ಕೂರಿಗೆ ಬಿತ್ತನೆಯಲ್ಲಿ ಬಳ್ಳಾರಿ ಜಿಲ್ಲೆ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ

ಸಿರಿಗೇರಿ

        ಭತ್ತವನ್ನು ಕೂರಿಗೆಯಿಂದ ಬಿತ್ತನೆ ಮಾಡುವುದರಲ್ಲಿ ಬಳ್ಳಾರಿ ಜಿಲ್ಲೆ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಬಳ್ಳಾರಿ ಕೃಷಿ ಇಲಾಖೆ ಉಪನಿರ್ದೆಶಕ ಶಿವನಗೌಡ ಪಾಟಿಲ್ ರವರು ಇಲ್ಲಿನ ಸಿರಿಗೇರಿ ಸಮೀಪದ ಮುದ್ದಟನೂರು ಗ್ರಾಮದ ರೈತ ರಾಮಕಾಂತ ರವರ ಜಮೀನನಲ್ಲಿ ತೆಕ್ಕಲಕೋಟೆ ಮತ್ತು ಕರೂರು ಹೋಬಳಿಯ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಮತ್ತು ಬೀಜೋಪಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

       ಈ ವರ್ಷ ಜಿಲ್ಲೆಯಲ್ಲಿ 12 ಸಾವಿರ ಎಕ್ಕರೆ ಕೂರಿಗೆ ಬಿತ್ತನೆ ಮಾಡಲಾಗಿದೆ ಈ ವಿಚಾರ ವನ್ನು ತಿಳಿದು ಕೋಳ್ಳಲು ತೆಲಂಗಾಣ ಹಾಗೂ ತಮಿಳುನಾಡಿ ರ್ಯಾಜದ ರೈತರು ಜನ ಪ್ರತಿನಿಧಿಗಳು ನಮ್ಮ ಕೃಷಿ ಇಲಾಖೆಗಳಿಗೆ ಮತ್ತು ಬೆಳೆವಿಕ್ಷಣೆಗೆ ಬರುತ್ತಿದ್ದರೆ. ಅದ್ದರಿಂದ ಇನ್ನೂ ಹೆಚ್ಚಾಗಿ ರೈತರು ಕೂರಿಗೆ ಬಿತ್ತನೆ ಮಾಡಬೇಕು ಎಂದರುನಂತರ ಮಾತನಾಡಿದ ಕೃಷಿ ವಿಜ್ಞಾನಿ ಇಬ್ರಾಹಿಂ ಸಾಬ್ ರೈತರು ಮುಖ್ಯವಾಗಿ ನಿಮ್ಮ ಜಮೀನಿನ ಮಣ್ಣಿನ ಫಲವತ್ತತೆಯನ್ನು ತಿಳಿದುಕೊಳ್ಳಬೇಕು.

       ಕ್ರೀಮಿನಾಶಕ ಬಳಸುವಬದಲು ನೀಮ್ಮ ಹೊಲಗಳಲ್ಲಿ ಇರವ ಕಸದಿಂದ ಗೋಬ್ಬರಮಾಡಿ. ಜಮೀನಗಳಿಗೆ ಬಳಸಿದರೆ ಬೆಳೆಗಳ ಪದಾರ್ಥಗಳು ಉತ್ತಮ ಅಹಾರವುಳ್ಳದಾಗಿರುತ್ತವೆ.ಎಂದರು ರೈತ ರಾಮಕಾಂತರವರು ಮಾತನಾಡಿ ನಾನು 150 ಎಕ್ಕರೆ ಕೂರಿಗೆ ಭತ್ತ ಬಿತ್ತನೆಮಾಡಿ ಮೂರು ವರ್ಷದಿಂದ ಉತ್ತಮ ಬೆಳೆ ಪಡೆದಿದ್ದನೆ. ಮತ್ತು ಕೂರಿಗೆ ಭತ್ತ ಬಿತ್ತನೆಯಿಂದ ನೀರನ್ನು ಉಳಿತಾಯಮಾಡಬಹುದು ಕರ್ಚುಕಡಿಮೆ ರಸಗೋಬ್ಬರ ಕಡಿಮೆ ಬಳಿಕೆ ಯಾಗುತ್ತ ಎಂದು ಇನ್ನಿತರ ರೈತರಿಗೆ ಮಾದರಿಯಾದರು. ಇದೆ ವೇಳೆ ಕೃಷಿಗೆ ಬಳಸುವ ನಾನ ರಿತಿಯ ಯಂತ್ರೂಪಕರಣಗಳನ್ನು ರೈತರಿಗೆ ಪ್ರದರ್ಶನಕ್ಕೆ ಮತ್ತು ಕರಿದಿಸಲು ವ್ಯವಸ್ಥೆಮಾಡಲಾಯಿತ್ತು.

       ದಾವಣಗರೆ ಜಿಲ್ಲೆಯಿಂದ ರೈತರು ಅಗಮಿಸಿ ರಾಮಕಾಂತ್ 150 ಎಕ್ಕರೆ ಕೂರಿಗೆ ಭತ್ತದ ಬೆಳೆಯನ್ನು ವಿಕ್ಷಸಿದರು ಬೆಳೆಯ ಸಂಪೂರ್ಣ ಮಾಹಿತಿಯನ್ನು ತಿಳಿದು ಕೊಂಡರು ಈ ಸಂದರ್ಭದಲ್ಲಿ ಮಲ್ಲೇಶ್ ರೋಗ ತಜ್ಞರು,ರಾಮಮೂರ್ತಿ,ಎ ಓ.ಗರ್ಜೆಪ್ಪ, ಸುಬಾನ್ ಸಾಬ್, ಶಿವಪ್ಪಬಾರಿಗಿಡದ ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು ನೂರಾರು ರೈತರು ಬಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link