ನಾಳೆಯಿಂದ `ಕಾವೇರಿ ಆನ್‍ಲೈನ್ ಸೇವೆ’ ಪ್ರಾರಂಭ

ಬೆಂಗಳೂರು

        ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜನಪರ ಉಪಕ್ರಮವಾದ `ಕಾವೇರಿ ಆನ್‍ಲೈನ್ ಸೇವೆ’ ಗಳನ್ನು ಶುಕ್ರವಾರದಂದು ಅಧಿಕೃತವಾಗಿ ಚಾಲನೆಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

      “ನ.12ರಂದು ಈ ಮೊದಲು ನಿಗದಿಯಾಗಿದ್ದ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಹೀಗಾಗಿ, ಈ ಕಾರ್ಯಕ್ರಮವನ್ನು ಶುಕ್ರವಾರ ನಡೆಸಲಾಗುತ್ತಿದೆ,’’ ಎಂದು ತಿಳಿಸಿದ್ದಾರೆ.

         ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಈ ಸಂಬಂಧ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ಆನ್‍ಲೈನ್ ಸೇವೆಗಳನ್ನು ನಾಡಿಗೆ ಸಮರ್ಪಿಸಲಿದ್ದಾರೆ ಎಂದು ದೇಶಪಾಂಡೆ ಹೇಳಿದ್ದಾರೆ.

        ಕಾವೇರಿ ಆನ್‍ಲೈನ್ ಸೇವೆಗಳ ಜಾಲದಲ್ಲಿ ಆಸ್ತಿ ನೋಂದಣಿ ಮತ್ತು ಅದಕ್ಕೆ ಸಂಬಂಧಿಸಿದ ಇತರ ಸೇವೆಗಳೆಲ್ಲವೂ ಸಾರ್ವಜನಿಕರಿಗೆ ಅತ್ಯಂತ ಸುಲಭವಾಗಿ, ಅವರಿರುವಜಾಗದಲ್ಲೇ ಸಿಗಲಿದೆ. ಜನರು ತಂತ್ರಜ್ಞಾನವನ್ನು ಆಧರಿಸಿದ ಈ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಂದಾಯ ಸಚಿವರು ವಿವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap