ಕೆಜಿಎಫ್ ರಮೇಶ್‍ನ ಬಂಧನ

ಬೆಂಗಳೂರು

         ಬೀಗ ಹಾಕಿದ ಮನೆಗಳಿಗೆ ನುಗ್ಗಿ ನಗದು ಚಿನ್ನಾಭರಣ ಕಳವು ಮಾಡುತ್ತಿದ್ದ ಕುಖ್ಯಾತ ಹಳೆಕಳ್ಳ ರಮೇಶ್ ಅಲಿಯಾಸ್ ಕೆಜಿಎಫ್ ರಮೇಶ್‍ನನ್ನು ಬೆರಳಚ್ಚು ಆಧಾರದ ಮೇಲೆ ಕೆಆರ್‍ಪುರಂ ಪೊಲೀಸರು ಬಂಧಿಸಿ 14 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

        ಕೆಜಿಎಫ್‍ನ ರಮೇಶ್ ಕಳೆದ 1996 ರಿಂದಲೂ ಮನೆಕಳವು ಮಾಡುತ್ತಿದ್ದ ಎರಡು ದಶಕಗಳ ಹಿಂದೆಯೇ ಕಳ್ಳತನ ಕೃತ್ಯ ನಡೆಸಿ, ಬೀಗ ಹಾಕಿದ ಮನೆಗಳಿಗೆ ನುಗ್ಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಆತ ಕೆಲ ಕಾಲ ಸುಮ್ಮನಿದ್ದು ಕಳೆದ ನಾಲ್ಕು ವರ್ಷಗಳಿಂದ ಮತ್ತೆ ಕಳ್ಳತನ ಕೃತ್ಯಗಳಲ್ಲಿ ತೊಡಗಿದ್ದ.

         ಕೆಆರ್‍ಪುರಂನಲ್ಲಿ ನಡೆದಿದ್ದ ಕಳವು ಪ್ರಕರಣವೊಂದನ್ನು ದಾಖಲಿಸಿದ್ದ ಪೊಲೀಸರು 20 ವರ್ಷಗಳ ಹಿಂದೆ ಸಂಗ್ರಹಿಸಿದ್ದ ಮುಖಚರ್ಯೆ ಹಾಗೂ ಬೆರಳಚ್ಚು ಆಧರಿಸಿ ಆರೋಪಿಯನ್ನು ಬಂಧಿಸಿ, 13 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ವರ್ಷಗಳ ಹಿಂದಿನ ಮುಖಚರ್ಯೆ ಸ್ವಲ್ಪ ಬದಲಾಗಿದ್ದರೂ, ಆರೋಪಿಯನ್ನು ಶ್ರಮವಹಿಸಿ ಬಂಧಿಸಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link