ಖಾಲಿ ಹುದ್ದೆ ತುಂಬಿಸಲು ಕುಲಪತಿಗಳಿಗೆ ಪತ್ರ

ರಾಣೇಬೆನ್ನೂರು

   ಪದವಿ ಕಾಲೇಜ್ ಖಾಲಿ ಹುದ್ದೆ ತುಂಬಲು ಯುಜಿಸಿ ಆದೇಶ ಜಾರಿಗೆ ತರಲು ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಪತ್ರ ಬರೆಯುವ ಮೂಲಕ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಹಾಗೂ ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ: ಆರ್.ಎಂ. ಕುಬೇರಪ್ಪ ಒತ್ತಾಯಿಸಿದ್ದಾರೆ.

   ರಾಜ್ಯದ ಸಂಯೋಜಿತ ಹಾಗೂ ಅನುದಾನಿತ ಪದವಿ ಕಾಲೇಜ್‍ಗಳಲ್ಲಿ ಖಾಲಿಯಾಗಿರುವ ಬೋಧಕ ಹುದ್ದೆಗಳನ್ನು ಆರು ತಿಂಗಳೊಳಗಾಗಿ ತುಂಬಲು ವಿಶ್ವವಿದ್ಯಾನಿಲಯಗಳು ಕ್ರಮ ತೆಗೆದುಕೊಳ್ಳಬೆಕೆಂದು, ಯುಜಿಸಿ ತನ್ನ ಆದೇಶ ಪತ್ರದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ತಿಳಿಸಿದೆ. ಆದೇಶದ ಜೊತೆಗೆ ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ ಆದರೆ ರಾಜ್ಯದ ಯಾವ ವಿ.ವಿ.ಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಡಂತ್ತಿಲ್ಲವೆಂದು, ಡಾ: ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.

   ಯುಜಿಸಿಯವರು ರಾಜ್ಯದ ಅನುದಾನಿತ ಪದವಿ ಕಾಲೇಜ್‍ಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ಆದೇಶ ಮಾಡಿದ್ದರೂ ಸಹಿತ, ಕರ್ನಾಟಕ ಸರ್ಕಾರವು ಕೇವಲ 2015 ರ ವರೆಗೆ ಖಾಲಿಯಾಗಿರುವ ಹುದ್ದೆಗಳನ್ನು ತುಂಬಲು ಅನುಮತಿ ನೀಡಲಾಗಿದೆಯಾದ್ದರಿಂದ ಈಗ ಯುಜಿಸಿ ನೀಡಿರುವ ಹೊಸ ಆದೇಶದ ಪ್ರಕಾರ ಸರ್ಕಾರವು ಪುನಃ ಇಲ್ಲಿಯವರೆಗೂ ಖಾಲಿಯಾಗಿರುವ ಎಲ್ಲಾ ಬೋಧಕ ಹುದ್ದೆಗಳನ್ನು ತುಂಬಲು ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಅನುಮತಿ ನೀಡಬೇಕಾಗುತ್ತದೆ.

    ಆದರೆ ಯುಜಿಸಿಯವರು, ಈ ಬಗ್ಗೆ ರಾಜ್ಯದ ವಿ.ವಿ.ಗಳ ಕುಲಪತಿಗಳಿಗೆ ಆದೇಶ ಹೊರಡಿಸಿದ್ದು, ಕುಲಪತಿಗಳಿಂದ ಅನುದಾನಿತ ಪದವಿ ಕಾಲೇಜುಗಳ ಹುದ್ದೆ ತುಂಬುವ ಅವಕಾಶವಿಲ್ಲದ ಕಾರಣ ಎಲ್ಲ ವಿ.ವಿ.ಗಳ ಕುಲಪತಿಗಳು ಯುಜಿಸಿ ಆದೇಶ ಉಲ್ಲೇಖಿಸಿ, ಸರ್ಕಾರಕ್ಕೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗೆ ಪತ್ರ ಬರೆದು, ಯುಜಿಸಿ ಆದೇಶದ ಪ್ರಕಾರ ಹುದ್ದೆ ತುಂಬಲು ಕ್ರಮತೆಗೆದುಕೊಳ್ಳಬೇಕೆಂದು ಡಾ: ಆರ್.ಎಂ. ಕುಬೇರಪ್ಪ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link