ಕೊಟ್ಟೂರಿನಲ್ಲಿ ಶಾಂತಿಯುತ ಮತದಾನ

ಕೊಟ್ಟೂರು

     ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕೊಟ್ಟೂರು ತಾಲೂಕಿನಲ್ಲಿ ಶೇಕಡ 55 ರಿಂದ 58 ಪ್ರಮಾಣದ ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಅಧಿಕಾರಿಗಳು ತಿಳಿಸಿದರು.

    ಮತದಾನ ಬೆಳಿಗ್ಗೆ 7 ರಿಂದ ಪ್ರಾರಂಭಗೊಂಡಿತಾದರೂ ಮಧ್ಯಾಹ್ನ 3 ಗಂಟೆವರೆಗೆ ಚುರುಕುನಿಂದ ಮತದಾನ ನಡೆಯಿತು. ಸಂಜೆ 4ರ ನಂತರ ಬಿಸಿಲಿನ ತಾಪದ ಪರಿಣಾಮ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಮತಕೇಂದ್ರಕ್ಕೆ ಮತದಾರರು ಒಬ್ಬೊಬ್ಬರೇ ಬಂದು ಮತದಾನ ಸಾಗಿತು. ಕೊಟ್ಟೂರಿನಲ್ಲಿ 26 ಮತಕೇಂದ್ರಗಳಿದ್ದು ಈ ಕೇಂದ್ರಗಳಲ್ಲಿ ಯಾವುದೇ ಗೊಂದಲಗಳು ಇಲ್ಲದೇ ಮತದಾನ ಪ್ರಕ್ರಿಯೆ ನಡೆಯಿತು.

     ಯಾವ ಮತದಾನ ಕೇಂದ್ರಗಳಲ್ಲಿ ಮತ ಯಂತ್ರದ ದೋಷ ಕಂಡಬಂದ ವರದಿಯಾಗಿಲ್ಲ ಈಗಾಗಿ ಚುನಾವಣೆ ನಿರಾಂತಕವಾಗಿ
ಈ ಹೊತ್ತಿನಲ್ಲಿ ಮತದಾನ ಪ್ರತಿಕ್ರಿಯೆ ಚುರುಕಿನಿಂದ ನಡೆಯದೇ ಕೊಂಚ ನಿಧಾನಗತಿಯಲ್ಲಿ ಸಾಗಿತು ಅಷ್ಟೊತ್ತಿನಲ್ಲಿ ಗುಡುಗು ಸಮೇತ ಮಳೆ ಕೊಟ್ಟೂರು ಪಟ್ಟಣದಲ್ಲಿ ಸುರಿಯಿತು.

      ಭೂಮಿಗೆ ಮಳೆ ತಂಪು ನೀಡಲಿಲ್ಲ. ಕೊಟ್ಟೂರಿನ ಗುರುಬಸವೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಕೇಂದ್ರವೊಂದರಲ್ಲಿ ಚುನಾವಣಾ ಸಿಬ್ಬಂದಿ ಶೀಲ್ ಹಾಕುವ ನೆಪ ಹೊಡ್ಡಿ 10 ನಿಮಿಷ ಮತದಾನ ಪ್ರಾರಂಭಿಸಲು ತಡ ಮಾಡಿದರು. ಮತಯಂತ್ರದ ಯಾವುದೇ ದೋಷ ಎಲ್ಲಿಯು ಕಂಡು ಬರಲಿಲ್ಲ. ಮತ ಕೇಂದ್ರದ ಬಳಿ ಬಂದೋಬಸ್ತ ಪೋಲೀಸರು, ಸೈನಿಕರು, ಮತ್ತು ಮತದಾನ ಸಿಬ್ಬಂದಿಗೆ ಪಟ್ಟಣದ ಸೈನಿಕ ಯುವಕರ ಗುಂಪೊಂದು ಮಜ್ಜಿಗೆಯನ್ನು ಪ್ರತಿ ಮತಕೇಂದ್ರಕ್ಕೆ ತೆರಳಿ ವಿತರಿಸಿದರು.

      ಗಣ್ಯರಿಂದ ಮತದಾನ : ತಾಲೂಕಿನ ತಿಮ್ಮಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯ ಮತಕೇಂದ್ರದಲ್ಲಿ ಬಿ.ಜೆ.ಪಿ ಜಿಲ್ಲಾಧ್ಯಕ್ಷ ಪಿ.ಚನ್ನಬಸವನಗೌಡ ಮತಚಲಾಯಿಸಿದರೆ, ಕೊಟ್ಟೂರು ಪಟ್ಟಣದ ಕೆಂಗನವರ ವೀರಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಕೇಂದ್ರದಲ್ಲಿ ಜಿ.ಪಂ.ಸದಸ್ಯರಾದ ಎಂ.ಎಂ.ಜೆ.ಹರ್ಷವರ್ಧನ, ಪಿ.ಹೆಚ್.ಉಮಾಕೊಟ್ರೇಶ್ ಮಲ್ಲನಾಯಕನಹಳ್ಳಿ ಮತಕೇಂದ್ರದಲ್ಲಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಬಿ.ವೆಂಕಟೇಶ್ ನಾಯ್ಕ ಕುಟುಂಬದೊಂದಿಗೆ ಆಗಮಿಸಿ ಕೊಟ್ಟೂರಿನ ಮತಕೇಂದ್ರವೊಂದರಲ್ಲಿ ಮತ ಚಲಾಯಿಸಿದರು. ತಾಲೂಕಿನ ಉಜ್ಜಯಿನಿಯ ಮತ ಕೇಂದ್ರದಲ್ಲಿ ಉಜ್ಜಯಿನಿ ಜಗದ್ಗುರು ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮತದಾನ ಚಲಾಯಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link