ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವ ಆಚರಣೆ

ಶಿಗ್ಗಾವಿ :

        ಈ ವರ್ಷ ಕಿತ್ತೂರು ರಾಣಿ ಚನ್ನಮ್ಮಳ ವಿಜಯೋತ್ಸವ ಅಂಗವಾಗಿ ತಾಲೂಕಿನ ಗ್ರಾ ಪಂ ವ್ಯಾಪ್ತಿಗೆ ಒಂದು ವಾರ ಕಾಲ, ಕಿತ್ತೂರು ಜ್ಯೋತಿ ಕೊಂಡಯ್ಯೂವದರೊಂದಿಗೆ ವಿಜಯೋತ್ಸವ ಕಾರ್ಯ ಕ್ರಮಕ್ಕೆ ಭಾವನಾತ್ಮಕ ಆಮಂತ್ರಣ ನೀಡುವ ಮೂಲಕ ಎಲ್ಲ ಸಮಾಜಗಳನ್ನು ಜೋಡಿಸುವ ಕೆಲಸ ಸಂಘಟಿಕರು ಮಾಡಬೇಕು ಎಂದು ಶಾಸಕ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

       ಶುಕ್ರವಾರ ಸಂಜೆ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮಳ ವಿಜಯೋತ್ಸವ ಆಚರಣೆ ಪೂರ್ವ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವೈಶಿಷ್ಠಪೂರ್ಣ ಮತ್ತು ಆದ್ಧೂರಿ ಆಚರಣೆಗೆ ಸಕಲ ಸಿದ್ಧತೆ ಕೈಗೊಳ್ಳಿ ಎಂದು ತಾಲೂಕು ಆಡಳಿತಕ್ಕೆ ಸೂಚಿಸಿದರು.

      ಸಮಾಜದ ಹಿರಿಯರು, ಸಾಹಿತಿಗಳು ಸಭೆ ಸೇರಿ ಸ್ವಾತಂತ್ರ್ಯ ಹೋರಾಟದ ಕಿಡಿ ಹೊತ್ತಿಸಿರುವ ಉತ್ತರ ಕರ್ನಾಟಕ ಪ್ರಥಮ ಧೀರ ಮಹಿಳೆ ಚನ್ನಮ್ಮಳ,ವಿಜಯೋತ್ಸವನ್ನು ನಿತ್ಯೋತ್ಸವವಾಗಿ ಪರಿವರ್ತಿಸಲು ಚರ್ಚೆಸಲು ಅವಶ್ಯ ವಾಗಿದೆ. ಚನ್ನಮ್ಮಳ ಕುರಿತು ಸಂಶೋಧನೆಗಳ ಮೂಲಕ ಹೊಸ ವಿಚಾರಗಳು ಹೊರ ಬರುತ್ತಿವೆ. ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಸ್ತುಪಡಿಸಲು ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಚಿಂತಿಸಬೇಕಿದೆ.

       ಈ ವರ್ಷದಿಂದ ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಜತೆಗೆ ಆದರ್ಶಮಯ 10 ಜನ ರೈತರೊಂದಿಗೆ 5 ಜನ ಸಾಧಕ ಮಹಿಳೆಯರನ್ನು ಸನ್ಮಾನಿಸಿ ಗೌರವಿಸುವ ಕೆಲಸ ಈ ವರ್ಷದಿಂದಲೇ ಆರಂಭವಾಗಲಿ ಎಂದು ಅಭಿಪ್ರಾಯಿಸಿದ ಬೊಮ್ಮಾಯಿ, ಶಿಗ್ಗಾವಿ ಪಟ್ಟಣದಲ್ಲಿ ಚನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆ ವಿಚಾರ ನ್ಯಾಯಾಲಯದಲ್ಲಿದೆ. ತ್ವರಿತಗತಿಯಲ್ಲಿ ಅಡ, ತಡೆಗಳನ್ನು ಇತ್ಯಾರ್ಥಪಡಿಸಿ ಪ್ರತಿಷ್ಠಾಪಿಸಿ, ತಾಲೂಕಿನ ಜನರಿಗೆ ಸಂತಸದ ಸುದ್ದಿ ತಿಳಿಸುವುದಾಗಿ ಹೇಳಿದರು.

      ಮಾಜಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಸತ್ಪುರುಷರ ಜಯಂತಿಗಳನ್ನು ಜಾತಿಗೆ ಸಿಮೀತಗೊಳಿಸದೆ ಸಾರ್ವತ್ರಿಕವಾಗಿ ಆಚರಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸಮಾಜ ಮತ್ತು ಆಡಳಿತ ವರ್ಗ ಕಾರ್ಯಪ್ರವೃತ್ತರಾಗಲಿ ಎಂದರು.

       ಪುರಸಭೆ ಅಧ್ಯಕ್ಷ ಶಿವಪ್ರಸಾದ ಸುರಗೀಮಠ ಮಾತನಾಡಿ, ಚನ್ನಮ್ಮಳ ಮೂರ್ತಿ ಪ್ರತಿಷ್ಠಾಪನೆಗೆ ಸ್ಥಳ ನಿಗಧಿಯಾಗಿದೆ. ಶೀಘ್ರದಲ್ಲಿ ಚನ್ನಮ್ಮಳ ಅಭಿಮಾನಿಗಳ ಆಸೆ ಈಡೇರಲಿದೆ ಎಂದರು. ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಶಿವಾನಂದ ಬಾಗೂರು, ತಾಪಂ.ಸದಸ್ಯ ಶ್ರೀಕಾಂತ ಪೂಜಾರ, ಪುರಸಭೆ ಸದಸ್ಯ ಶ್ರೀಕಾಂತ ಬುಳ್ಳಕ್ಕನವರ, ಹಿರಿಯ ಮುಖಂಡ ಸಿ.ವ್ಹಿ.ಮತ್ತಿಗಟ್ಟಿ, ಬಸವರಾಜ ಜೇಕನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

       ತಾಪಂ.ಅಧ್ಯಕ್ಷೆ ಪಾರವ್ವ ಆರೇರ, ಜಿಪಂ.ಸದಸ್ಯರಾದ ಬಸನಗೌಡ ದೇಸಾಯಿ, ಶೋಭಾ ಗಂಜೀಗಟ್ಟಿ, ತಾಪಂ.ಸದಸ್ಯ ಬಿ.ಎಸ್.ಹಿರೇಮಠ, ತಹಶೀಲ್ದಾರ ಶಿವಾನಂದ ರಾಣೆ, ವಿರೇಶ ಆಜೂರು, ಶಿವಾನಂದ ಮ್ಯಾಗೇರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಾಧರ ಸಾತಣ್ಣವರ, ತಾಪಂ.ಇಒ ಚಂದ್ರಶೇಖರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಬಸವರಾಜ ಹೊಂಕಣದ ಸ್ವಾಗತಿಸಿದರು. ಮಲ್ಲಪ್ಪ ನಿರೂಪಿಸಿದರು. ಕಿರಣ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap