ಕೊಲ್ಕತ್ತಾ
ಟಿಎಂಸಿ ಸಂಸದೆ ಹಾಗೂ ಬಂಗಾಳಿ ಚಿತ್ರರಂಗದ ಖ್ಯಾತ ನಟಿ ಮಿಮಿ ಚಕ್ರವರ್ತಿ ಅವರನ್ನು 7 ದಿನಗಳ ಕಾಲ ಗೃಹ ಬಂಧನದಲ್ಲಿರುವಂತೆ ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿದೆ.ಸಿನಿಮಾ ಚಿತ್ರೀಕರಣದ ಕಾರಣ ಲಂಡನ್‌ಗೆ ತೆರಳಿದ್ದ ಮಿಮಿ ಚಕ್ರವರ್ತಿ ಮಂಗಳವಾರವಷ್ಟೆ ಭಾರತಕ್ಕೆ ಬಂದಿದ್ದಾರೆ. ಕೊರೊನಾ ಸೋಂಕು ತಗುಲಿರುವ ಅನುಮಾನದಿಂದ ಮನೆಯಲ್ಲಿರಲು ಸೂಚಿಸಲಾಗಿದೆ.
ಮುಂದಿನ ತಪಾಸಣೆವರೆಗೂ ಪ್ರತ್ಯೇಕ ಕೊಠಡಿಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಿಮಿ ಚಕ್ರವರ್ತಿ ಇರಬೇಕಾಗಿದೆ. ಖುದ್ದು ಮನೆಯವರು ಕೂಡ ಆಕೆಯನ್ನು ಭೇಟಿ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
‘ಭಾಜಿ’ ಸಿನಿಮಾದ ಶೂಟಿಂಗ್ ಕಾರಣದಿಂದ ಲಂಡನ್‌ಗೆ ಹೋಗಿದ್ದ ಮಿಮಿ ಮಂಗಳವಾರ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕೊರೊನಾ ಪರೀಕ್ಷೆಗೆ ಒಳಪಡಿಸಿ ಥರ್ಮಲ್ ಸ್ಕ್ರೀನಿಂಗ್ ಕೂಡ ಮಾಡಲಾಗಿದೆ. ವಿದೇಶದಿಂದ ಬಂದ ಪ್ರಯಾಣಿಕರನ್ನು 7 ದಿನದ ವರೆಗೂ ಗೃಹ ಬಂಧನದಲ್ಲಿಡುಂತೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡಿರುವ ಹಿನ್ನೆಲೆ ಮಿಮಿ ಚಕವರ್ತಿ ಕೂಡ ಗೃಹ ಬಂಧನಕ್ಕೆ ಒಳಗಾಗಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ