ವಿಶ್ವವೇ ಬೆಂಗಳೂರಿನ ಕಡೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಕೆಂಪೇಪೌಡರದು

ತುಮಕೂರು
 
     ಸಮೃದ್ಧ ಬೆಂಗಳೂರು ನಗರವನ್ನು ಕಟ್ಟಿ ವಿಶ್ವವೇ ಬೆಂಗಳೂರಿನ ಕಡೆಗೆ ತಿರುಗಿ ನೋಡುವಂತೆ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರದು ಎಂದು ತುಮಕೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ|| ವೈ.ಎಸ್ ಸಿದ್ದೇಗೌಡ ಕೊಂಡಾಡಿದರು.
     ತುಮಕೂರು ವಿಶ್ವವಿದ್ಯಾನಿಲಯ ಹಾಗೂ ನಾಡಪ್ರಭು ಶ್ರೀ ಕೆಂಪೇಗೌಡ ಪೀಠದ ಸಹಯೋಗದಲ್ಲಿ ವಿಶ್ವವಿದ್ಯಾನಿಲಯದ ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿಂದು ಏರ್ಪಡಿಸಿದ್ದ “ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಕೆಂಪೇಗೌಡರು ಬೆಂಗಳೂರಿನ ರೂಪು-ರೇಷೆ ರೂಪಿಸಿ ಗಡಿ ನಿರ್ಮಿಸಿದವರು. ಹಿಂದಿನ ದಕ್ಷ ರಾಜರಲ್ಲಿ ಅಗ್ರಸ್ಥಾನದಲ್ಲಿದವರು.   ಬೆಂಗಳೂರು ನಗರ ನಿರ್ಮಾಣಕ್ಕೆ ಕಾರಣರಾದವರು. ಕೆಂಪೇಗೌಡರು ಕೇವಲ ಬೆಂಗಳೂರು ನಿರ್ಮಾಣಕ್ಕೆ ಸೀಮಿತವಾಗದೆ ಶಿಕ್ಷಣ ಹಾಗೂ ಸಾಮಾಜಿಕ ಬದಲಾವಣೆ ಬಗ್ಗೆ ದೂರದೃಷ್ಠಿ ಹೊಂದಿದ್ದರು ಎಂದರಲ್ಲದೆ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಟ್ಟ ಇವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ತ್ಯಾಗ ಬಲಿದಾನದ ಮಹಾಪ್ರಭುವಿನ ಜೀವನ ಚರಿತ್ರೆಯನ್ನು ಹಾಗೂ ಅವರ ಆದರ್ಶ ತತ್ವಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಂತಾಗಬೇಕು ಎಂದು ತಿಳಿಸಿದರು.
    ಕರ್ನಾಟಕ ಸಂಘ ಅಧ್ಯಕ್ಷ ಪ್ರೊ|| ಬಿ.ಜಯಪ್ರಕಾಶ್ ಗೌಡ ಉಪನ್ಯಾಸ ನೀಡುತ್ತಾ ಕೆಂಪೇಗೌಡರು ದೂರದೃಷ್ಠಿಯಿಂದ ಬೆಂಗಳೂರನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ನೂರಾರು ಕೆರೆ-ಕಟ್ಟೆ, ಉದ್ಯಾನಗಳನ್ನು ಸ್ಥಾಪಿಸಿ ಮಾದರಿ ನಗರವನ್ನಾಗಿ ರೂಪಿಸಿದ್ದಾರೆ ಎಂದು ತಿಳಿಸಿದರು.
    ಕೆಂಪೇಗೌಡರು ಸಾಮಾಜಿಕ ಕಳಕಳಿ, ಗ್ರಾಮೀಣ ರೈತಪರ ಯೋಜನೆಗಳನ್ನೊಳಗೊಂಡು, ಗುಡಿಗೋಪುರ, ಕೆರೆಕಟ್ಟೆ, ತೋಟಗಾರಿಕೆ ಸೇರಿದಂತೆ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಇಂದು ಬೆಂಗಳೂರು ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಕೆಂಪೇಗೌಡರ ಪರಿಶ್ರಮವೇ ಕಾರಣ.  ಈ ನಿಟ್ಟಿನಲ್ಲಿ   ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ತಿಳಿಸಿದರು.
   
    ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ|| ಕೆ.ಎನ್ ಗಂಗಾನಾಯ್ಕ್, ನಾಡಪ್ರಭು ಕೆಂಪೇಗೌಡ ಪೀಠ ಸಂಯೋಜಕ ಸುರೇಶ್ ಡಿ., ಪ್ರಾಂಶುಪಾಲ ರಾಮಕೃಷ್ಣಪ್ಪ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. 

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link