ಹುಳಿಯಾರು
ಹುಳಿಯಾರು ಹೋಬಳಿಯ ಹೊಯ್ಸಲಕಟ್ಟೆ ಗ್ರಾಮಕ್ಕೆ ಹೊಸದಾಗಿ ಕೇರಳದಿಂದ ಟ್ರೈನು ಬಂದಿದ್ದು ಈ ಟ್ರೈನ್‍ಗೆ ಹೊಯ್ಸಳ ಎಕ್ಟಪ್ರೆಸ್ ಎಂದು ನಾಮಕರಣ ಮಾಡಲಾಗಿದೆ. ಅಲ್ಲದೆ ನಿತ್ಯ ಈ ಟ್ರೈನ್‍ನಲ್ಲಿ ಮಕ್ಕಳು ಅತ್ತಿಇಳಿದು ಸಂಭ್ರಮಿಸುತ್ತಿದ್ದಾರೆ. ಗ್ರಾಮಸ್ಥರೂ ಸಹ ಬಂದಿರುವ ಹೊಸ ಟ್ರೈನ್ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಿದ್ದಾರೆ.
ಹೌದು, ಅಚ್ಚರಿಯಾದರೂ ಇದು ಸತ್ಯ. ಕೇರಳಾದಿಂದ ಹೊಯ್ಸಲಕಟ್ಟೆಗೆ ಹೊಸ ಟ್ರೈನ್ ಬಂದಿದೆಯಾದರೂ ಅದು ಅಳಿ ಮೇಲೆ ಚಲಿಸುವ ನಿಜವಾದ ಟ್ರೈನ್ ಅಲ್ಲ. ಶಾಲಾ ಕೊಠಡಿಯ ಮೇಲೆ ಮಕ್ಕಳನ್ನು ಅರ್ಕರ್ಷಿಸುವ ಟ್ರೈನ್ ರೀತಿಯ ಪೈಂಟ್. ಕೇರಳ ಸರ್ಕಾರ ಜಾರಿಗೆ ತಂದಿರುವ ರೈಲು ಬೋಗಿಯ ಶಾಲಾ ಕೊಠಡಿಯ ಪೈಟಿಂಗ್ ರಾಜ್ಯದ ವಿವಿಧ ಸರ್ಕಾರಿ ಶಾಲೆಗಳ ಕೊಠಡಿಗಳಲ್ಲಿ ಅಲಂಕರಿಸಿರುವಂತೆ ಹೊಯ್ಸಲಕಟ್ಟೆ ಶಾಲೆಗೂ ಪ್ರವೇಶಿಸಿದೆ.
ಮಕ್ಕಳನ್ನು ಶಾಲೆಯತ್ತ ಸೆಳೆಯಲು ಹೊಯ್ಸಲಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಥೇಟ್ ರೈಲಿನ ಮಾದರಿಯಲ್ಲೇ ಬಣ್ಣ ಬಳಿಯಲಾಗಿದೆ. ಶಾಲೆಯಲ್ಲಿ 2 ಕೊಠಡಿಗಳಿಗೆ ಬೋಗಿಗಳ ಚಿತ್ರ ಚಿತ್ರಿಸಲಾಗಿದ್ದು, ಕಿಟಕಿ ಬಾಗಿಲು ಗಳನ್ನು ಪಕ್ಕಾ ರೈಲು ಬೋಗಿಯ ದೃಶ್ಯದಂತೆ ಪೇಂಟ್ ಮಾಡಲಾಗಿದೆ. ಟ್ರೈನ್‍ನನ್ನೇ ನೊಡದ ಈ ಭಾಗದ ಮಕ್ಕಳು ಈ ಟ್ರೈನ್ ಕಾನ್ಸೆಪ್ಟ್‍ಗೆ ಫುಲ್ ಫೀದಾ ಆಗಿದ್ದಾರೆ.
ಶಾಲೆಯ ಅನುಧಾನದ ಜೊತೆ ಎಸ್‍ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರ ಆರ್ಥಿಕ ಸಹಕಾರದೊಂದಿಗೆ ಶಾಲಾ ಕೊಠಡಿಗೆ ಹೊಸ ರೂಪ ಕೊಟ್ಟಿದ್ದು ರಜೆಯನ್ನು ಮುಗಿಸಿ ಶಾಲೆಗೆ ವಾಪಸ್ಸಾದ ವಿದ್ಯಾರ್ಥಿಗಳಿಗೆ ಮತ್ತು ಹೊಸದಾಗಿ ಸೇರಿದ ಚಿಕ್ಕ ಮಕ್ಕಳಿಗೆ ಮೊದಲ ದಿನ ಅಚ್ಚರಿಯ ಜೊತೆಗೆ ಖುಷಿಯೋ ಖುಷಿ. ಶಾಲೆಗೆ ಕಾಲಿಟ್ಟ ಹುಡುಗರು ರೈಲಿನ ರೀತಿಯಲ್ಲಿರುವ ಶಾಲೆಯ ಬಣ್ಣ ನೋಡಿ ಅಚ್ಚರಿ ಪಡುವುದರ ಜೊತೆಗೆ ಸಂಭ್ರಮಿಸಿದ್ದಾರೆ ಎಂದು ಮುಖ್ಯ ಶಿಕ್ಷಕ ಪರಶಿವಮೂರ್ತಿ ಅವರು ಹೆಮ್ಮೆ ಪಡುತ್ತಾರೆ.
ಒಟ್ಟಿನಲ್ಲಿ ಉಚಿತ ಸಮವಸ್ತ್ರ, ಪುಸ್ತಕ, ಪೆನ್ನು ಊಟ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಮುಖಮಾಡುವಂತೆ ಮಾಡುತ್ತಿರುವ ಸರ್ಕಾರಿ ಶಾಲೆಗಳು ಈಗ ಶಾಲೆಯ ವಿನ್ಯಾಸವನ್ನೇ ಬದಲಾಯಿಸುವ ಹೊಸ ಕೆಲಸಕ್ಕೆ ಕೈ ಹಾಕಿ ಎಲ್ಲರಿಂದ ಪ್ರಶಂಸೆ ಪಡೆಯುತ್ತಿದೆ. ಅಲ್ಲದೆ ರೈಲುಗಾಡಿಯಂತೆ ರೂಪು ಗೊಂಡು ಜನಾಕರ್ಷಣೆಯೊಂದಿಗೆ ಪೋಷಕರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ನಿಂತು ಮೊಬೈಲ್‍ನಲ್ಲಿ ಫೋಟೋ ಕ್ಲಿಕ್ಕಿಸಿ ಸೆಲ್ಫಿ ತೆಗೆದುಕೊಳ್ಳುವಂತ್ತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
