆರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಿ.ವೈ.ನಟರಾಜ್ ಸ್ವಾಗತಿಸಿದರು, ದೈಹಿಕಶಿಕ್ಷಕ ಶಶೀಧರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link