ಗುಪ್ತ ಮತದಾನ ನಿಯಮ ಉಲ್ಲಂಘನೆ : ಖರ್ಗೆ ಅವರಿಗೆ ಕ್ಲೀನ್ ಚಿಟ್ ಸಾದ್ಯತೆ ..!!

ಕಲಬುರ್ಗಿ:
         ಕಲಬುರ್ಗಿಯಲ್ಲಿ ಸೋಲಿಲ್ಲದ ಸರದಾರ ಎಂದೆ ಖ್ಯಾತರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಗೌಪ್ಯ ಮತದಾನದ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆಯುವ ಸಾಧ್ಯತೆ ಹೆಚ್ಚಿದೆ .
        ಮಂಗಳವಾರ ನಡೆದ ಮೂರನೇ ಹಂತದ ಮತದಾನದ ವೇಳೆ ತಮ್ಮ ಧರ್ಮಪತ್ನಿ ಹಾಗೂ ಕುಟುಂಬದವರೊಡನೆ ಆಗಮಿಸಿದ್ದ ಅವರು  ಮತದಾನ ಸಂದರ್ಭದಲ್ಲಿ ಅವರ ಪತ್ನಿಯನ್ನು ಸಹ ಇವಿಎಂ ಸಮೀಪಕ್ಕೆ ಕರೆದೊಯ್ದಿದ್ದರು. ಈ ಸಂಬಂಧ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದು ಖರ್ಗೆ “ಗುಪ್ತ ಮತದಾನ” ನಿಯಮ ಉಲ್ಲಂಘಿಸಿದ್ದಾರೆಂದು ದೂರು ದಾಖಲಾಗಿತ್ತು. ಆದರೆ ಈಗ ಕ್ಷೇತ್ರದ ಡಿ.ಸಿ ಮತ್ತು ರಿಟರ್ನಿಂಗ್ ಅಧಿಕಾರಿ ಅಗಿರುವ ವೆಂಕಟೇಶ್ ಕುಮಾರ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಬೂತ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ.
        ವರದಿಯಲ್ಲಿ ಆರ್.ಒ. ಅಧಿಕಾರಿಗಳಿಂದ ವಿವರಣೆಯನ್ನು ಕೋರಿದ ಮಾಹಿತಿ ಇದ್ದು ಇದರಲ್ಲಿ ಕೇಂದ್ರ ಸರ್ಕಾರ ನೇಮಿಸಿದ ಸೂಕ್ಷ್ಮ ಪರಿವಿಕ್ಷಕ ಸೇರಿ ಒಟ್ಟಾರೆ ಆರು ಮಂದಿ ಅಧಿಕಾರಿಗಳಿಂದ ವಿವರ ಪಡೆಯಲಾಗಿದೆ. ಎಲ್ಲರೂ ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದು ಅವರ ಹೇಳಿಕೆಗಳ ಅನುಸಾರ ಘಟನಾ ಸರಣಿಯಲ್ಲಿ ಸಾಮ್ಯತೆ ಇದೆ.
         ಅವರ ಹೇಳಿಕೆಗಳ ಅನುಸಾರ ಖರ್ಗೆ ಮತದಾನ ಮಾಡುವಾಗ ಒಬ್ಬರೇ ಮತಯಂತ್ರವಿದ್ದ ಆವರಣ ಪ್ರವೇಶಿಸಿದ್ದಾರೆ, ಮತ್ತು ಅವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಮಾದ್ಯಮದ ಛಾಯಾಗ್ರಾಹಕರು ಖರ್ಗೆ ತಮ್ಮ ಪತ್ನಿಯೊಂದಿಗೆ ಮತದಾನದ ಬೂತ್ ಅನಲ್ಲಿ ಒಟ್ತಾಗಿ ನಿಂತು ಫೋಟೋಗೆ ಪೋಸ್ ನೀಡಬೇಕೆಂದು ಒತ್ತಾಯಿಸಿದ ಕಾರಣ ಪತ್ನಿ ಸಮೇತವಾಗಿ ಖರ್ಗೆ ಕಾಣಿಸಿಕೊಂಡರು ಎಂದು ವರದಿಯಲ್ಲಿ ತಿಳಿಸಲಾಗಿದೆ.
         ಇನ್ನು ಖರ್ಗೆ ಅವರು ಮತದಾನ ಮಾಡುವಾಗ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂಬುದು ಈ ವರದಿಯಿಂದ ಸಾಬೀತಾಗಿ ದೆಯಾದರೂ ಈ ವರದಿಯ ಅನುಸಾರ ಖರ್ಗೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗಿದೆ. ಯಾವುದೇ ವ್ಯಕ್ತಿ ಒಮ್ಮೆ ಮತ ಹಾಕಿದ ನಂತರ ಮತ್ತೆ ಮತಯಂತ್ರವಿರುವ ಆವರಣವನ್ನು ಪ್ರವೇಶಿಸುವುದು ನಿಷಿದ್ಧವಾಗಿದ್ದು. ವರದಿ ಹೇಳಿದಂತೆ ಖರ್ಗೆ ಮತ ಚಲಾವಣೆ ಮಾಡಿದ ನಂತರ ಛಾಯಾಗ್ರಾಹಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ಪತ್ನಿ ಸಮೇತವಾಗಿ ಆ ಆವರಣ ಪ್ರವೇಶಿಸಿದ್ದಾರೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
     ಬಿಜೆಪಿ ಪಕ್ಷದ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಖರ್ಗೆ ವಿರುದ್ಧ ಮಂಗಳವಾರದಂದು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದರು.ಖರ್ಗೆ ಮತದಾನದ ರಹಸ್ಯವನ್ನು ಉಲ್ಲಂಘಿಸಿದ್ದಾರೆ ಎಂದು ದೂರು ನೀಡಿದ್ದರು ಎನ್ನಲಾಗಿದೆ . 
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap