ಶಿಗ್ಗಾವಿ :
ಎತ್ತು ಮೈ ತೊಳೆಯಲು ಹೋಗಿ ಆಯ ತಪ್ಪಿ ಕೆರೆಯಲ್ಲಿ ಮುಳಗಿ ಬಾಲಕ ಮೃತಪಟ್ಟ ಘಟನೆ ಸಮೀಪದ ಹಳೆ ಬಂಕಾಪುರ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.ಹಳೆಬಂಕಾಪುರ ಗ್ರಾಮದ ಮಲ್ಲಿಕಾರ್ಜುನ ಬಸಪ್ಪ ಬಾವಿಕಟ್ಟಿ (16) ಕೆರೆಯಲ್ಲಿ ಮುಳುಗಿ ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ.
ಗ್ರಾಮದ ಹೊರವಲಯದಲ್ಲಿರುವ ವಗ್ಗಿನಕೇರೆಯಲ್ಲಿ ಎತ್ತು ಮೈ ತೊಳೆಯಲು ಹೋಗಿದ್ದ ವಿದ್ಯಾರ್ಥಿ ಎತ್ತುಗಳ ಜೋತೆ ನೀರಿಗೆ ಇಳಿದಾಗ ಆಯತಪ್ಪಿ ಕೆರೆಯ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.