ಕುಣಿಗಲ್
ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಕೆ.ಎನ್. ರಾಜಣ್ಣ ಅವರು ಉಪಮುಖ್ಯ ಮಂತ್ರಿ ಜಿ.ಪರಮೇಶ್ವರ್ ಮೇಲೆ ಹೇಳಿದ ಹೇಳಿಕೆಯನ್ನ ಹಿಂಪಡೆದು ಕಾಂಗ್ರೆಸ್ ಪಕ್ಷದ ವರಿಷ್ಠರ ಸಮ್ಮುಖದಲ್ಲಿ ಕ್ಷಮೆಕೇಳಿದರೂ ಸಹ ಪರಮೇಶ್ವರ್ ಬೆಂಬಲಿಗರು ಪ್ರತಿಭಟನೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಕುಣಿಗಲ್ ತಾಲ್ಲೂಕು ಹಿರಿಯ ಕಾಂಗ್ರೆಸ್ ಮುಖಂಡರುಗಳು ಖಂಡಿಸಿದ್ದಾರೆ.
ಈ ಇಬ್ಬರೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದ್ದಾರೆ ಎಂದು ಜಂಟಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಹಿರಿಯ ಮುಖಂಡ ಗಂಗಶಾನಯ್ಯ ಹಾಗೂ ಇಪ್ಪಾಡಿ ಮಾಜಿ ಗ್ರಾ.ಪಂ.ಅಧ್ಯಕ್ಷ ಐ.ಜಿ.ರಮೇಶ್ ಮತ್ತು ಕೆಂಪನಹಳ್ಳಿ ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಬೋರೇಗೌಡ ಇವರುಗಳು ಮಾತನಾಡುತ್ತ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಕೆ.ಎನ್. ರಾಜಣ್ಣ ಮತ್ತು ಜಿ.ಪರಮೇಶ್ವರ್ ಅವರ ಅಪಾರ ಶ್ರಮವಿದೆ.
ಮೈತ್ರಿ ಸರ್ಕಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೈ ತಪ್ಪಿದ ಕ್ಷೇತ್ರದಿಂದ ಗೊಂದಲದ ನಡುವೆಯೇ ಸ್ಪರ್ಧಿಸಿದ ಜೆಡಿಎಸ್ ಪಕ್ಷದ ವರಿಷ್ಠರು ನಿಂತು ಸೋತ ಪರಿಣಾಮ ಇಷ್ಟೆಲ್ಲ ಚರ್ಚೆಗೆ ಗ್ರಾಸವಾಗಿದ್ದು. ಈ ನಡುವೆ ಮಾತು ತಪ್ಪಿ ಮಾತನಾಡಿದ ಕೆ.ಎನ್.ರಾಜಣ್ಣ ಅವರು ತಮ್ಮ ಹೇಳಿಕೆಯಿಂದ ವೃತಾ ಜಿ.ಎಸ್. ಪರಮೇಶ್ವರ್ ಅವರಿಗೆ ಮನನೋವಿಸಲು ಮಾತನಾಡಿಲ್ಲ.
ಆದರೆ ಪಕ್ಷದಲ್ಲಿ ಕೆಲವರು ಪರಸ್ಪರ ಮಾಡಿದ ಆರೋಪದಿಂದ ಬೇಸತ್ತು ಕೆ.ಎನ್.ಆರ್. ತಮ್ಮ ಅಸಮದಾನದ ನೋವನ್ನ ಹೀಗೆ ಹೇಳಿರಬಹುದು, ಅದನ್ನು ತಪ್ಪು ಎಂದು ರಾಜ್ಯದ ಕಾಂಗ್ರೆಸ್ ವರಿಷ್ಠರು ಮನವರಿಕೆ ಮಾಡಿದ ನಂತರ ಕೆ.ಎನ್. ರಾಜಣ್ಣ ತಕ್ಷಣ ಪತ್ರಿಕಾ ಗೋಷ್ಠಿ ನಡೆಸಿ ತಾವು ಹೇಳಿದ ಮಾತಿನಿಂದ ನೋವಾಗಿದ್ದರೆ ವಿಷಾಧಿಸುತ್ತೇನೆ ಎಂದು ಕ್ಷೆಮೆ ಕೇಳಿದ್ದಾರೆ. ಇಷ್ಟಾದರೂ ಜಿ.ಪರಮೇಶ್ವರ್ ಅವರ ಬೆಂಬಲಿಗರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿರುವುದು ಖಂಡನೀಯ ಒಂದು ವೇಳೆ ಇವರು ಪ್ರತಿಭಟಿಸಿದರೆ ನಾವು ಸಹ ಕೆ.ಎನ್.ಆರ್. ಪರವಾಗಿ ಉಗ್ರ ಪ್ರತಿಭಟನೆಯನ್ನ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಲು ಜಿ.ಎಸ್. ಪರಮೇಶ್ವರ್ ಅವರಂತೆಯೇ ಕೆ.ಎನ್. ರಾಜಣ್ಣ ಅವರೂ ಕೂಡ ಪಕ್ಷ ಕಟ್ಟುವಲ್ಲಿ ತಮ್ಮ ಡಿ.ಸಿ.ಸಿ. ಬ್ಯಾಂಕ್ ಮೂಲಕ ಹಲವು ಜನಪರ, ರೈತಪರ ಕೆಲಸಗಳನ್ನ ಮಾಡುವುದರ ಜೊತೆಗೆ ಜಿಲ್ಲೆಯಾದ್ಯಂತ ವಿಎಸ್‍ಎಸ್.ಎನ್. ಸಂಘಟನೆಯನ್ನ ಬಲಪಡಿಸುವ ಮೂಲಕ ಜಾತ್ಯಾತೀತವಾಗಿ ನಡೆದು ಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನ ಮಾಡಿದ್ದಾರೆ ಇಂತಹ ಒಂದು ಸಣ್ಣ ವಿಚಾರವನ್ನೇ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡದು ಮಾಡುತ್ತ ಹೋದರೆ ಇಡೀ ಜಿಲ್ಲೆಯ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗುತ್ತದೆ
ಇಂತಹ ಸುಸಂದರ್ಭದಲ್ಲಿ ಮಾನ್ಯ ಕಾಂಗ್ರೆಸ್ ವರಿಷ್ಠರು ಮಧ್ಯೆ ಪ್ರವೇಶಿಸಿ ಜಿಲ್ಲೆಯ ಈ ಇಬ್ಬರೂ ಮುಖಂಡರನ್ನ ಮನವೊಲಿಸಿ ಹಾಗೂ ಬೆಂಬಲಿಗರುಗಳಿಗೆ ತಿಳಿಹೇಳುವ ಮೂಲಕ ಈಗ ಉಂಟಾಗಿರುವ ಗೊಂದಲವನ್ನ ಹಾಗೂ ಪ್ರತಿಭಟನೆಯನ್ನ ಕೈಬಿಡುವಂತೆ ಮಾಡಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮುಂದಾಗಬೇಕೆಂದು ಮನವಿ ಮಾಡಿದರು. ಇಷ್ಟಾದರು ಒಂದು ವೇಳೆ ಕೆ.ಎನ್.ಆರ್. ವಿರುದ್ದ ಪ್ರತಿಭಟನೆ ಮಾಡಿದರೆ ಮುಂದೆ ನಾವೂ ಸಹ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಯಲಿಯೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಚಂದ್ರಪ್ಪ, ಪುರಸಭ ನೂತನ ಸದಸ್ಯ ನಾಗೇಂದ್ರ, ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆ ನಾರಾಯಣ್ ಸೇರಿದಂತೆ ಹಲವರು ಇದ್ದರು.