ತಿಪಟೂರು :
ಭೂಮಿಯ ಮೇಲೆ ಜೀವಿಗಳು ಜೀವಿಸಲು ನೀರು ಅತ್ಯವಶ್ಯಕವಾದುದು, ನೀರಿಲ್ಲದೇ ಬದುಕಲು ಸಾಧ್ಯವಿಲ್ಲದಿದ್ದರೆ, ದೇಶಕಟ್ಟಲು ಹೇಗೆ ಸಾಧ್ಯ ಎಂದು ಜೆ.ಡಿ.ಎಸ್.ಮುಖಂಡ ಲೋಕೇಶ್ವರ್ ತಿಳಿಸಿದರು.
ನಗರದ ತಮ್ಮ ಗೃಹಕಛೇರಿಲ್ಲಿ ಕರೆದಿದ್ದ ಪತ್ರಿಕಾಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಶಾಕರಾದ ಬಿ.ಸಿ.ನಾಗೇಶ್ ಜಿಲ್ಲೆಯಲ್ಲಿ ಮತ್ತು ತಾಲ್ಲೂಕಿನಲ್ಲಿ ದೇಗೇವಡರ ಅಲೆಗೆ ಹೆದರಿ ಅತಾಶಭಾವದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು ನಿನ್ನೆ ಪತ್ರಿಕಾಗೋಷ್ಠಿಯನ್ನು ಕರೆದು ಹಲವಾರು ದಾಖಲೆಗಳನ್ನು ತೋರಿಸಿ ಹಾಸನ ಜಿಲ್ಲೆಯ ಹಲವಾರು ನೀರಾವರಿ ಯೋಜನೆಗಳು ಹಾಗೇಯೇ ಇವೆ ಇನ್ನು ಇಲ್ಲಿಗೆ ಬಂದು ಹೇಗೆ ನೀರುಕೊಡುತ್ತಿರಾ ಎಂದು ತಿಳಿಸಿದ್ದರು.
ಆದರೆ ಆ ಯೋಜನೆಗಳು ಪ್ರಾರಂಭವಾದಾಗ ಇದ್ದ ನಮ್ಮ ಸರ್ಕಾರ ಕಳೆದ ಹತ್ತುವರ್ಷಗಳಿಂದ ಬರಲಿಲ್ಲ ಜೊತೆಗೆ ಈಗ ಅಧಿಕಾರವಹಿಸಿಕೊಂಡು ಒಂದು ವರ್ಷವೂ ತುಂಬಿಲ್ಲ ನಿನ್ನೆ ತಿಳಿಸಿದಂತೆ ಅನ್ನಧಾತಪ್ರಭು ರೈತರ ಸಾಲಮನ್ನಾಗೆ ಹಣವನ್ನೊ ಹೊಂದಿಸುತ್ತಿದ್ದು ಅದು ಮುಗಿದ ತಕ್ಷಣವೇ ಅಲ್ಲಿನ ಕಾಮಗಾರಿಗಳ ಜೊತೆಗೆ ಹೇಮಾವತಿ ಜಲಾಶಯದಿಂದ ನೇರವಾಗಿ ಹೊನ್ನವಳ್ಳಿಗೆ ನೀರನ್ನು ಹರಿಸುವ ಪ್ರಯತ್ವನ್ನು ಮಾಡಲಾಗುತ್ತದೆಂದು ಸ್ಥಳೀಯ ಶಾಸಕರಿಗೆ ತಿಳಿಸಿದ ಅವರು ಹೊನ್ನವಳ್ಳಿ ಭಾಗಕ್ಕೆ ದಾಖಲೆ ತೋರಿಸಿ ನೀರನ್ನು ತುಂಬಿಸಿದ್ದೇನೆಂದು ಹೇಳುವವರು ಹೊನ್ನವಳ್ಳಿಗೆ ಪ್ರಚಾರಕ್ಕೆ ಏಕೆ ಹೋಗುತ್ತಿಲ್ಲ, ನೀರು ಕೊಡುತ್ತೇನೆಂದು ಗದ್ದುಗೆಹಿಡದ ಶಾಸಕರ ನೀರನ್ನು ಪ್ರಾಮಾಣಿಕವಾಗಿ ಕೊಟ್ಟಿದ್ದರೆ ಮತಕೇಳಬಹುದಿತ್ತಲ್ಲವೇ? ಎಂದು ಶಾಸಕರನ್ನು ಛೇಡಿಸಿದರು.
ನಾವು ಬದುಕಿದ್ದರೆ ಉಪ್ಪುಮಾರಿಕೊಂಡು ಜೀವಿಸಬಹುದು ಆದರೇ ನಾವೇ ಇಲ್ಲದಿದ್ದರೆ ದೇಶ ಉಳಿಯಲು ಹೇಗೆ ಸಾಧ್ಯ, ನಮ್ಮದು ಮೊದಲೇ ಕೃಷಿಪ್ರದಾನ ಮತ್ತು ಹಳ್ಳಿಗಳ ರಾಷ್ಟ್ರ ಕೃಷಿಗೆ ಮುಖ್ಯವಾಗಿ ನೀರು ಬೇಕು ಅದಕ್ಕಾಗಿಯೇ ನಾವು ಪ್ರಯತ್ನಿಸುತ್ತಿದ್ದು ದೇವೇಗೌಡರ ಹೇಳಿಕೆಯಂತೆ ನೀರನ್ನು ಕೊಡುತ್ತೇವೆಂದರು.
ಎರಡು ಹೊತ್ತು ಊಟಕ್ಕೂ ಗತಿಇಲ್ಲದವರು ಸೈನ್ಯಕ್ಕೆ ಸೇರುತ್ತಾರೆಂದು ಮುಖ್ಯಮಂತ್ರಿಗಳು ಹೇಳಿಕೆಯನ್ನು ಇಟ್ಟುಕೊಂಡು ಇವರು ಪ್ರತಿಭಟಿಸಲು ಮುಂದಾಗಿದ್ದಾರೆ. ಆದರೆ ಸೈನಿಕರ ಸಾಹಸವನ್ನು ತಾವೇ ಮಾಡಿದಂತೆ ಬಿ.ಜೆ.ಪಿಯವರು ಹೇಳುತ್ತಿರುವುದು ಹಾಸ್ಯಸ್ಪದವಲ್ಲವೇ? ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿರುವುದು ಎರಡು ಹೊತ್ತಿನ ಊಟಕ್ಕೂ ಗತಿಇಲ್ಲದ ಬಡವರು ಮತ್ತು ಮಧ್ಯಮಮವರ್ಗದವರ ಬಲಿದಾನವನ್ನು ಬಲಿದಾನದವನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆಂದು ಹೇಳಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆ.ಡಿ.ಎಸ್ ಕಾರ್ಯಾಧ್ಯಕ್ಷ ಎಸ್. ಶಿವಸ್ವಾಮಿ, ಎ.ಪಿ.ಎಂ.ಸಿ ನಿರ್ದೇಶಕ ತರಕಾರಿ ನಾಗರಾಜು, ಮುಖಂಡರಾದ ರೇಖಾ ಅನೂಪ್. ಲಲಿತಾ ಸಂತೋಷ್, ನಿಜಗುಣ, ರಾಜಶೇಖರ್, ಫೈರೋಜ್ ಖಾನ್, ನಾಗರಾಜು, ಶಂಕರ್ ಮತ್ತಿರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
