ದುಬೈಗೆ ಹಾರಿದ ಕೆಪಿಎಲ್ ಬುಕ್ಕಿ..!

ಬೆಂಗಳೂರು

     ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ತೀವ್ರಗೊಳಿಸಿರುವ ಬೆನ್ನಲ್ಲೇ  ಕರ್ನಾಟಕ ಪ್ರಿಮಿಯರ್ ಲೀಗ್(ಕೆಪಿಎಲ್)ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪ್ರಮುಖ ಆರೋಪಿಯಾಗಿರುವ ಬುಕ್ಕಿ ಸಯ್ಯಾಂ ದೇಶ ಬಿಟ್ಟು ಪರಾರಿಯಾಗಿದ್ದಾನೆ.ಬುಕ್ಕಿ ಸಯ್ಯಾಂ ದುಬೈಗೆ ಹಾರಿರುವ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿದ್ದು ಆತನನ್ನು ಬಂಧಿಸಿ ಕರೆತರಲು ಪ್ರಯತ್ನ ನಡೆಸಲಾಗಿದೆ .

     ಸಯ್ಯಾಂ ಬಳಿ ಕೆಪಿಎಲ್ ಅಲ್ಲದೆ ಐಪಿಲ್ ಮ್ಯಾಚ್ ಫಿಕ್ಸಿಂಗ್‌ನ ಹಲವು ರಹಸ್ಯಗಳಿವೆ.ಹೀಗಾಗಿ ಈತನನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಲು  ನಿರ್ಧರಿಸಿತು. ವಿಚಾರಣೆಯ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆ ಆತ ವಿದೇಶಕ್ಕೆ ತೆರಳಿದ್ದಾನೆ.ಬುಕ್ಕಿ ಬಂಧನಕ್ಕಾಗಿ ಸಿಸಿಬಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ರಾಷ್ಟ್ರದ ಎಲ್ಲ ವಿಮಾನ ನಿಲ್ದಾಣಗಳಿಗೆ ಈತನ ಬಗ್ಗೆ ಮಾಹಿತಿಯನ್ನು ಸಿಸಿಬಿ ರವಾನಿಸಿದ್ದು, ಆತ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಕೋರಿದೆ.

     ಸಿಸಿಬಿ ಪೊಲೀಸರು ಬುಕ್ಕಿಗಳಾದ ಮನೋಜ್ ಯಾನೆ ಮೌಂಟಿ ದೆಹಲಿಯ ಖಾನ್ ಹಾಗೂ ವೆಂಕಿ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.ಇವರು ಕೂಡ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸಯ್ಯಾಂ ಅಂತಾರಾಷ್ಟ್ರೀಯ ಆಟಗಾರರ ಜೊತೆ ಕೂಡ ಸಂಪರ್ಕ ಹೊಂದಿದ್ದ ಎಂದು ತಿಳಿದು ಬಂದಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link