ಕೊಡಗು ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆ

ಬೆಂಗಳೂರು

      ಪ್ರವಾಹದಿಂದಾಗಿ ರದ್ದಾಗಿದ್ದ ಕೊಡಗು ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಸೋಮವಾರ ಪೇಟೆ, ವಿರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಪಂಚಾಯತ್‍ಗಳಿಗೆ ಈ ತಿಂಗಳ 28 ರಂದು ಚುನಾವಣೆ ನಡೆಯಲಿದೆ.

       ಚುನಾವಣೆಗೆ ಈ ತಿಂಗಳ 16 ರಂದು ಅಧಿಸೂಚನೆ ಜಾರಿಯಾಗಲಿದ್ದು, ಪರಿಷ್ಕøತ ವೇಳಾಪಟ್ಟಿಯಂತೆ ಅಂದೇ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಮರುದಿನ ಉಮೇದುವಾರಿಕೆ ಪರಿಶೀಲನೆ ನಡೆಯಲಿದ್ದು, ಹಿಂಪಡೆಯಲು 20 ಕೊನೆಯ ದಿನವಾಗಿದೆ.

        ಅಗತ್ಯವಿದ್ದಲ್ಲಿ 30 ರಂದು ಮರು ಚುನಾವಣೆ ನಡೆಯಲಿದ್ದು, 31 ರಂದು ಮತ ಎಣಿಕೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಶ್ರೀನಿವಾಸಾಚಾರಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ