ಚಿತ್ರದುರ್ಗ;
ಚಿತ್ರದುರ್ಗದಲ್ಲಿ ನಡೆಯಲಿರುವ 4ನೆಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಲೇಖಕ ಎಸ್.ಆರ್.ಗುರುನಾಥ ರವರನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಬುಧವಾರದಂದು ಅಧಿಕೃತವಾಗಿ ಆಹ್ವಾನಿಸಿದರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ತಾಲ್ಲೂಕು ಅಧ್ಯಕ್ಷ ಎಂ.ಆರ್.ದಾಸೇಗೌಡ ಹಾಗೂ ಇತರರು ನಗರದ ಐ.ಯು.ಡಿ.ಪಿ ಬಡಾವಣೆಯಲ್ಲಿರುವ ಗುರುನಾಥ್ ಅವರ ನಿವಾಸಕ್ಕೆ ಬೇಟಿ ನೀಡಿ ಅಧಿಕೃತವಾಗಿ ಆಹ್ವಾನಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ, ಡಾ.ದೊಡ್ಡಮಲ್ಲಯ್ಯ, ನಮ್ಮ ಆಯ್ಕೆ ಎಲ್ಲರಿಗೂ ಖುಷಿ ತಂದಿದೆ. ಗುರುನಾಥ್‍ರವರು ಅತ್ಯುತ್ತಮ ಕಥೆಗಾರರಾಗಿ ಕನ್ನಡ ಸಾಹಿತ್ಯದಲ್ಲಿ ಬೆರಗನ್ನು ಮೂಡಿಸಿದವರು. ಮತ್ತು ಸಜ್ಜನಿಕೆಗೆ ಸಂಪನ್ನ ಗುಣಕ್ಕೆ ಹೆಸರಾದವರು ಎಂದು ಅಭಿಪ್ರಾಯಪಟ್ಟರು.
ಪರಿಷತ್ತಿನ ಆಹ್ವಾನವನ್ನು ಸ್ವೀಕರಿಸಿ ಮಾತನಾಡಿದ ಗುರುನಾಥ್ ಅವರು, ಈ ಗೌರವಕ್ಕೆ ನಾನೆಷ್ಟು ಅರ್ಹನೋ ತಿಳಿಯದು. ಆದರೆ ನಮ್ಮ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನನ್ನನ್ನು ಆಯ್ಕೆ ಮಾಡಿದುದು ದೊಡ್ಡ ಗೌರವ. ಅದನ್ನು ಶಿರಸಾವಹಿಸುತ್ತೇನೆ’ ಎಂದು ಧನ್ಯವಾದಗಳನ್ನು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಆರ್. ದಾಸೇಗೌಡರು ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿದ ಸಮಗ್ರ ವಿವರಣೆಯನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪದ ಗೌರ ಕಾರ್ಯದರ್ಶಿಗಳಾದ ಕೆ.ಎಂ.ಯೂಸೂಫ್, ಗೌರವ ಕೋಶಾಧ್ಯಕ್ಷರಾದ ಎಂ.ಗೋವಿಂದಪ್ಪ, ಮಹಿಳಾ ಪ್ರತಿನಿಧಿ ಶ್ರೀಮತಿ ಶರೀಫಾಬಿ, ತಾಲ್ಲೂಕುಕಸಾಪದ ಗೌರವ ಕಾರ್ಯದರ್ಶಿ ಶ್ರೀಮತಿ ಶ್ಯಾಮಲಾಶಿವಪ್ರಕಾಶ್, ಗೌರವ ಕೋಶಾಧ್ಯಕ್ಷರಾದ ಎಸ್.ಸುರೇಶ್, ತಾಲ್ಲೂಕು ಪರಿಷತ್ತಿನ ಪದಾಧಿಕಾರಿಗಳಾದಂತಹ ಅಲ್ಲಿಪೀರ್, ನಿವೃತ್ತ ಪ್ರಾಂಶುಪಾಲರುಗಳಾದ ಜೆ.ಯಾದವರೆಡ್ಡಿ, ಎಸ್.ಆರ್.ಶಿವಕುಮಾರ್ ಗ್ರಾಮದ ಮುಖಂಡರುಗಳು ಮತ್ತು ಸ್ವಾಗತ ಸಮಿತಿಯ ನಿವೃತ್ತ ಬಿಇಒ ಸಿ.ಎಂ. ರಂಗಸ್ವಾಮಿ, ಎಂ.ಸಿದ್ದಪ್ಪ, ಮೂರ್ತಿನಾಯ್ಕ, ಪ್ರಕಾಶ್, ಎಂ.ಜೆ.ಲೋಹಿತ್ ವಿನಯ್‍ಕುಮಾರ್ ಸರ್ವಾಧ್ಯಕ್ಷರ ಧರ್ಮಪತ್ನಿ ಪಿ.ಸುಶೀಲ, ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
