ಕೊರಟಗೆರೆ
ವಾಹನ ಸವಾರರಸ್ತೆಯಲ್ಲಿನ ನೀರುತುಂಬಿರುವಗುಂಡಿಯನ್ನುತಪ್ಪಿಸಲು ಪರದಾಡಿ ಖಾಸಗಿ ಬಸ್ಸಿನ ಚಾಲಕ ಹೊಳವನಹಳ್ಳಿ ಮುಖ್ಯರಸ್ತೆಯ ಪಕ್ಕದ ಮನೆಯೊಂದರಕೌಪೌಂಡಿಗೆಡಿಕ್ಕಿ ಹೊಡೆದಿರುವ ಪರಿಣಾಮಐದಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕೊರಟಗೆರೆ ಪಟ್ಟಣದಿಂದ ಹೊಳವನಹಳ್ಳಿ ಮಾರ್ಗ ಮಧ್ಯೆಇರುವ ವನಮಾಲ ಪೇಟ್ರೊಲ್ ಬಂಕಿನ ಸಮೀಪದ ಮುಖ್ಯರಸ್ತೆಗೆ ಹೊಂದಿಕೊಂಡ ಮನೆಯಕೌಪೌಂಡಿನ ಒಳಗೆ ಬಸ್ಸು ನುಗ್ಗಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರನ್ನುಕೊಡಲೇ ಬಸ್ಸಿನ ಚಾಲಕ ಬಸ್ಸಿನಿಂದ ಕೆಳಗೆ ಇಳಿಸಿ ಪ್ರಯಾಣಿಕರಿಗೆತೊಂದರೇಆಗದಂತೆ ಮಾಡಿದ್ದಾರೆ.
ಗುಂಡಿಗಳನ್ನು ತಪ್ಪಿಸುವ ವೇಳೆ ಖಾಸಗಿ ಬಸ್ಸಿನ ಚಾಲಕನಿಗೆ ಬಸ್ ನಿಯಂತ್ರಣಕ್ಕೆ ಬರದೇ ಖಾಸಗಿ ಮನೆಯಕೌಪೌಂಡಿಗೆಡಿಕ್ಕಿ ಹೊಡೆದ ಪರಿಣಾಮಐದಾರುಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ಸಿನ ಮುಂದಿನ ಗ್ಲಾಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಕೊರಟಗೆರೆ ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿಘಟನೆ ನಡೆದಿದೆ.