ಕೆರೆಗುಡಿಹಳ್ಳಿಯಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ

ಹರಪನಹಳ್ಳಿ:

    ತಾಲೂಕಿನ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ, ಕಲ್ಲು ಹೊಡೆಯುವ ಮತ್ತು ಕ್ವಾರಿ ಕಾರ್ಮಿಕರ ಗ್ರಾಮ ಶಾಖೆ ನೇತೃತ್ವದಲ್ಲಿ 133 ನೇ ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.

      ಕಾರ್ಯಕ್ರಮದಲ್ಲಿ ಯುವಕ ಕೆ.ಗೋಣಿ ಬಸವರಾಜ್ ಮಾತನಾಡಿ, ವಿಶ್ವದ ಸಂಪತ್ತನ್ನು ಸೃಷ್ಠಿ ಮಾಡಿರುವುದು ಕಾರ್ಮಿಕರು, ಕಾರ್ಮಿಕರೇ ಸಂಪತ್ತಿನಲ್ಲಿ ಸಮಪಾಲು ಸಿಗುವವರೆಗೂ ನಿರಂತರ ಹೋರಾಟ ಮಾಡಬೇಕು. ಆಳುವ ಸರ್ಕಾರದ ಜನಪ್ರತಿನಿಧಿಗಳು ಕಾರ್ಮಿಕರನ್ನು ನಿರ್ಲಕ್ಷಿಸಿ ದೊಡ್ಡ ದೊಡ್ಡ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ರೈತ ಕಾರ್ಮಿಕರು ಸೌಲಭ್ಯಕ್ಕಾಗಿ ಹಾಗೂ ಗ್ರಾಮದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದರು.

      ಎಐಟಿಯುಸಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ್ ಮಾತನಾಡಿ, ಕಾರ್ಮಿಕರ ಸ್ವತಂತ್ರ ಮತ್ತು ಹಕ್ಕಿಗಾಗಿ ಅಮೇರಿಕಾದ ಚಿಕಾಗೋ ನಗರದಲ್ಲಿ ಸಾಮ್ರಾಜ್ಯ ಶಾಹಿಗಳ ವಿರುದ್ಧ ತ್ಯಾಗ ಬಲಿದಾನಗಳಿಂದ ಕಾರ್ಮಿಕರಿಗೆ 24 ತಾಸು ಬದಲು 8 ತಾಸು ಕೆಲಸ, 8 ತಾಸು ವಿಶ್ರಾಂತಿ, 8 ತಾಸು ಸಾಂಸ್ಕøತಿಕ ಕಾರ್ಯಕ್ರಮ ಹೋರಾಟದ ಪ್ರತಿಫಲವಾಗಿ ಜಾರಿಗೆ ಬಂದಿತು. ಆಳುವ ಸರ್ಕಾರಗಳು ಜಾತಿ ಆದಾರದ ಮೇಲೆ ಸೌಲಭ್ಯ ನೀಡುವ ಬದಲು ಕಾರ್ಮಿಕರ ಶ್ರಮದ ಆದಾರದ ಮೇಲೆ ಸೌಲಭ್ಯ ನೀಡಬೇಕೆಂದು ಆಗ್ರಹಿಸಿದರು.

     ಇದೇ ಸಂದರ್ಭದಲ್ಲಿ ಗ್ರಾಮದ ಶ್ರಮಜೀವಿಯಾದ ಸಣ್ಣಜ್ಜರ್ ದೊಡ್ಡ ಹನುಮಂತಪ್ಪ ಇವರಿಗೆ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ಟಿ.ಬಸಮ್ಮ, ಸಿ.ಶಿವಪ್ಪ, ಬಿ.ಶೇಖರಪ್ಪ, ಗೊಡ್ಡಳ್ಳಿ ವೀರೇಶ್, ಪಿ.ಎಸ್. ವೀರೇಶ್, ಎನ್. ನಾಗರಾಜ್, ಗುಂಡಗತ್ತಿ ನಾಗರಾಜ್, ಜಿ.ಎನ್. ಬಸವರಾಜ್, ಎಂ. ಮಲ್ಲಿಕಾರ್ಜುನ್, ಕೆ. ನಿಂಗಪ್ಪ, ಕೆ. ರುದ್ರಾಚಾರಿ, ಎಂ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link