ಟಿವಿ ಮೊಬೈಲ್‍ನಿಂದ ದೂರವಿರಿ ನಿಮ್ಮ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಿ: ಡಾ. ಸಂಗೀತಾ

ಹರಪನಹಳ್ಳಿ:
 
        ಪ್ರಪಂಚದ ಪ್ರಾಣಿ ಸಂಕುಲದಲ್ಲೇ ಮಾನವನ ಜೀವನ ಅಮೂಲ್ಯವಾಗಿದ್ದು,  ಆರೋಗ್ಯವಂತ ಜೀವನ ನಡೆಸುವುದು ಭಾಗ್ಯವೇ ಸರಿ ಎಂದು  ನೇತ್ರ ತಜ್ಞೆ ಸಂಗೀತ ಅಭಿಪ್ರಾಯ ಪಟ್ಟರು.
 
          ಪಟ್ಟಣದ ತರಳಬಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಕಾರ್ಯಾಲಯ ಹಾಗೂ ತರಳಬಾಳು ವಿದ್ಯಾಸಂಸ್ಥೆಯ  ಸಂಯುಕ್ರಾಶ್ರಯದಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.
 
          ಮಾನವ ದೇಹದಲ್ಲಿ ಕಣ್ಣು ಅವಿಭಾಜ್ಯ ಅಂಗವಾಗಿದ್ದು, ಟಿವಿ ಹಾಗೂ ಮೊಬೈಲ್ ದನೋಡುವುದರಲ್ಲೆ ಹೆಚ್ಚು ಕಾಲ ಕಳೆದು ನಿಮ್ಮ ಅಮೂಲ್ಯವಾದ ಕಣ್ಣುಗಳಿಗೆ ಅನಾರೋಗ್ಯ ತಂದುಕೊಳ್ಳಬೇಡಿ. ಪೋಷಕರು ಮಕ್ಕಳಿಗೆ ಕಣ್ಣಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ಸಲಹೆ ನೀಡಿದರು.
 
         ಕಿವಿ ಮೂಗು ಗಂಟಲು ತಜ್ಞೆ ಡಾ|| ತ್ರಿವೇಣಿ ಮಾತನಾಡಿ. ಕಿವಿ, ಮೂಗಿನಲ್ಲಿ ಅನಾವಶ್ಯಕ ಬೆರಳಾಡಿಸುವುದು ಇತರೆ ವಸ್ತುಗಳನ್ನು ಹಾಕಿಕೊಳ್ಳುವುದು ಸೂಕ್ತವಲ್ಲ. ಸೊಂಕಿನಿಂದ ಕಿವಿ ಮೂಗು ರೋಗಗ್ರಸ್ತವಾಗುತ್ತದೆ. ಕಬ್ಬಿಣದ ವಸ್ತುಗಳನ್ನು ಕಿವಿ ಮೂಗಿನಲ್ಲಿ ಹಾಕಿಕೊಳ್ಳಬೇಡಿ ಎಂದರು.
         ಮುಖ್ಯಶಿಕ್ಷಕ ಎಸ್.ನಂಜಪ್ಪ ಮಾತನಾಡಿ. ಮಕ್ಕಳು ದಿನ ನಿತ್ಯದ ಪಾಠಕ್ಕಿಂತ ಇವತ್ತಿನ ಅರಿವು ಕಾರ್ಯಕ್ರಮ ಬಹಳ ಮಹತ್ವದ್ದು ವಿದ್ಯಾರ್ಥಿಗಳು ಎಷ್ಠೇ ಅಭ್ಯಾಸದ ತಯಾರಿ ಮಾಡಿ ಕೊನೆಗೆ ಅರೋಗ್ಯ ಹಾಳಾದರೆ ಎಲ್ಲಾ ವ್ಯರ್ಥ ಆದ್ದರಿಂದ ಆರೋಗ್ಯದಕಡೆ ಹೆಚ್ಚು ಗಮನ ಹರಿಸುವುದು ಸೂಕ್ತ ಎಂದು ಸಲಹೆ ನೀಡಿದರು.
       ಕಾರ್ಯದರ್ಶಿ  ಕುಸುಮ ಜಗದೀಶ್ ಇವರು ಮಾತನಾಡಿ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ವೈದ್ಯರ ಸಲಹೆ ಬಹಳ ಮುಖ್ಯ. ನೀವುಗಳು ಉತ್ತಮ ಪ್ರಜೆಗಳಾಗಲು ಆರೋಗ್ಯದಕಡೆ ಹೆಚ್ಚು ಗಮನ ಹರಿಸಿ ಪ್ರಗತಿ ಸಾಧಿಸಲು ಮಕ್ಕಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ರಾಜಪ್ಪ, ಸಂಪತ್ ಕುಮಾರ್, ಉಷಾದೇವಿ, ಅಂಬಮ್ಮ, ಶೃತಿ, ಬಷೀರಾ, ಕುಮಾರಿ ದೃತಿಗುಡಿ, ಗಾಯಿತ್ರಿ ಹಾಗೂ ಇತರರು ಉಪಸ್ಥಿತರಿದ್ದರು.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap