ದಲಿತ ವಚನಕಾರರ ವಚನಗಳನ್ನು ಬೆಳಕಿಗೆ ತರುವ ಕೆಲಸವಾಗಬೇಕು

ಹಾವೇರಿ

     ಹನ್ನೆರಡನೆಯ ಶತಮಾನದ ದಲಿತ ವಚನಕಾರರು ರಚಿಸಿದ ವಚನಗಳು ಬೆಳಕಿಗೆ ಬರಬೇಕಾಗಿದೆ. ದಲಿತ ವಚನಕಾರರ ಜೀವನ ದರ್ಶನ ಅವರ ತತ್ವಗಳು ಹೆಚ್ಚು ಜನರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಶಾಸಕ ನೆಹರು ಓಲೇಕಾರ ಅವರು ಹೇಳಿದರು

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಟಿ.ಎಂ.ಇ.ಎ.ಎಸ್. ಬಿ.ಇಡಿ ಕಾಲೇಜ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

        ಹನ್ನೆರಡನೆಯ ಶತಮಾನ ಅದ್ಭುತವಾದ ಜನಮಾನಸ ಹೊಂದಿದ ಶತಮಾನ. 20ನೇ ಶತಮಾನದ ಅಂಚಿನಲ್ಲಿದ್ದರೂ ನಾವು 12ನೇ ಶತಮಾನದ ಶರಣರ ಜೀವನ ಕ್ರಮ, ಅವರು ರಚಿಸಿದ ವಚನಗಳ ತತ್ವಾದರ್ಶ ಇಂದಿಗೂ ನೆನಪಿಸಿಕೊಳ್ಳುತ್ತೇವೆ ಎಂದು ಹೇಳಿದರು.

         ಮಹಾ ಮಾನವತಾವಾದಿ ಬಸವಣ್ಣನವರ ಮಾರ್ಗದರ್ಶನದಲ್ಲಿ ಕಾಯಕ ಶರಣರು, ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಗೂಳಯ್ಯ, ಉರುಲಿಂಗಿ ಪೆದ್ದಿಯವರು ರಚಿಸಿದ ವಚನಗಳು ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಮ ಸಮಾಜ ನಿರ್ಮಾಣ ಮಾಡುವ ಒಳ್ಳೆಯ ಆಶಯಗಳನ್ನು ಒಳಗೊಂಡಿದ್ದವು. ಇಂತಹ ದಲಿತ ವಚನಕಾರರು ಹೆಚ್ಚು ಬೆಳಕಿಗೆ ಬರಬೇಕಾಗಿದೆ.

         ಅವರು ರಚಿಸಿದ ವಚನಗಳು ಜನಸಾಮಾನ್ಯರಿಗೆ ತಲುಪಬೇಕಾಗಿದೆ. ಈ ವಚನಗಳ ಮೇಲೆ ಚರ್ಚೆಗಳು ವಿಮರ್ಶೆಗಳು, ಹೊಸ ಆಲೋಚನೆಗಳು ಬೆಳೆದು ಸಮಾಜದ ಒಳಿತಿಗೆ ಬೆಳಕು ಚೆಲ್ಲಬೇಕಾಗಿದೆ. ಇಂದಿನ ವಿದ್ಯಾರ್ಥಿ ಯುವ ಸಮೂಹ ದಲಿತ ವಚನಕಾರರ ಕುರಿತು ಆಸಕ್ತಿಯಿಂದ ಅಧ್ಯಯನಮಾಡಬೇಕು. ಹೊಸ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.

         ಇಂದಿನ ರಾಜಕಾರಣದಲ್ಲಿ ವಿಷಮ ಮನಸ್ಥಿತಿ ಬೆಳೆದಿದೆ. ಬೇರೆಯವರನ್ನು ತುಳಿದು ನಾವು ಬೆಳೆಯಬೇಕು ಎನ್ನುವ ಸ್ಥಿತಿಯಲ್ಲಿದೆ. ಇಂತಹ ಸಂದರ್ಭದಲ್ಲಿ 12ನೆಯ ಶತಮನದ ಕಾಯಕ ಯೋಗಿಗಳ ಜೀವನ ಕ್ರಮ ಅರಿತುಕೊಳ್ಳಬೇಕು. ತಮ್ಮನ್ನು ತಾವು ಸಮಾಜಕ್ಕೆ ಅರ್ಪಿಸಿಕೊಂಡು ಬೇರೆಯವರನ್ನು ಬೆಳೆಸಬೇಕ, ಸಮಾಜವನ್ನು ಬೆಳೆಸಬೇಕು ಎಂಬ ಶರಣರ ಮನೋಭಾವ ನಾವೆಲ್ಲ ರೂಢಿಸಿ ಕೊಳ್ಳಬೇಕಾಗಿದೆ ಎಂದು ಹೇಳಿದರು.

        ಬಿ.ಇಡಿ. ಕಾಲೇಜ ಪ್ರಾಚಾರ್ಯ ಬಸನಗೌಡ ಅವರು ಮಾತನಾಡಿ, ವಚನ ಸಾಹಿತ್ಯದಲ್ಲಿ ವಿಶ್ವಮಾನವ ದೃಷ್ಟಿಕೋನ ಅಡಕವಾಗಿದೆ. ಎಲ್ಲರೂ ಸಮಾನರು ಉತ್ತಮ ಸಮಾಜ ನಿರ್ಮಾಣದ ಆಶಯ 12ನೆಯ ಶತಮಾನದ ಧ್ಯೇಯವಾಗಿತ್ತು. ಅನುಭವ ಮಂಟಪದಲ್ಲಿ ಭಕ್ತಿ, ಕಾಯಕ, ಮೋಕ್ಷ, ಮುಖ್ಯಬೋಧನೆಯ ವಿಷಯವಾಗಿತ್ತು. ಕಾಯಕದಲ್ಲಿ ನಿರತವಾದರೆ ಮಾತ್ರ ಮೋಕ್ಷ ಎಂಬ ಕಾಯಕ ತತ್ವವನ್ನು ಪ್ರತಿಪಾದಿಸಿದ ವಚನ ಸಾಹಿತ್ಯ ಜಗತ್ತಿನ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಹೇಳಿದರು.

         ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ರಾಜ್ಯ ದಲಿತ ಮುಖಂಡ ಡಿ.ಎಸ್. ಮಾಳಗಿ ಅವರು ಮಾತನಾಡಿ, ಕಾಯಕ ಶರಣರ ಜಯಂತಿ ಸಮಾಜಕ್ಕೆ ಸಮಾನತೆಯ ಸಂದೇಶ ನೀಡುವ ಕಾರ್ಯಕ್ರಮವಾಗಿ ಬದಲಾಗಬೇಕಾಗಿದೆ. 12ನೆಯ ಶತಮಾನದ ಎಲ್ಲ ವಚನಕಾರರ ಆಶಯ ಅಸ್ಪøಶ್ಯತೆಯ ನಿವಾರಣೆ, ಸಮಾಜತೆಯ ಸ್ಥಾಪನೆಯ ಆಶಯವಾಗಿತ್ತು. ಇದು ಕೇವಲ ಆಶಯವಾಗಿ ಉಳಿಯದೆ ಅಂರ್ತಜಾತಿ ವಿವಾಹದಂತಹ ಹಲವು ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಸಮ ಸಮಾಜದ ಕನಸನ್ನು ಸಹಕಾರಗೊಳಿಸಿದ ಕೀರ್ತಿ ವಚನಕಾರರದ್ದಾಗಿದೆ. ಅನುಭವ ಮಂಟಪದಲ್ಲಿ ಎಲ್ಲ ಜಾತಿ, ವರ್ಗದ ಜನರು ಭಾಗವಹಿಸುತ್ತಿದ್ದರು. ಎಲ್ಲ ವರ್ಗದ ಶರಣರಿದ್ದರು ಎಂದು ಹೇಳಿದರು.

         ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರು 12ನೆಯ ಶತಮಾನದ ಕಲ್ಯಾಣದ ಕ್ರಾಂತಿಕಾರಿ ಶರಣರಾಗಿದ್ದರು, ಸ್ವಾಭಿಮಾನಿ ಶರಣರಾಗಿದ್ದರು ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಜಗದೀಶ ಬೆಟಗೇರಿ, ಉಡಚಪ್ಪ ಮಾಳಗಿ, ಬಸವನಗೌಡ, ಅಶ್ವಿನ ಕರಿಯಣ್ಣನವರ , ಮಾಲತೇಶ, ದುಗರಪ್ಪ ಮಾದರ, ಶ್ರೀನಿವಾಸ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

 

Recent Articles

spot_img

Related Stories

Share via
Copy link